ಭಾರತ ಟೆನಿಸ್ ಮಾಜಿ ಕೋಚ್ ಅಖ್ತರ್ ಅಲಿ ನಿಧನ
ಭಾರತದ ಟೆನಿಸ್ ಆಟಗಾರ ಹಾಗೂ ಕೋಚ್ ಆಗಿ ಪ್ರಸಿದ್ದರಾಗಿದ್ದ ಅಖ್ತರ್ ಅಲಿ(81) ಉಸಿರಾಟದ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕೋಲ್ಕತಾ(ಫೆ.08): ಭಾರತ ಡೇವಿಸ್ ಕಪ್ ತಂಡದ ಮಾಜಿ ಕೋಚ್ ಅಖ್ತರ್ ಅಲಿ ಭಾನುವಾರ ದೀರ್ಘಕಾಲದ ಅನಾರೋಗ್ಯದ ಕಾರಣ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
1958ರಿಂದ 1964ರ ವರೆಗೆ 8 ಡೇವಿಸ್ ಕಪ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸುವ ಜೊತೆ ಕೋಚ್ ಸಹ ಆಗಿದ್ದರು. 1955ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿಯೇ ಅಖ್ತರ್ ಅಲಿ ಜೂನಿಯರ್ ನ್ಯಾಷನಲ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದ್ದರು. ವಿಂಬಲ್ಡನ್ ಹಾಗೂ ಫ್ರೆಂಚ್ ಓಪನ್‌ನಲ್ಲೂ ಆಡಿದ್ದ ಅಖ್ತರ್‌ಗೆ 2000ರಲ್ಲಿ ಅರ್ಜುನ ಪ್ರಶಸ್ತಿ ದೊರೆತಿತ್ತು. ಅವರ ಪುತ್ರ ಝೀಶಾನ್ ಅಲಿ, ಭಾರತ ಡೇವಿಸ್ ಕಪ್ ತಂಡದ ಹಾಲಿ ಕೋಚ್ ಆಗಿದ್ದಾರೆ.
ಸಚಿನ್ ಭಾರತ ರತ್ನಕ್ಕೆ ಅರ್ಹರಲ್ಲ, ಪವಾರ್ ಬಳಿಕ ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ನಾಯಕ!
ಕಳೆದ ರಾತ್ರಿ ತಂದೆ ಊಟ ಮಾಡಿ ಮಲಗಿದ್ದರು. ನಾನು ರಾತ್ರಿ 2 ಗಂಟೆ ಸುಮಾರಿಗೆ ತಂದೆ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. 2.30ರ ಹೊತ್ತಿಗಾಗಲೇ ನೋಡನೋಡುತ್ತಿದ್ದಂತೆ ಕೊನೆಯುಸಿರೆಳೆದರು ಎಂದು ಅಖ್ತರ್ ಅಲಿ ಸಹೋದರಿ ನಿಲೋಫರ್ ತಿಳಿಸಿದ್ದಾರೆ.
ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ವಿಜಯ್ ಅಮೃತ್‌ರಾಜ್, ಸಾನಿಯಾ ಮಿರ್ಜಾ ಸೇರಿದಂತೆ ಭಾರತದ ಅನೇಕ ಟೆನಿಸಿಗರಿಗೆ ಅಖ್ತರ್ ಮಾರ್ಗದರ್ಶನ ನೀಡಿದ್ದರು. ಅಖ್ತರ್ ಅಲಿ ನಿಧನಕ್ಕೆ ಕ್ರೀಡಾದಿಗ್ಗಜರು ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿ ಮಿಡಿದಿದ್ದಾರೆ.