ನಿಮಗಿದು ಗೊತ್ತೆ? ಸೆಕ್ಸ್ ವೇಳೆ ಕಾಂಡೋಮ್ ಹರಿದರೆ ಪುರುಷನ ಮೇಲೆ ಕೇಸೂ ಹಾಕಬಹುದು!
ಗಂಡು- ಹೆಣ್ಣು ಸಂಬಂಧ ಬಿಗಡಾಯಿಸಿ ಕೋರ್ಟಿಗೆ ಹೋದಾಗ ಅಲ್ಲಿ ಉಂಟಾಗುವ ವಾಗ್ಯುದ್ಧಗಳು ಹೆಲವು ಸಲ ಇರುವ ಕಾನೂನುಗಳಿಗೇ ಹೊಸ ಅರ್ಥಗಳನ್ನು ಸೃಷ್ಟಿಸುತ್ತವೆ. ಕೆಲವೊಮ್ಮೆ, ಇಂಥ ಕಾನೂನುಗಳಿಗೆ ಈ ಅರ್ಥವೂ ಕೊಡಬಹುದಾ ಅನ್ನಿಸಿ ಸೋಜಿಗವಾಗುತ್ತದೆ. ಹಾಗಿರುವ ಕೆಲವು ಸಂಗತಿಗಳು ಇಲ್ಲಿವೆ.
ನೀವು ನಿಮ್ಮ ಬಾಯ್‌ಫ್ರೆಂಡ್ ಜೊತೆಗೆ ಸರಸಸಲ್ಲಾಪದಲ್ಲಿ ತೊಡಗಿದ್ದೀರಿ (Having Romance with Boyfriend) ಎಂದಿಟ್ಟುಕೊಳ್ಳಿ. ಮಿಲನದ ವೇಳೆ, ನಾನು ಗರ್ಭ ಧರಿಸಬಾರದು ಎಂದು ಶರತ್ತು ಹಾಕುತ್ತೀರಿ. ಆತ ಕಾಂಡೋಮ್ ಧರಿಸುತ್ತೇನೆ ಎಂದು ಭರವಸೆ ಕೊಡ್ತಾನೆ. ಆದರೆ ಸೆಕ್ಸ್ ಬಳಿಕ ನಿಮಗ್ಯಾಕೋ ಅನುಮಾನ ಮೂಡುತ್ತದೆ. ಪರೀಕ್ಷಿಸಿ ನೋಡಿದರೆ ಕಾಂಡೋಮ್‌ನಲ್ಲಿ ತೂತು ಇದೆ. ಈತ ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಿದ್ದಾನೆ ಎಂದು ನಿಮಗೆ ಅನಿಸಿದರೆ, ಆತನ ಮೇಲೆ ವಂಚನೆ ಕೇಸ್ ಹಾಕಬಹುದು! ಹೌದು, ಇದು ನಿಜ, ಕಾನೂನು ಈ ಅವಕಾಶ ನೀಡುತ್ತದೆ.
ಇದನ್ನು 'ಸ್ಟೆಲ್ತಿಂಗ್' ಎಂದು ಕರೆಯಲಾಗುತ್ತದೆ, ಭಾರತದಲ್ಲಿ ನಿಜಕ್ಕೂ ಇದನ್ನು ಸ್ಪಷ್ಟವಾಗಿ ವಿವರಿಸಿದ ಕಾನೂನು ನಿಬಂಧನೆ ಇಲ್ಲವಾದರೂ, ಇದರ ಕಾನೂನು ವ್ಯಾಖ್ಯಾನವು ಒಪ್ಪಿಗೆಯ ಪರಿಕಲ್ಪನೆಯ ಮೇಲೆ ಅವಲಂಬಿತವಾಗಿರುತ್ತದೆ. ಲೈಂಗಿಕ ಸಂಭೋಗಕ್ಕೆ ಸಮ್ಮತಿಯನ್ನು (Consent for Sexual Intercourse) ಕಾಂಡೋಮ್ ಬಳಸುವ ಷರತ್ತಿನೊಂದಿಗೆ ನೀಡಲಾಗಿರುವುದರಿಂದ, ಒಪ್ಪಿಗೆಯಿಲ್ಲದೆ ಅದನ್ನು ತೆಗೆದು ಹಾಕುವುದು ಅಥವಾ ತೂತು ಮಾಡಿರುವುದು ಮೂಲ ಸಮ್ಮತಿಯನ್ನು ಅಮಾನ್ಯಗೊಳಿಸುತ್ತದೆ, ಇದರಿಂದಾಗಿ ಅದು ಅತ್ಯಾಚಾರ ಎನಿಸುತ್ತದೆ.
ಇಂಥ ಸಂಗತಿಗಳನ್ನು ತಾನ್ಯಾ ಅಪ್ಪಚ್ಚು ಕೌಲ್ ಎಂಬ ಲಾಯರ್ ನೀಡುತ್ತ ಹೋಗುತ್ತಾಳೆ. ಈಕೆ yourinstalawyer ಎಂಬ ಅಕೌಂಟ್ ಹೊಂದಿದ್ದಾಳೆ. ದಿವಾಸ್ ಗುಪ್ತಾ ಎಂಬಾತ ನಡೆಸಿಕೊಡುವ ಪಾಡ್‌ಕ್ಯಾಸ್ಟ್‌ಗಳಲ್ಲಿ ಕಾಣಿಸಿಕೊಂಡು ಈಕೆ ಇಂಥ ಹಲವು ಸ್ವಾರಸ್ಯಕರ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದ್ದಾಳೆ. ಮುಖ್ಯವಾಗಿ ಹೆಣ್ಣು- ಗಂಡಿನ ಸಂಬಂಧದ ನಡುವೆ ಕಾಡುವ ಹಲವು ಕಾನೂನು ಸಂಗತಿಗಳು ಬಗ್ಗೆ. ಉದಾಹರಣೆ, ಬಾಸ್- ಸೆಕ್ರೆಟರಿ ಸಂಬಂಧದಲ್ಲಿ ನುಸುಳುವ ಸೆಕ್ಸ್. ಇಲ್ಲಿ ಬಾಸ್ ಆಕೆಗೆ ಆಮಿಷ ಒಡ್ಡಿ ಅದರೆ ನಿನಗೆ ಪ್ರಮೋಷನ್ ಕೊಡ್ತೀನಿ ಎಂಬಂಥ ಆಮಿಷ ಒಡ್ಡಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರೆ ಅದು ಅಪರಾಧ. ಆದರೆ ಆಕೆಯೂ ಸಮ್ಮತಿಸಿ ಇಬ್ಬರೂ ಹ್ಯಾಪಿಯಾಗಿ ಈ ಸಂಬಂಧ ನಡೆಸಿದ್ದರೆ ಅದು ಅಪರಾಧ ಎನಿಸುವುದಿಲ್ಲ.
ಅಂಥ ಇನ್ನೊಂದು ವಿಚಾರ, ಗಂಡನ ಆಸ್ತಿಯಲ್ಲಿ ಹೆಂಡತಿಗೆ ಪಾಲು ಹೇಗೆ ಎಂಬುದು. ತುಂಬಾ ಮಂದಿ ಪತ್ನಿಯರು ಗಂಡನ ಆಸ್ತಿಯೆಲ್ಲ ತನ್ನದೂ ಹೌದು ಎಂದುಕೊಂಡಿರುತ್ತಾರೆ. ಆದರೆ ಅದು ನಿಜವಲ್ಲ. ಒಂದು ವೇಳೆ ಅದು ಇಬ್ಬರ ಜಾಯಿಂಟ್ ಹೆಸರಿನಲ್ಲಿದ್ದರೆ ಮಾತ್ರ ಆಕೆಗೆ ಸಮಾನ ಪಾಲು. ಇಲ್ಲವಾದರೆ ಅದೆಲ್ಲ ಆತನಿಗೇ ಸೇರಿದ್ದು. ಗಂಡ ಬದುಕಿರುವವರೆಗೂ ಆತನ ಆಸ್ತಿಯಲ್ಲಿ ಮಹಿಳೆಯರಿಗೆ ಯಾವುದೇ ಹಕ್ಕಿಲ್ಲ. ಪತಿ ಸತ್ತರೆ, ಹೆಂಡತಿ ಅವನ ಕಾನೂನುಬದ್ಧ ಮೊದಲ ಉತ್ತರಾಧಿಕಾರಿಯಾಗುತ್ತಾಳೆ. ಆದರೆ ಗಂಡನ ಇಚ್ಛೆ ಬೇರೆ ರೀತಿಯಲ್ಲಿ ಇದ್ದರೆ, ಆಗ ಹೆಂಡತಿಗೆ ಏನೂ ಸಿಗುವುದಿಲ್ಲ.
ಲೈಂಗಿಕ ಕ್ರಿಯೆ ಉತ್ತುಂಗದಲ್ಲಿರುವಾಗ ಕಾಂಡೋಮ್ ತೆಗೆದ ವ್ಯಕ್ತಿಗೆ 4 ವರ್ಷ ಜೈಲು ಶಿಕ್ಷೆ!
ಹಾಗಾದರೆ ಡೈವೋರ್ಸ್ ಸಂದರ್ಭದಲ್ಲಿ ಸಿಗುವ ಆಸ್ತಿ? ಅದು ಆಕೆಯ ಹೆಸರು ಇದ್ದರೆ ಮಾತ್ರ. ಇಲ್ಲವಾದರೆ, ಪರಿಹಾರ ಮಾತ್ರ ಸಿಗುತ್ತದೆ. ವಿಚ್ಛೇದನ ಕಾನೂನುಗಳು ಮತ್ತು ಕೌಟುಂಬಿಕ ದೌರ್ಜನ್ಯ ಕಾನೂನುಗಳು ಸಂಪೂರ್ಣವಾಗಿ ವಿಭಿನ್ನ. ವಿಚ್ಛೇದನ ಕಾನೂನು ಜೀವನಾಂಶವನ್ನು ಒಳಗೊಂಡಿದೆ. ಇದು ಆಕೆಗೆ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ.
ಇನ್ನೊಂದು ವಿಚಾರ ಎಂದರೆ ಸಮ್ಮತಿ ನೀಡಿ ಸೆಕ್ಸ್ ಹೊಂದಿ, ನಂತರ ರೇಪ್ ಕೇಸ್ ದಾಖಲಿಸುವುದು, ಇಂದು ಇಂಥ ಕೇಸ್‌ಗಳು ಹೆಚ್ಚುತ್ತಿವೆ ಎನ್ನುತ್ತಾಳೆ ಆಕೆ. ಮದುವೆಯಾಗುತ್ತೇನೆ ಎಂದು ಭರವಸೆ ನೀಡಿ ಆಕೆಯೊಡನೆ ಸೆಕ್ಸ್ ಮಾಡಿ, ನಂತರ ಮದುವೆಯಾಗುವುದಿಲ್ಲ ಎಂದು ಹೇಳುತ್ತಿದ್ದರೆ ಆಗ ಅದು ಅಪರಾಧವಾಗುತ್ತದೆ. ಆದರೆ ಈ ಅಪರಾಧವನ್ನು ಕೋರ್ಟ್ ಮುಂದೆ ಪ್ರೂವ್ ಮಾಡಬೇಕಾಗುತ್ತದೆ. ತಾನು ಮದುವೆಯಾಗುತ್ತೇನೆ ಎಂದು ಆಶ್ವಾಸನೆ ನೀಡಿಯೇ ಇಲ್ಲ ಎಂದು ಗಂಡು ವಾದಿಸಿ ಗೆದ್ದರೆ ಈಕೆಯ ರೇಪ್ ಕೇಸ್ ಬಿದ್ದುಹೋಗುತ್ತದೆ. ಹೀಗಾಗಿ, ಗಂಡು ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ ಎಂಬುದಕ್ಕೆ ಸಾಕ್ಷಯನ್ನು ಇಟ್ಟುಕೊಂಡಿರುವುದೂ ಈಕೆಗೆ ಅನಿವಾರ್ಯ!
ಜೈಲಲ್ಲೇ ಸಂಗಾತಿ ಜೊತೆ ಸೆಕ್ಸಿಗಿರುತ್ತೆ ಅವಕಾಶ.. ಅಲ್ಲಿಯೇ ಇರುತ್ತೆ ವಿಶೇಷ ರೂಮ್