ಚೀನಾ ಅಲ್ಟ್ರಾ ಮ್ಯಾರಾಥಾನ್ ವೇಳೆ 21 ಓಟಗಾರರ ಸಾವು!
* ಮ್ಯಾರಾಥಾನ್‌ನಲ್ಲಿ ಭಾಗವಹಿಸಿದ್ದ 21 ಓಟಗಾರರ ಸಾವು
* ಚೀನಾದಲ್ಲಿ ನಡೆದ ದುರ್ಘಟನೆಗೆ ವ್ಯಾಪಕ ಖಂಡನೆ
* 172 ಮಂದಿ ಭಾಗವಹಿಸಿದ್ದ ಮ್ಯಾರಾಥಾನ್‌ನಲ್ಲಿ 21 ಮಂದಿ ಸಾವು
ಬೀಜಿಂಗ್(ಮೇ.24): ಚೀನಾದ ಬೇಯಿನ್ ಸಿಟಿಯಲ್ಲಿರುವ ಯೆಲ್ಲೋ ರಿವರ್ ಸ್ಟೋನ್ ಅರಣ್ಯ ಪ್ರದೇಶದಲ್ಲಿ ನಡೆದ 100 ಕಿ.ಮೀ ದೂರದ ಅಲ್ಟ್ರಾ ಮ್ಯಾರಾಥಾನ್ ಓಟದ ವೇಳೆ ಹವಾಮಾನದಲ್ಲಿ ಆದ ದಿಢೀರ್ ಬದಲಾವಣೆಯಿಂದಾಗಿ 21 ಓಟಗಾರರು ನಿಧನರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಶನಿವಾರ(ಮೇ.22) ನಡೆದ ಸ್ಪರ್ಧೆಯ ವೇಳೆ ಆಲಿಕಲ್ಲು ಸಹಿತ ಭಾರೀ ಮಳೆ, ಚಳಿ ಹಾಗೂ ಗಾಳಿಯಿಂದಾಗಿ ಘಟನೆ ನಡೆದಿದೆ. ಓಟದಲ್ಲಿ 172 ಸ್ಪರ್ಧಿಗಳು ಪಾಲ್ಗೊಂಡಿದ್ದರು, ಅವರ ಪೈಕಿ 151 ಮಂದಿ ಸುರಕ್ಷಿತರಾಗಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರು ಅನುಭವಿ ಓಟಗಾರರಾಗಿದ್ದರು ಎನ್ನಲಾಗಿದೆ.
ಕೊರೋನಾದಿಂದ ಕನಸು ನುಚ್ಚುನೂರು; ದಿನಗೂಲಿಯಿಂದ ಸಾಗುತ್ತಿದೆ ಭಾರತ ಫುಟ್ಬಾಲ್ ಆಟಗಾರ್ತಿ ಜೀವನ!
ಈ ದುರ್ಘಟನೆಯ ಕುರಿತಂತೆ ಚೀನಾದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಟೂರ್ನಿಯ ಆಯೋಜನೆಯಲ್ಲಿನ ವೈಫಲ್ಯದ ಕುರಿತಂತೆ ಸ್ಥಳೀಯ ಸರ್ಕಾರವಾದ ಬೈಯಿನ್ ಸರ್ಕಾರದ ವಿರುದ್ದ ನೆಟ್ಟಿಗರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಸ್ಥಳೀಯ ಸರ್ಕಾರವು ಹವಾಮಾನ ಪರಿಸ್ಥಿತಿಯನ್ನು ಏಕೆ ಅವಲೋಕಿಸಿರಲಿಲ್ಲ. ಒಂದು ವೇಳೆ ಹವಾಮಾನ ವರದಿಯನ್ನು ಗಮನಿಸಿದ್ದರೆ ಈ ರೀತಿಯ ಅವಘಡ ಸಂಭವಿಸುತ್ತಿರಲಿಲ್ಲ ಎಂದು ಒಬ್ಬರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.