ಮೈಸೂರು ಮೂಲದ 17 ವರ್ಷದ ಡಿಯೊನ್ ಗೌಡ, ಫಾರ್ಮುಲಾ ರೀಜಿಯನಲ್ ಯುರೋಪಿಯನ್ ಚಾಂಪಿಯನ್‌ಶಿಪ್ (FRECA) ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ಗುರಿ ಫಾರ್ಮುಲಾ 1 ತಲುಪುವುದು ಮಾತ್ರವಲ್ಲ, ಮುಂದಿನ ತಲೆಮಾರಿಗೆ ದಾರಿ ತೋರಿಸುವುದೂ ಆಗಿದೆ.
ಬೆಂಗಳೂರು: 2000ರ ಮೊದಲ ದಶಕದಲ್ಲಿ ಭಾರತೀಯ ಮೋಟಾರ್ ಸ್ಪೋರ್ಟಿಂಗ್ನಲ್ಲಿ ಜಾಗತಿಕ ಮಟ್ಟದಲ್ಲಿ ನಾರೈನ್ ಕಾರ್ತಿಕೇಯನ್ ಹಾಗೂ ಕರೂಣ್ ಚಂಡೂಕ್ ಅವರ ಹೆಸರುಗಳು ಸದ್ದು ಮಾಡಿದ್ದವು. ಅದರೆ ಅವರು ದೀರ್ಘಕಾಲ ಈ ಕ್ಷೇತ್ರದಲ್ಲಿ ಹೆಜ್ಜೆಗುರುತುಗಳನ್ನು ದಾಖಲಿಸಲು ಸಾಧ್ಯವಾಗಲಿಲ್ಲ. ಆದರೆ ಈಗ ಸನ್ನಿವೇಶವೇ ಬದಲಾಗುತ್ತಿದೆ. ಭಾರತೀಯ ಹೊಸ ತಲೆಮಾರಿನ ಚಾಲಕರು ಫಾರ್ಮೂಲಾ ರೇಸ್‌ನಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ದಾಖಲಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇಂತಹವರ ಪೈಕಿ ನಮ್ಮ ಮೈಸೂರು ಮೂಲದ ಡಿಯೊನ್ ಗೌಡ ಅವರ ಹೆಸರು ಮುಂಚೂಣಿಯಲ್ಲಿದೆ.
ಹೌದು, ಮೈಸೂರು ಮೂಲದ 17 ವರ್ಷದ ಡಿಯೊನ್ ಗೌಡ, ಭಾರತೀಯ ಮೋಟಾರ್‌ಸ್ಪೋರ್ಟ್‌ನಲ್ಲಿ ಹೊಸ ಅಧ್ಯಾಯವನ್ನು ಬರೆಯುವತ್ತ ದಾಪುಗಾಲಿಡುತ್ತಿದ್ದಾರೆ. ಸಿಂಗಪೂರಿನಲ್ಲಿ ಕಾರ್ಟಿಂಗ್ ಆರಂಭಿಸಿದ ಡಿಯೊನ್, ಈಗ ಫಾರ್ಮುಲಾ ರೀಜಿಯನಲ್ ಯುರೋಪಿಯನ್ ಚಾಂಪಿಯನ್‌ಶಿಪ್ (FRECA) ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರು ವಾನ್ ಅಮರ್ಸ್‌ಫೋರ್ಟ್ ರೇಸಿಂಗ್ ತಂಡದೊಂದಿಗೆ ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದಾರೆ, ಇದು ಫಾರ್ಮುಲಾ 1 ಗೆ ಅರ್ಹತೆ ಪಡೆಯುವ ಪ್ರಮುಖ ಘಟ್ಟವಾಗಿದೆ.
ಡಿಯೊನ್ ಗೌಡ ಅವರ ರೇಸಿಂಗ್ ಪ್ರಯಾಣವು ಸಿಂಗಪೂರಿನ ಪ್ಯಾಡಾಕ್‌ಗಳಲ್ಲಿ ಪ್ರಾರಂಭವಾಯಿತು, ಆದರೆ ಅವರ ಕನಸು ಫಾರ್ಮುಲಾ 1 ಅನ್ನು ಗುರಿಯಾಗಿಸಿಕೊಂಡಿವೆ. ಅವರು ಬ್ರಿಟಿಷ್ F4 ಚಾಂಪಿಯನ್‌ಶಿಪ್‌ನಲ್ಲಿ ಡಬಲ್ ಪೋಲ್ ಮತ್ತು ಚಾಂಪಿಯನ್ ಸ್ಥಾನ ಗಳಿಸಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಇತ್ತೀಚೆಗೆ, ಮಿಸಾನೋದಲ್ಲಿ ನಡೆದ FRECA ರೇಸ್‌ನಲ್ಲಿ ಅವರು ರುಕಿ ವಿಭಾಗದಲ್ಲಿ ಗೆಲುವು ಸಾಧಿಸಿದ್ದಾರೆ.
ಏನಿದು FRECA?
FRECA ಒಂದು ಕೌಂಟಿಂಗ್ ವೇದಿಕೆ ಅಲ್ಲ. ಟಾಟೂಸ್ T-318 ಚಾಸಿಸ್ ಮತ್ತು ರೆನಾಲ್ಟ್ ಪವರ್‌ಟ್ರೇನ್‌ಗಳು ಹತ್ತು ಯುರೋಪಿಯನ್ ಸರ್ಕ್ಯೂಟ್‌ಗಳಲ್ಲಿ ಹೆಚ್ಚಿನ ವೇಗದ, ಹೆಚ್ಚಿನ-ಹಂತದ ರೇಸಿಂಗ್‌ಗೆ ಅವಕಾಶ ನೀಡುತ್ತವೆ. ಇದು ಭವಿಷ್ಯದ F1 ಚಾಲಕರ ಕ್ಷೇತ್ರವಾಗಿದೆ - ಅಲ್ಲಿ ಕಚ್ಚಾ ವೇಗವು ತಾಂತ್ರಿಕ ಮೆರುಗನ್ನು ಪೂರೈಸುತ್ತದೆ ಮತ್ತು ಕ್ರೀಡೆಯ ಉನ್ನತ ಶ್ರೇಣಿಯಿಂದ ಫಲಿತಾಂಶಗಳು ಗಮನಿಸಲ್ಪಡುತ್ತವೆ. FRECA ಇದು ವೇಗ ಮತ್ತು ಕೌಶಲ್ಯವನ್ನು ಒಟ್ಟಿಗೆ ಅಳೆಯುವ ವೇದಿಕೆ ಎನಿಸಿಕೊಂಡಿದೆ.
ಆರ್‌ಎಫ್4 ಗೆಲುವಿನಿಂದ ಮಿಸಾನೋವರೆಗೆ
ಬ್ರಿಟಿಷ್ F4 ಚಾಂಪಿಯನ್‌ಶಿಪ್‌ನ 3ನೇ ಸುತ್ತಿನಲ್ಲಿ ಡಬಲ್ ಪೋಲ್ ಮತ್ತು ಗೆಲುವು ಸಾಧಿಸಿದ ಅನುಭವವೇ ಅವರ ವೃತ್ತಿಜೀವನದ ಪ್ರಮುಖ ತಿರುವು ಎನಿಸಿಕೊಂಡಿತು. ಈ ವರ್ಷ ಮಿಸಾನೋದಲ್ಲಿ ನಡೆದ ಮೊದಲ ಸುತ್ತಿನಲ್ಲಿ ರುಕಿ ವಿಭಾಗದ ಗೆಲುವು ಕೂಡ ಅವರ ಸಾಧನೆಗೆ ಮತ್ತೊಂದು ಮೈಲಿಗಲ್ಲು. ಇತ್ತೀಚೆಗೆ ಸ್ಪಾ-ಫ್ರಾಂಚೊಂಪ್ಸ್‌ನಲ್ಲಿ ನಡೆದ 2ನೇ ಸುತ್ತು ಯಶಸ್ವಿಯಾಗಿ ಪೂರೈಸಿದ ನಂತರ, ಇದೇ ತಿಂಗಳಲ್ಲಿ GB3 ಚಾಂಪಿಯನ್‌ಶಿಪ್‌ನ 3ನೇ ಸುತ್ತಿಗಾಗಿ ಅವರು ಮತ್ತೆ ಹಾಜರಾಗಲಿದ್ದಾರೆ.
ವೃತ್ತಿ ದೃಷ್ಟಿಕೋನ:
ಡಿಯೊನ್ ರೇಸಿಂಗ್ ಅನ್ನು ಒಂದು ಪೂರ್ಣಕಾಲಿಕ ಉದ್ಯೋಗದಂತೆ ನೋಡುತ್ತಾರೆ. ಪ್ರತಿ ವಾರಾಂತ್ಯವೂ ತಮ್ಮ ಕೋಚ್ ಜೊತೆ ತಮ್ಮ ಕಾರ್ಯಕ್ಷಮತೆ ವಿಶ್ಲೇಷಣೆ ಮಾಡುತ್ತಾರೆ. “ಪ್ರತಿ ರೇಸ್‌ಗೂ ಮೊದಲು ಕೆಲವು ಮುಖ್ಯ ಕೌಶಲ್ಯಗಳಲ್ಲಿ ಸುಧಾರಣೆಗಾಗಿ ಕಾರ್ಯಮಾಡುತ್ತೇವೆ,” ಎನ್ನುತ್ತಾರೆ ಡಿಯೊನ್ ಗೌಡ.
ಭಾವಿ ಕನಸುಗಳು
ತಮ್ಮ ಭವಿಷ್ಯದ ಕನಸುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ಡಿಯೊನ್ ಗೌಡ, “ರೇಸಿಂಗ್ ಮಾಡದಿದ್ದರೆ, ನಾನು ಅಪ್ಪನ ಜೊತೆ ವ್ಯವಹಾರವೊಂದರಲ್ಲಿ ಇರಬಹುದಿತ್ತು,” ಎಂದಿದ್ದಾರೆ. ನನ್ನ ಗುರಿ ಫಾರ್ಮುಲಾ 1 ಗೆ ಕೇವಲ ತಲುಪುವುದಷ್ಟೇ ಅಲ್ಲ, ಮುಂದಿನ ತಲೆಮಾರಿಗೆ ದಾರಿ ತೋರಿಸೋದು ತಮ್ಮ ಗುರಿ ಎಂದು ಮೈಸೂರು ಮೂಲದ ರೇಸರ್ ಸ್ಪಷ್ಟಪಡಿಸಿದ್ದಾರೆ.
ಡಯಾನ್ ಗೌಡಾ ಅವರ ಈ ಪ್ರಯಾಣವು ಭಾರತೀಯ ಮೋಟಾರ್‌ಸ್ಪೋರ್ಟ್‌ಗೆ ಹೊಸ ದಿಕ್ಕು ನೀಡುತ್ತಿದೆ. ಅವರು ತಮ್ಮ ಸಾಧನೆಯ ಮೂಲಕ ಮುಂದಿನ ಪೀಳಿಗೆಯ ಭಾರತೀಯ ಚಾಲಕರಿಗೆ ಪ್ರೇರಣೆಯಾಗುತ್ತಿದ್ದಾರೆ.
