ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ಪಾಕಿಸ್ತಾನದ ಶೋಯೆಬ್ ಮಲಿಕ್ ಜೊತೆಗಿನ ವಿಚ್ಛೇದನದ ನಂತರ ದುಬೈನಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಆಧ್ಯಾತ್ಮಿಕತೆಯತ್ತ ಒಲವು ತೋರುವಂತೆ ನೋವಿನ ಪೋಸ್ಟ್ ಮಾಡಿದ್ದಾರೆ. ಅಲ್ಲಾಹನಲ್ಲಿ ಮೊರೆ ಹೋಗುವುದು ಮನುಷ್ಯರ ಸಾಂತ್ವನಕ್ಕಿಂತ ಉತ್ತಮವೆಂದು ಹೇಳಿದ್ದಾರೆ. ವಿಚ್ಛೇದನ ಜೀವನದ ಅಂತ್ಯವಲ್ಲ ಎಂದು ಈ ಹಿಂದೆ ಹೇಳಿಕೆ ನೀಡಿದ್ದರು. ಸಾನಿಯಾ ಅವರ ಈ ನಡೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಒಮ್ಮೆ ಟೆನ್ನಿಸ್ ಅಂಗಳದಲ್ಲಿ ಸತತವಾಗಿ ಗೆಲ್ಲುವ ಮೂಲಕದ ದೇಶದ ಕೀರ್ತಿಯನ್ನ ಹೆಚ್ಚಿಸಿ ಸುದ್ದಿಯಾಗಿದ್ದರು. ಆದರೆ ಯಾವಾಗ ಈಕೆ ಪಾಕಿಸ್ತಾನದ ಸೊಸೆಯಾದರೂ ಅಲ್ಲಿಂದಲೇ ಶುರುವಾಯ್ತು ಇವರ ಜೀವನದ ದೊಡ್ಡ ತಿರುವು! ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ಮದುವೆಯಾಗಿ ಪಡಬಾರದ ಕಷ್ಟ ಪಟ್ಟು ಈಗ ಡಿವೋರ್ಸ್ ಪಡೆದುಕೊಂಡಿರುವ ಈ ಮಾಜಿ ತಾರೆ, ಸದ್ಯ ಭಾರತ ಹಾಗೂ ಪಾಕಿಸ್ತಾನ ಎರಡೂ ಬೇಡ ಎಂದುಕೊಂಡು ದುಬೈನಲ್ಲಿ ಸೆಟಲ್ ಆಗಿದ್ದಾರೆ. ಅಲ್ಲಿ ತಾವು ಐಷಾರಾಮಿ ಜೀವನವನ್ನು ಕಳೆಯುತ್ತಿರುವಂತೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇದ್ದಾರೆ.

ಕೆಲ ದಿನಗಳ ಹಿಂದೆ ಸಾನಿಯಾ ಮಿರ್ಜಾ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದರು. ಅವರು ಬೇರೊಬ್ಬರ ಜೊತೆ ಡೇಟಿಂಗ್​ನಲ್ಲಿ ಇದ್ದಾರೆ. ದುಬೈನಲ್ಲಿ ಯಾರದ್ದೋ ಜೊತೆ ಡೇಟ್ ಮಾಡ್ತಿದ್ದಾರೆ ಎಂದೆಲ್ಲಾ ಸುದ್ದಿ ಹರಡಿದೆ. ಸಾನಿಯಾ ಜೊತೆಗಿನ ವಿಚ್ಛೇದನದ ನಂತರ ಶೋಯೆಬ್ ಮಲಿಕ್ ಪಾಕಿಸ್ತಾನದ ಜನಪ್ರಿಯ ನಟಿ ಸನಾ ಜಾವೇದ್ ಅವರನ್ನ ವಿವಾಹವಾದರು. ಮದುವೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರು. ಮದುವೆ ಮುನ್ನ ಅಂದ್ರೆ ಸಾನಿಯಾ ಜೊತೆಯಲ್ಲಿದ್ದಾಗಲೇ ಶೋಯೆಬ್, ಈ ನಟಿ ಜೊತೆ ಕಾಲ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಹರಿದಾಡಿತ್ತು. ಬಳಿಕ ಮಾತು ನಿಜವಾಗಿ ಸಾನಿಯಾ ಪ್ರತ್ಯೇಕವಾಗಿದ್ದಾರೆ. ಈಗ ಅವರ ಬಾಳಲ್ಲಿ ಹೊಸಬರ ಎಂಟ್ರಿ ಆಗಲಿ ಎನ್ನುವುದು ಫ್ಯಾನ್ಸ್​ ಆಸೆ.

ಎರಡು ವರ್ಷಗಳ ಪ್ರೀತಿ- ವಾಟ್ಸ್​ಆ್ಯಪ್​ ಮೂಲಕ ಮದ್ವೆ! 12ನೇ ಕ್ಲಾಸ್​ ವಿದ್ಯಾರ್ಥಿಗಳ ಲವ್​ ಸ್ಟೋರಿ ಕೇಳಿ...

ಆದರೆ, ಇದರ ಮಧ್ಯೆಯೇ ಸಾನಿಯಾ ನೋವಿನ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು, ಸಂಕಷ್ಟದ ಕ್ಷಣಗಳಲ್ಲಿ ಅಲ್ಲಾಹನ ಕಡೆಗೆ ತಿರುಗುವುದು ಜನರಿಂದ ಸಾಂತ್ವನ ಪಡೆಯುವುದಕ್ಕಿಂತ ಹೆಚ್ಚು ತೃಪ್ತಿಕರವಾಗಿದೆ ಎಂದು ಹೇಳಿದ್ದಾರೆ. "ಅಲ್ಲಾಹನ ಮುಂದೆ ಪ್ರಾರ್ಥನಾ ಚಾಪೆಯ ಹಾಸಿಕೊಂಡು ಅಳುವುದು, ಮನುಷ್ಯನ ಮುಂದೆ ಅಳುವುದಕ್ಕಿಂತ ಶತಕೋಟಿ ಪಟ್ಟು ಉತ್ತಮ" ಎಂದಿದ್ದಾರೆ. ಈ ಮೂಲಕ, ಟೆನೀಸ್​ ತಾರೆ, ಆಧ್ಯಾತ್ಮಿಕತೆಯತ್ತ ತಿರುಗುತ್ತಿದ್ದಾರೆಯೇ ಎನ್ನುವ ಸಂದೇಹ ಕಾಡುತ್ತಿದೆ. ಇದು ಪ್ರಾರ್ಥನೆ ಮತ್ತು ನಂಬಿಕೆಯಲ್ಲಿ ಒಬ್ಬರು ಕಂಡುಕೊಳ್ಳಬಹುದಾದ ಆಳವಾದ ಶಾಂತಿ ಮತ್ತು ಅಚಲ ಬೆಂಬಲವನ್ನು ಎತ್ತಿ ತೋರಿಸುತ್ತದೆ, ದೈವಿಕ ಅವಲಂಬನೆ ನಿಜವಾದ ಚಿಕಿತ್ಸೆ ಮತ್ತು ಭರವಸೆಯನ್ನು ನೀಡುತ್ತದೆ ಎಂದು ಈಕೆಯ ಬೆಂಬಲಿಗರು ತಿಳಿಸುತ್ತಿದ್ದಾರೆ. 

ಡಿವೋರ್ಸ್​ ಬಳಿಕ, ಅದರ ಕುರಿತು ಈಚೆಗಷ್ಟೇ ಮಾತನಾಡಿದ್ದ ಸಾನಿಯಾ, ವಿಚ್ಛೇದನ ಎಂದರೆ ಜೀವನ ನಿಂತುಹೋಗಿದೆ ಎಂದಲ್ಲ. ಇದೊಂದು ದುರದೃಷ್ಟಕರ ಘಟನೆಯಾದರೂ ನಂತರ ಯಾರ ಬದುಕೂ ಕತ್ತಲಾಗಬಾರದು ಎಂದಿದ್ದರು. ಇದರಿಂದ ಸಾನಿಯಾ ಮತ್ತೊಂದು ಮದುವೆಯಾಗುವುದಾಗಿಯೇ ಹೇಳಲಾಗುತ್ತಿದೆ. ದುಬೈನಲ್ಲಿ ಕೂಡ ಇವರು ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಆದರೆ ಏಕಾಏಕಿಯಾಗಿ ಸಾನಿಯಾ ಈ ರೀತಿ ಪೋಸ್ಟ್​ ಹಾಕುವ ಮೂಲಕ ಅಭಿಮಾನಿಗಳಲ್ಲಿ ಆತಂಕ ಮೂಡಿಸುತ್ತಿದ್ದಾರೆ. 

ನಿಮ್ಮ ಮಕ್ಕಳು ಶಾಲೆಯಲ್ಲಿ ಎಷ್ಟು ಸೇಫ್​? ಅವರಿಗಾಗಿ ಟೈಂ ಕೊಡ್ತಿದ್ದೀರಾ? ಸಾವಿನ ಹಾದಿ ತುಳಿದ ಈತನ ಕಥೆ ಕೇಳಿ...

View post on Instagram