ಮಹತ್ವದ ನಿರ್ಧಾರ ಪ್ರಕಟಿಸಿದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಕೋವಿಡ್ ಸೋಂಕು ದೃಢಪಟ್ಟ ಕ್ರೀಡಾಪಟುಗಳು ಆತಂಕ ಪಡಬೇಕಿಲ್ಲ ಸೋಂಕಿತ ಕ್ರೀಡಾಪಟುಗಳನ್ನು ಅನರ್ಹಗೊಳಿಸಲ್ಲ ಎಂದು IOC

ಟೊಕಿಯೋ(ಜೂ.15): ಕೊರೋನಾ ವೈರಸ್ ಕಾರಣ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ವಿಳಂಬವಾಗಿ ಆರಂಭಗೊಳ್ಳುತ್ತಿದೆ. ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಭಾರತ ಸೇರಿದಂತೆ 205 ರಾಷ್ಟ್ರಗಳು ಪಾಲ್ಗೊಳ್ಳುತ್ತಿದೆ. ಕೊರೋನಾ ಕಾರಣ ಆತಂಕಗೊಂಡಿರುವ ಕ್ರೀಡಾಪಟುಗಳ ಪರವಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ( IOC) ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕೋವಿಡ್ ಸೋಂಕು ದೃಢಪಟ್ಟ ಕ್ರೀಡಾಪಟುಗಳನ್ನು ಅನರ್ಹಗೊಳಿಸುವುದಿಲ್ಲ ಎಂದು IOC ಸ್ಪಷ್ಟಪಡಿಸಿದೆ.

ಟೋಕಿಯೋ ಒಲಿಂಪಿಕ್ಸ್‌: ಭಾರತ ಪ್ರತಿನಿಧಿಸಲಿರುವ ಏಕೈಕ ವೇಟ್‌ ಲಿಫ್ಟರ್‌ ಮೀರಬಾಯಿ ಚಾನು..!...

ಕೊರೋನಾ ಸಾಂಕ್ರಾಮಿಕ ರೋಗದ ನಡುವೆ ಟೂರ್ನಿ ಆಯೋಜನೆ ಮಾಡಲಾಗುತ್ತಿದೆ. ಹೀಗಾಗಿ ಕೊರೋನಾ ಭೀತಿ ಎಲ್ಲರಲ್ಲೂ ಇದೆ. ಆದರೆ ಕ್ರೀಡಾಪಟುಗಳ ಆತಂಕ ಪಡಬೇಕಿಲ್ಲ, ಸೋಂಕು ದೃಢಪಟ್ಟ ಕ್ರೀಡಾಪಟುಗಳು ಅನರ್ಹರಾಗುವುದಿಲ್ಲ. ಟೆನಿಸ್, ಬ್ಯಾಡ್ಮಿಂಟನ್‌ನಂತ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೊರೋನಾ ಕಾರಣ ಸ್ಪರ್ಧಿಗೆ ಪಾಲ್ಗೊಳ್ಳಲು ಸಾಧ್ಯವಾಗದಿದ್ದರೆ, ಬೆಳ್ಳಿ ಪದಕ ನೀಡಲಾಗುವುದು IOC ನಿರ್ದೇಶಕ ಕಿಟ್ ಮೆಕ್‌ಕಾನ್ನೆಲ್ ಹೇಳಿದ್ದಾರೆ.

ಟೊಕಿಯೊ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಕೊರೋನಾದಿಂದ ದೂರವಿಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಈ ಹಿಂದಿನ ಒಲಿಂಪಿಕ್ಸ್ ಕ್ರೀಡಾಕೂಟಗಳಿಗಿಂತ ಕೊಂಚ ಭಿನ್ನವಾಗಿರಲಿದೆ. ಕೆಲ ನಿಯಮದಲ್ಲಿ ಬದಲಾವಣೆಗಳಿವೆ. ಇದಕ್ಕಾಗಿ IOC ಸ್ಪೋರ್ಟ್ಸ್ ಸ್ಪೆಸಿಫಿಕ್ ರೆಗ್ಯುಲೇಷನ್ಸ್ ನೀತಿ ಜಾರಿಗೊಳಿಸಿದೆ. 

'ಭಾವನೆಗೆ ಧಕ್ಕೆ ತರಲ್ಲ' ಚೀನಾ ಕಂಪನಿಯ ಪ್ರಾಯೋಜಕತ್ವ ಕೈಬಿಟ್ಟ ಭಾರತ...

ಕೊರೋನಾ ವೈರಸ್‌ನಿಂದ ಕ್ರೀಡಾಪಟುಗಳನ್ನು ಮುಕ್ತರಾಗಿಸಲು ಕ್ರಮ ಕೈಗೊಳ್ಳಲಾಗಿದೆ. ಸ್ಪರ್ಧೆಯ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಸ್ಪರ್ಧೆಯ ವೇಳಾಪಟ್ಟಿ ಮತ್ತು ಸ್ವರೂಪಗಳನ್ನು ಯೋಜಿಸಿದಂತೆ ಮಾಡಲು ಎಲ್ಲಾ ಕ್ರಮ ಕೈಗೊಂಡಿದ್ದೇವೆ. ಕೊರೋನಾದಿಂದ ಸ್ಪರ್ಧೆಯಲ್ಲಿ ಭಾಗವಿಸಲು ಸಾಧ್ಯವಾಗದಿದ್ದರೆ, ಆ ಕ್ರೀಡಾಪಟುವನ್ನು ಅನರ್ಹ ಬದಲು ಆರಂಭಿಸಲಿಲ್ಲ (did not start) ಎಂದು ನಮೂದಿಸಲಿದ್ದೇವೆ ಎಂದು ಕಿಟ್ ಮೆಕ್‌ಕಾನ್ನೆಲ್ ಹೇಳಿದ್ದಾರೆ.

ಕ್ರೀಡಾಪಟು ಪಂದ್ಯದಿಂದ ಹಿಂದೆ ಸರಿದರೆ, ಆ ಸ್ಥಾನವನ್ನು ಅತ್ಯುನ್ನತ ಶ್ರೇಯಾಂಕಿತ ಮತ್ತು ಅರ್ಹ ಕ್ರೀಡಾಪಟವಿಗೆ ಲಭ್ಯವಾಗುತ್ತದೆ. ತಂಡಕ್ಕೆ ಸೆಮಿಫೈನಲ್ ಪಂದ್ಯದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ, ಕ್ವಾರ್ಟರ್ ಫೈನಲ್ ಆಡಿದ ತಂಡದೊಂದಿದೆ ಬದಲಾಯಿಸಲಾಗುವುದು.

ಒಲಿಂಪಿಕ್ಸ್ ಅರ್ಹತೆ ಪಡೆದ ಕ್ರೀಡಾಪಟುಗಳಿಗೆ 4 ವಾರದ ಬಳಿಕ 2ನೇ ಡೋಸ್ ಲಸಿಕೆ!...

ಫೈನಲ್ ಪಂದ್ಯದಲ್ಲಿ ಕ್ರೀಡಾಪಟುವಿಗೆ ಪಾಲ್ಗೊಳ್ಳಲು ಸಾಧ್ಯವಾಗದಿದ್ದರೆ, ಆತನಿಗೆ ಬೆಳ್ಳಿ ಪದಕ ನೀಡಲಾಗುವುದು ಎಂದು ಕಿಟ್ ಮೆಕ್‌ಕಾನ್ನೆಲ್ ಹೇಳಿದ್ದಾರೆ. ಕೊರೋನಾ ನಿರ್ಬಂಧ ಕಾರಣ ಕ್ರೀಡಾಪಟುಗಳಿಗೆ ಅಭ್ಯಾಸ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಪ್ರತಿ ಕ್ರೀಡಾಪಟುಗಳನ್ನು ಬೆಂಬಲಿಸಲಾಗುವುಗು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸ್ಪಷ್ಟಪಡಿಸಿದ್ದಾರೆ.