ಬೆಂಗಳೂರು(ಏ.03): ಕೊರೋನಾ ವೈರಸ್‌ ಹರಡುವುದನ್ನು ತಡೆಗಟ್ಟುವ ಸಂಬಂಧ ವೆಚ್ಚಗಳನ್ನು ನಿಭಾಯಿಸಲು ರಚಿಸಿರುವ ‘ಸಿಎಂ ಕೋವಿಡ್‌ ರಿಲೀಫ್‌ ಫಂಡ್‌’ಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನವನ್ನು ಬಳಕೆ ಮಾಡಲು ಅವಕಾಶ ನೀಡಲಾಗಿದೆ.

ಪ್ರತಿ ಶಾಸಕರಿಗೆ ವರ್ಷಕ್ಕೆ ಎರಡು ಕೋಟಿ ರು.ಗಳನ್ನು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನೀಡಲಾಗುತ್ತದೆ. ಇದರ ಅನ್ವಯ ವಿಧಾನ ಪರಿಷತ್ತಿನ 75 ಸದಸ್ಯರು ಹಾಗೂ ವಿಧಾನಸಭೆಯ 225 ಸದಸ್ಯರಿಗೆ ತಲಾ ಎರಡು ಕೋಟಿ ರು.ಗಳಂತೆ ವರ್ಷಕ್ಕೆ 600 ಕೋಟಿ ರು.ಗಳನ್ನು ನೀಡಲಾಗುತ್ತದೆ.

ಸಾಮಾಜಿಕ ಅಂತರದ್ದೇ ಸಮಸ್ಯೆ: ಜನ ಜಂಗುಳಿಯಿಂದಾಗಿ ಡೇಂಜರ್ ಝೋನ್‌ನಲ್ಲಿ ಮಾರ್ಕೆಟ್‌!

ಕೊರೋನಾ ವೈರಸ್‌ ಸೋಂಕು ನಿಯಂತ್ರಿಸಲು 2020-21ನೇ ಸಾಲಿಗೆ ಸೀಮಿತವಾಗಿ ಶಾಸಕರ ನಿಧಿಯನ್ನು ‘ಸಿಎಂ ಕೋವಿಡ್‌ ರಿಲೀಫ್‌ ಫಂಡ್‌’ಗೆ ನೀಡಲು ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾಧಿಕಾರಿಗಳು ಸಂಬಂಧಪಟ್ಟಜಿಲ್ಲೆಗಳ ಶಾಸಕರನ್ನು ಸಂಪರ್ಕಿಸಿ ಅವರ ಪ್ರಸ್ತಾವನೆಯನ್ನು ತುರ್ತಾಗಿ ಲಭ್ಯವಿರುವ ಪಿಡಿ ಖಾತೆಯ ಅನುದಾನದಿಂದ ತಲಾ ಎರಡು ಕೋಟಿ ರು.ಗಳಿಗೆ ಸೀಮಿತಗೊಳಿಸಿ ಬಳಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ.