ಲಾಕ್‌ಡೌನ್ ವಿಸ್ತರಣೆ ಬೆನ್ನಲ್ಲೇ ಎಲ್ಲಾ ಕ್ರೀಡಾ ಶಿಬಿರಗಳನ್ನು ಅಮಾನತು ಮಾಡಿದ ಸಾಯ್..!
ಕ್ರೀಡಾಪಟುಗಳಿಗೆ ಸಾಯ್ ಆನ್‌ಲೈನ್ ಕಾರ್ಯಾಗಾರ
ಇಂಡಿಯಾ ಲಾಕ್‌ಡೌನ್‌ನಿಂದಾಗಿ ಸಾಯ್ ಎಲ್ಲಾ ಕ್ರೀಡಾ ಶಿಬಿರಗಳನ್ನು ಏಪ್ರಿಲ್ 14ರವರೆಗೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಎರಡನೇ ಹಂತದಲ್ಲಿ 19 ದಿನಗಳ ಕಾಲ ಲಾಕ್‌ಡೌನ್ ವಿಸ್ತರಿಸಿರುವುದರಿಂದ ಮೇ 03ರವರೆಗೆ ಎಲ್ಲಾ ಕ್ರೀಡಾ ಶಿಬಿರಗಳನ್ನು ಅಮಾನತುಗೊಳಿಸಲು ತೀರ್ಮಾನಿಸಲಾಗಿದೆ ಎಂದು ಸಾಯ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಬೆಂಗಳೂರು ಹಾಗೂ ಪಟಿಯಾಲ ಸಾಯ್ ಕೇಂದ್ರಗಳಲ್ಲಿ ಅಭ್ಯಾಸ ನಡೆಸುತ್ತಿರುವ ಕ್ರೀಡಾಪಟುಗಳಿಗೆ ಅಭ್ಯಾಸ ಮುಂದುವರಿಸಲು ಅನುಮತಿ ನೀಡಲಾಗಿದೆ. ಯುವ ಜಾವಲಿನ್ ಪಟು ಸದ್ಯ ಪಟಿಯಾಲದಲ್ಲಿ ಅಭ್ಯಾಸ ನಡೆಸುತ್ತಿದ್ದು ಅವರಿಗೆ ಸಾಯ್ ಹಾಸ್ಟೆಲ್‌ನಲ್ಲಿರಲು ಅವಕಾಶ ನೀಡಿದೆ. ಇನ್ನಿ ಬೆಂಗಳೂರಿನ ಸಾಯ್ ಒಳಾಂಗಣ ಕ್ರೀಡಾಂಗಣದಲ್ಲಿ ಮನ್‌ಪ್ರೀತ್ ಸಿಂಗ್ ನೇತೃತ್ವದ ಹಾಕಿ ಟೀಂ ಇಂಡಿಯಾ ಅಭ್ಯಾಸ ನಡೆಸಲಿದೆ.
ಸೋಂಕಿತರನ್ನು ಪ್ರತ್ಯೇಕಿಸಲು ಸಾಯ್ ಕೇಂದ್ರಗಳ ಬಳಕೆ
ಇದೇ ವೇಳೆ ಹಾಕಿ ಇಂಡಿಯಾ, ಎಲ್ಲಾ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಕೊರೋನಾ ವೈರಸ್‌ನಿಂದ ದೇಶಾದ್ಯಂತ 10 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, 300ಕ್ಕೂ ಅಧಿಕ ಮಂದಿ ಕೊನೆಯುಸಿರೆಳೆದಿದ್ದಾರೆ.