Asianet Suvarna News Asianet Suvarna News

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಪಿವಿ ಸಿಂಧೂ, ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದ ಭಾರತ!

ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಪ್ರಾಬಲ್ಯ ಸಾಧಿಸಿದೆ. ಬ್ಯಾಡ್ಮಿಂಟನ್‌ನಲ್ಲಿ ಭಾರತ ನಿರೀಕ್ಷಿತ ಚಿನ್ನದ ಪದಕ ಗೆದ್ದುಕೊಂಡಿದೆ. ಪಿವಿ ಸಿಂಧೂ ಭಾರತಕ್ಕೆ ಮತ್ತೊಂದು ಚಿನ್ನ ಗೆದ್ದುಕೊಟ್ಟಿದ್ದಾರೆ.
 

Commonwealth games 2022 PV Sindhu wins gold for India against Canada Michelle Li ckm
Author
Bengaluru, First Published Aug 8, 2022, 3:15 PM IST

ಬರ್ಮಿಂಗ್‌ಹ್ಯಾಮ್(ಆ.08): ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಭಾರತ ಕೀರ್ತಿ ಪತಾಕೆ ಹಾರಿಸಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಪಿವಿ ಸಿಂಧೂ ಕೆನಡಾ ಮೈಕೆಲ್ ಲೀ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಫೈನಲ್ ಸುತ್ತಿನಲ್ಲಿ ಪಿವಿ ಸಿಂಧು 21-15, 21-13 ಅಂತರದಲ್ಲಿ ಕೆನಡಾ ಸ್ಪರ್ಧಿ ವಿರುದ್ಧ ಗೆಲುವು ದಾಖಲಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟ 2022ರಲ್ಲಿ ಭಾರತ ಗೆದ್ದ 19ನೇ ಚಿನ್ನದ ಪದಕವಾಗಿದೆ.  2014ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಮೈಕೆಲ್ ಲೀ ಸದ್ಯ 13ನೇ ಶ್ರೇಯಾಂಕಿತರಾಗಿದ್ದಾರೆ. 2018ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಿವಿ ಸಿಂಧು ಫೈನಲ್ ಪಂದ್ಯದಲ್ಲಿ ಭಾರತದ ಮತ್ತೊಬ್ಬ ಶಟ್ಲರ್ ಸೈನಾ ನೆಹ್ವಾಲ್ ವಿರುದ್ಧ ಮುಗ್ಗರಿಸಿದ್ದರು. ಇದೀಗ ಕಾಮನ್‌ವೆಲ್ತ್ ಗೇಮ್ಸ್ ಕೂಟದಲ್ಲಿ ಸಿಂಧೂ ಚಿನ್ನದ ಪದಕ ಸಾಧನೆ ಮಾಡಿದ್ದಾರೆ. ಸಿಂಧೂ ಚಿನ್ನದ ಪದಕದ ಮೂಲಕ ಭಾರತ ಪಜಕ ಪಟ್ಟಿಯಲ್ಲಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ. 19 ಚಿನ್ನ, 15 ಬೆಳ್ಳಿ ಹಾಗೂ 22 ಕಂಚಿನ ಪದಕದೊಂದಿಗೆ ಒಟ್ಟು 56 ಪದಕ ಗೆದ್ದುಕೊಂಡಿದೆ. 

ಮೊದಲ ಸೆಟ್‌ನಲ್ಲಿ ಪಿವಿ ಸಿಂಧೂ ಪರಾಕ್ರಮ ತೋರಿದರು.  21-15 ಅಂತರದಲ್ಲಿ ಮೊದಲ ಸೆಟ್ ಗೆದ್ದುಕೊಂಡರು. ಎರಡನೇ ಸೆಟ್‌ನಲ್ಲಿ ಗೇಮ್‌ಬ್ರೇಕ್‌ನಲ್ಲಿ 11-6 ಅಂತರದಲ್ಲಿ ಮುನ್ನಡೆ ಪಡೆದ ಸಿಂಧೂ 21-13 ಅಂತರದಲ್ಲಿ ಪಂದ್ಯ ಫಿನೀಶ್ ಮಾಡಿದರು. 

ಕಾಮನ್ವೆಲ್ತ್‌ ಪದಕ ವಿಜೇತ ಸಂಕೇತ್‌ ಶಸ್ತ್ರಚಿಕಿತ್ಸೆಗೆ ನೆರವಾದ ಭಾರತ ಸರ್ಕಾರ..!

ಕ್ವಾರ್ಟರ್‌ ಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌ ಸಿಂಧು, ಮಲೇಷ್ಯಾದ ಜಿನ್‌ ವೀ ಗೋ ವಿರುದ್ಧ 19-21, 21-14, 21-18 ಅಂತರದಲ್ಲಿ ಗೆಲುವು ದಾಖಲಿಸಿದ್ದರು. ಮೂಲಕ ಅಂತಿಮ 4ರ ಘಟ್ಟಪ್ರವೇಶಿಸಿದರು.  ಭಾನುವಾರ ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಸಿಂಗಾಪೂರದ ಯೋ ಜಿಯಾ ಮಿನ್‌ ಅವರನ್ನು 21-19, 21-17 ನೇರ ಗೇಮ್‌ಗಳಿಂದ ಮಣಿಸಿದ ಪಿವಿ ಸಿಂಧು ಫೈನಲ್ ಪ್ರವೇಶಿಸಿದ್ದರು.

 

 

ಸಿಂಧು ಚಿನ್ನ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ. ಪಿವಿ ಸಿಂಧೂ ಚಾಂಪಿಯನ್‌ಗಳ ಚಾಂಪಿಯನ್.  ಎಕ್ಸಲೆಂಟ್ ಅನ್ನೋದನ್ನು ಸಿಂಧೂ ಪದೆ ಪದೇ ಸಾಬೀತುಪಡಿಸಿದ್ದಾಳೆ. ಸಿಂಧೂ ಸಮರ್ಪಣೆ ಮತ್ತು ಬದ್ಧತೆ ವಿಸ್ಮಯಕಾರಿಯಾಗಿದೆ. ಚಿನ್ನ ಗೆದ್ದ ಸಿಂಧೂಗೆ ಅಭಿನಂದನೆಗಳು. ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆ ಎಂದು ಮೋದಿ ಟ್ವೀಟ್ ಮೂಲಕ ಶುಭಕೋರಿದ್ದಾರೆ.
 

Follow Us:
Download App:
  • android
  • ios