ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಸಂಕೇತ್ ಸರ್ಗರ್‌ಗೆ ಭಾರತ ಸರ್ಕಾರ ನೆರವುದೇಶಕ್ಕೆ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮೊದಲ ಪದಕ ಜಯಿಸಿದ್ದ ಸಂಕೇತ್ ಕ್ಲೀನ್ ಅಂಡ್ ಜರ್ಕ್ ವಿಭಾಗದ ಸ್ಪರ್ಧೆ ವೇಳೆ ಗಾಯಕ್ಕೆ ತುತ್ತಾಗಿದ್ದ ಸಂಕೇತ್

ನವದೆಹಲಿ(ಆ.08): ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ವೇಟ್‌ಲಿಫ್ಟರ್‌ ಸಂಕೇತ್‌ ಸರ್ಗರ್‌ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರ ಚಿಕಿತ್ಸೆಗಾಗಿ ಕ್ರೀಡಾ ಸಚಿವಾಲಯ 30 ಲಕ್ಷ ರು. ಬಿಡುಗಡೆ ಮಾಡಿದೆ. 21 ವರ್ಷದ ಸಂಕೇತ್‌ ಪುರುಷರ 55 ಕೆ.ಜಿ. ವಿಭಾಗದಲ್ಲಿ ಒಟ್ಟು 248 ಕೆ.ಜಿ. ಭಾರ ಎತ್ತಿ ಬೆಳ್ಳಿ ಗೆದ್ದಿದ್ದರು. 

ಸ್ನ್ಯಾಚ್‌ ವಿಭಾಗದಲ್ಲಿ 113 ಕೆಜಿ ಭಾರ ಎತ್ತಿದ್ದ ಸಂಕೇತ್ ಸರ್ಗಾರ್, ಕ್ಲೀನ್‌ ಅಂಡ್ ಜರ್ಕ್‌ ವಿಭಾಗದಲ್ಲಿ 135 ಕೆಜಿ ಭಾರ ಎತ್ತಿದ್ದರು. ಒಟ್ಟು 248 ಕೆ.ಜಿ. ಭಾರ ಎತ್ತಿ ಸಂಕೇತ್‌ ಸರ್ಗರ್‌ ಬೆಳ್ಳಿ ಗೆದ್ದಿದ್ದರು. ಸಂಕೇತ್‌ ಸರ್ಗರ್‌ ಅವರಿಗಿಂತ ಕೇವಲ ಒಂದು ಕೆಜಿ ಹೆಚ್ಚಿಗೆ ಭಾರ ಎತ್ತಿದ ಮಲೇಷ್ಯಾ ಮೊಹಮ್ಮದ್‌ ಅನಿಕ್‌ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಲೀನ್ ಅಂಡ್ ಜರ್ಕ್‌ನಲ್ಲಿ 139 ಕೆಜಿ ಭಾರ ಎತ್ತುವ ಪ್ರಯತ್ನದಲ್ಲಿ ಸಂಕೇತ್ ಗಾಯಕ್ಕೆ ತುತ್ತಾಗಿದ್ದರು. 

ಸ್ಪರ್ಧೆ ವೇಳೆ ಅವರ ಮೊಣಕೈಗೆ ಮುರಿದಿತ್ತು. ಸದ್ಯ ಅವರು ಇಂಗ್ಲೆಂಡ್‌ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆಸ್ಪತ್ರೆಯ ಎಲ್ಲಾ ವೆಚ್ಚ ಭರಿಸಲು ಸರ್ಕಾರ 30 ಲಕ್ಷ ರು. ಬಿಡುಗಡೆ ಮಾಡಿದೆ ಎಂದು ಭಾನುವಾರ ಸಚಿವಾಲಯ ಮಾಹಿತಿ ನೀಡಿದೆ.

Commonwealth Games: ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದ ಸುಧೀರ್: ಅಭಿನಂದಿಸಿದ ಪ್ರಧಾನಿ ಮೋದಿ

ಇನ್ನು ಈ ಕುರಿತಂತೆ ಟ್ವೀಟ್‌ ಮಾಡಿರುವ ಒಲಿಂಪಿಕ್ಸ್‌ ಪದಕ ವಿಜೇತೆ ವೇಟ್‌ಲಿಫ್ಟರ್ ಮೀರಾಬಾಯಿ ಚಾನು, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ವೇಟ್‌ಲಿಫ್ಟರ್ ಸಂಕೇತ್‌ ಸರ್ಗಾರ್ ಅವರಿಗೆ ಲಂಡನ್‌ನಲ್ಲೇ ಮೊಣಕೈ ಶಸ್ತ್ರ ಚಿಕಿತ್ಸೆಗೆ ನೆರವಾದ ಭಾರತ ಸರ್ಕಾರ, ಭಾರತೀಯ ಕ್ರೀಡಾ ಪ್ರಾಧಿಕಾರ, TOPS ಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕಾಮನ್‌ವೆಲ್ತ್‌ ಗೇಮ್ಸ್‌ ಸ್ಪರ್ಧೆಯ ವೇಳೆ ಅವರು ಗಾಯಗೊಂಡಿದ್ದರು. ವೇಟ್‌ಲಿಫ್ಟಿಂಗ್‌ ಫೆಡರೇಷನ್ ಇವರ ಖರ್ಚು ವೆಚ್ಚ ಭರಿಸುವಂತೆ ಮಾಡಿದ ಮನವಿಗೆ ಭಾರತ ಸರ್ಕಾರವು ತ್ವರಿತವಾಗಿ ಸ್ಪಂದಿಸಿದೆ ಎಂದು ಮೀರಾಬಾಯಿ ಚಾನು ಟ್ವೀಟ್‌ ಮಾಡಿದ್ದಾರೆ. 

Scroll to load tweet…

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸಾರ್ವಕಾಲಿಕ ಸಾಧನೆ ಮಾಡಿದ ಭಾರತದ ವೇಟ್‌ಲಿಫ್ಟರ್

22ನೇ ಕಾಮನ್‌ವೆಲ್ತ್‌ ಗೇಮ್ಸ್‌ನ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತ ತನ್ನ ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ವೇಟ್‌ಲಿಫ್ಟಿಂಗ್ ತಂಡವು 10 ಪದಕಗಳನ್ನು ಗೆಲ್ಲುವ ಮೂಲಕ ಸಾರ್ವಕಾಲಿಕ ಸಾಧನೆ ಮಾಡಿದೆ.

2018ರಲ್ಲಿ 9 ಪದಕ

ಭಾರತ ಈ ಮೊದಲು 2018ರ ಗೋಲ್ಡ್‌ಕೋಸ್ಟ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಗೆದ್ದಿದ್ದ 9 ಪದಕ ಅತ್ಯುತ್ತಮ ಸಾಧನೆ ಎನಿಸಿಕೊಂಡಿತ್ತು. ಈ ಬಾರಿ ಲಿಫ್ಟರ್‌ಗಳು ತಮ್ಮ ದಾಖಲೆಯನ್ನು ಉತ್ತಮಗೊಳಿಸಿಕೊಂಡಿದ್ದಾರೆ. 3 ಚಿನ್ನ, 3 ಬೆಳ್ಳಿ, 4 ಕಂಚಿನ ಪದಕಗಳು ಭಾರತಕ್ಕೆ ಒಲಿದಿವೆ.