ಕಾಮನ್‌ವೆಲ್ತ್ ಗೇಮ್ಸ್ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ, ಲಕ್ಷ್ಯ ಸೇನ್‌ಗೆ ಗೋಲ್ಡ್ ಮೆಡಲ್!

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸೋಮವಾರ ಬ್ಯಾಡ್ಮ್ಂಟನ್‌ನಲ್ಲಿ ಭಾರತ ಮತ್ತೊಂದು ಚಿನ್ನದ ಪದಕ ಗೆದ್ದುಕೊಂಡಿದೆ. ಪುರಷರ ವಿಭಾಗದಲ್ಲಿ ಭಾರತದ ಲಕ್ಷ್ಯ ಸೇನ್ ಚಿನ್ನ ಗೆದ್ದುಕೊಂಡಿದ್ದಾರೆ.

Commonwealth Games 2022 Lakshya Sen wins gold medal for india in badmintons singles ckm

ಬರ್ಮಿಂಗ್‌ಹ್ಯಾಮ್(ಆ.08):  ಪಿವಿ ಸಿಂಧೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದ ಬೆನ್ನಲ್ಲೇ ಇದೀಗ ಪುರುಷರ ವಿಭಾಗದಲ್ಲಿ ಭಾರತ ಲಕ್ಷ್ಯ ಸೇನ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ 2022ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ 20ನೇ ಚಿನ್ನದ ಪದಕ ಗೆದ್ದುಕೊಂಡಿದೆ. ಪುರುಷರ ಸಿಂಗ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್, ಮಲೇಷಿಯಾದ ಝಿ ಯೊಂಗ್ ವಿರುದ್ಧ 19-21, 21-9, 19-16 ಅಂತರದಲ್ಲಿ ಗೆಲುವು ಸಾಧಿಸಿದರು. ಈ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ವಿಶ್ವದ 10ನೇ ಶ್ರೇಯಾಂಕಿತ ಲಕ್ಷ್ಯ ಸೇನ್ ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.  ಮಿಶ್ರ ಡಬಲ್ಸ್‌ನಲ್ಲಿ ಲಕ್ಷ್ಯ ಸೇನ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಇನ್ನು ಪಿವಿ ಸಿಂಧು ಮಹಿಳೆಯರ ಸಿಂಗಲ್ಸ್ ಚಿನ್ನದ ಪದಕ, ಪುರುಷರ ಸಿಂಗಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್ ಕಂಚು, ಮಹಿಳೆಯ ಡಬಲ್ಸ್‌ನಲ್ಲಿ ಟ್ರೀಸಾ ಜಾಲಿ ಮತ್ತು ಜಿ ಪುಲ್ಲೇಲ ಕಂಚಿನ ಪದಕ ಗೆದ್ದಿದ್ದಾರೆ. ಇದೀಗ ಲಕ್ಷ್ಯ ಸೇನ್ ಚಿನ್ನದ ಪದಕ ಗೆದ್ದುಕೊಳ್ಳುವ ಮೂಲಕ ಭಾರತದ ಪಕ ಬೇಟೆ ಮುಂದುವರಿದಿದೆ.

ಕಾಮನ್‌ವೆಲ್ತ್ ಪದಕ ಪಟ್ಟಿಯಲ್ಲಿ ಭಾರತ 20 ಚಿನ್ನ 15 ಬೆಳ್ಳಿ ಹಾಗೂ 22 ಕಂಚಿನ ಪದಕದೊಂದಿಗೆ ಒಟ್ಟು 57 ಪದಕ ಗೆದ್ದುಕೊಂಡಿದ. ಇಷ್ಟೇ ಅಲ್ಲ ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.  ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 66 ಚಿನ್ನ, 57 ಬೆಳ್ಳಿ ಹಾಗೂ 54 ಕಂಚಿನ ಪದಕದೊಂದಿಗೆ ಒಟ್ಟು 177 ಪದಕ ಗೆದ್ದುಕೊಂಡಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಇಂಗ್ಲೆಂಡ್ 56 ಚಿನ್ನ, 61 ಬೆಳ್ಳಿ ಹಾಗೂ 53 ಕಂಚಿನ ಪದಕದೊಂದಿಗೆ 170 ಪದಕ ಗೆದ್ದುಕೊಂಡಿದೆ. ಮೂರನೇ ಸ್ಥಾನದಲ್ಲಿರುವ ಕೆನಡಾ 26 ಚಿನ್ನ, 32 ಬೆಳ್ಳಿ ಹಾಗೂ 34 ಕಂಚಿನ ಪದಕದೊಂದಿಗೆ 92 ಪದಕ ಗೆದ್ದುಕೊಂಡಿದೆ. 

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಪಿವಿ ಸಿಂಧೂ, ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದ ಭಾರತ!

ಲಕ್ಷ್ಯ ಸೇನ್ ಫೈನಲ್ ಪಂದ್ಯದಲ್ಲಿ ಮಲೇಷಿಯಾದ ಝಿ ಯೊಂಗ್ ವಿರುದ್ಧ ಗೆಲುವು ಸಾಧಿಸಿದ್ದರೆ, ಸೆಮಿಫೈನಲ್ ಪಂದ್ಯದಲ್ಲಿ ಸಿಂಗಾಪೂರದ ಜಿಯಾ ಹೆಂಗ್‌ರನ್ನು 21-10, 18-21, 21-16 ಗೇಮ್‌ಗಳಲ್ಲಿ ಸೋಲಿಸಿ ಚೊಚ್ಚಲ ಬಾರಿ ಕಾಮನ್‌ವೆಲ್ತ್‌ ಫೈನಲ್‌ ತಲುಪಿದರು. 

ಲಕ್ಷ್ಯ ಸೇನ್ ಚಿನ್ನದ ಸಾಧನೆಗೆ ಇಡೀ ದೇಶ ಅಭಿನಂದನೆ ಸಲ್ಲಿಸುತ್ತಿದೆ. ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. 20ರ ಹರೆಯದ ಲಕ್ಷ್ಯ ಸೇನ್ ಮತ್ತಷ್ಟು ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ. 
 

Latest Videos
Follow Us:
Download App:
  • android
  • ios