Commonwealth Games: ಲಾನ್‌ ಬೌಲ್ಸ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಭಾರತ

ಭಾರತ ಮಹಿಳಾ ಫೋರ್ಸ್ ಲಾನ್ ಬೌಲ್ಸ್ ತಂಡ ಮಂಗಳವಾರ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ. ಕಾಮನ್ವೆಲ್ತ್ ಗೇಮ್ಸ್‌ 2022 ರಲ್ಲಿ ಭಾರತ ಇದುವರೆಗೆ ನಾಲ್ಕು ಚಿನ್ನದ ಪದಕಗಳನ್ನು ಗೆದ್ದಂತಾಗಿದೆ.
 

Commonwealth Games 2022 India Win Historic Lawn Bowls Gold san

ಬರ್ಮಿಂಗ್‌ಹ್ಯಾಂ (ಆ,2): ಕಾಮನ್ವೆಲ್ತ್‌ ಗೇಮ್ಸ್‌ ಇತಿಹಾಸದಲ್ಲಿ ಭಾರತದ ಮಹಿಳಾ ಲಾನ್‌ ಬೌಲ್ಸ್‌ ಟೀಮ್‌ ಚರಿತ್ರೆ ನಿರ್ಮಿಸಿದೆ. ಮಹಿಲೆಯರ ಫೋರ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಮೂರು ಆವೃತ್ತಿಯ ಕಾಮನ್ವೆಲ್ತ್‌ ಗೇಮ್ಸ್‌ನ ಸ್ವರ್ಣ ಪದಕ ವಿಜೇತ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಐತಿಹಾಸಿಕ ಸ್ವರ್ಣ ಪದಕದ ಸಾಧನೆ ಮಾಡಿದೆ. 92 ವರ್ಷಗಳ ಗೇಮ್ಸ್‌ ಇತಿಹಾಸದಲ್ಲಿ ಭಾರತ ಈ ವಿಭಾಗದಲ್ಲಿ ಪದಕ ಗೆದ್ದಿರುವುದು ಇದೇ ಮೊದಲು. ಇದರ ನಡುವೆ ಭಾರತ ಫೈನಲ್‌ಗೇರಿದ ಮೊದಲ ಗೇಮ್ಸ್‌ನಲ್ಲಿಯೇ ಭಾರತ ಸ್ವರ್ಣ ಪದಕಕ್ಕೆ ಗುರಿ ಇಟ್ಟಿದೆ. ಮಹಿಳಾ ತಂಡದ ಈ ಪಂದ್ಯದಲ್ಲಿ ಟೀಮ್‌ ಇಂಡಿಯಾ ಲವ್ಲಿ ಚೌಬೆ, ಪಿಂಕಿ, ನಯನ್ಮೋನಿ ಸೈಕಿಯಾ, ರೂಪಾ ರಾಣಿಯನ್ನು ಒಳಗೊಂಡಿತ್ತು. ಸತತವಾಗಿ ಉತ್ತಮ ಪ್ರದರ್ಶನ ನೀಡಿ ದೇಶಕ್ಕಾಗಿ ಈ ವಿಭಾಗದಲ್ಲಿ ಅನೇಕ ಪದಕಗಳನ್ನು ಗೆದ್ದುಕೊಟ್ಟಿದ್ದುರ. ಅಂತಿಮ ಪಂದ್ಯದಲ್ಲಿ ಭಾರತ 17-10 ರಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಈ ರೋಚಕ ಪಂದ್ಯದಲ್ಲಿ ಹಲವು ಏರಿಳಿತಗಳಿದ್ದವು. ಆರಂಭದಲ್ಲಿ ಟೀಮ್‌ ಇಂಡಿಯಾ ಮುನ್ನಡೆ ಸಾಧಿಸಿದರೆ, ಆ ನಂತರ ದಕ್ಷಿಣ ಆಫ್ರಿಕಾ ಕೂಡ ತಿರುಗೇಟು ನೀಡಿತು.

ಅಂತಿಮವಾಗಿ ಟೀಮ್ ಇಂಡಿಯಾದ ಅಮೋಘ ಆಟ ಫಲ ನೀಡಿದ್ದರಿಂದ ಭಾರತ 17-10 ಅಂತರದಿಂದ ಪಂದ್ಯ ಗೆದ್ದುಕೊಂಡಿತು. 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ ಈಗ 10 ಕ್ಕೆ ಏರಿದೆ, ಇದರಲ್ಲಿ 4 ಚಿನ್ನ, 3 ಬೆಳ್ಳಿ ಮತ್ತು 3 ಕಂಚಿನ ಪದಕಗಳು ಸೇರಿವೆ.

Commonwealth Games 2022 India Win Historic Lawn Bowls Gold san

ಬ್ಯಾಕ್‌ ಎಂಡ್‌ ಆಟದ ವೇಳೆ ಉತ್ತಮವಾಗಿ ಆಡಿದ ಭಾರತ 7-2 ರಿಂದ ಮುನ್ನಡೆ ಕಂಡು ಕೊಂಡಿತ್ತು. ಆದರೆ, ಫ್ರಂಟ್ ಎಂಡ್ ಶುರುವಾದಾಗ ಟೀಂ ಇಂಡಿಯಾ ಕೊಂಚ ತತ್ತರಿಸಿತು. ಇಲ್ಲಿ ದಕ್ಷಿಣ ಆಫ್ರಿಕಾ ಸತತ ಅಂಕ ಗಳಿಸಿದ್ದು, ಪಂದ್ಯ 8-8ಕ್ಕೆ ಸಮಬಲ ಸಾಧಿಸಿತತು. ಪಂದ್ಯದ 13 ಸುತ್ತುಗಳ ಅಂತ್ಯದವರೆಗೂ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಸಮಬಲದ ಹೋರಾಟ ನಡೆಯಿತು. ಅಂತಿಮವಾಗಿ ಭಾರತ 17-10 ರಿಂದ ಪಂದ್ಯವನ್ನು ಗೆದ್ದುಕೊಂಡಿತು.

ಏನಿದು ಲಾನ್‌ ಬೌಲ್ಸ್‌ ಗೇಮ್‌, ಇದರಲ್ಲಿ ಅಂಕ ಮಾದರಿ ಹೇಗೆ?: ಲಾನ್ ಬೌಲ್‌ಗಳನ್ನು ಹಸಿರು ಮೇಲ್ಮೈಯಲ್ಲಿ ಆಡಲಾಗುತ್ತದೆ ಮತ್ತು ನಾಲ್ಕು ಸ್ವರೂಪಗಳನ್ನು ಹೊಂದಿರುತ್ತದೆ. ಸಿಂಗಲ್ಸ್, ಡಬಲ್ಸ್,‌  ಟ್ರಿಪಲ್ಸ್ ಮತ್ತು ಫೋರ್ಸ್. ಪ್ರತಿ ತಂಡದಲ್ಲಿರುವ ಜನರ ಸಂಖ್ಯೆಯ ನಂತರ ಆಯಾ ಸ್ವರೂಪಗಳನ್ನು ಹೆಸರಿಸಲಾಗಿದೆ.

Commonwealth Games: ಲಾನ್ ಬಾಲ್ಸ್‌ ಫೈನಲ್ ಪ್ರವೇಶಿಸಿ ಚರಿತ್ರೆ ಸೃಷ್ಟಿಸಿದ ಭಾರತ ಮಹಿಳಾ ತಂಡ..!

ಲಾನ್‌ ಬೌಲ್ಸ್‌ ನಿಯಮ: ಲಾನ್ಸ್‌ ಬಾಲ್‌ನ ಮೂಲ ನಿಯಮ "ಜಾಕ್‌' ಎನ್ನುವ ಟಾರ್ಗೆಟ್‌ ಚೆಂಡಿನ ಬಳಿ, ಕಿಟ್ಟಿ ಎನ್ನುವ ಚೆಂಡನ್ನು ಆದಷ್ಟು ಸಮೀಪ ತಲುಪುವುದಾಗಿದೆ. ಟಾಸ್‌ ಗೆದ್ದ ತಂಡ ಮೊದಲು ಜಾಕ್‌ ಚೆಂಡನ್ನು ಉರುಳಿಸುತ್ತದೆ. ಇದು ಕನಿಷ್ಠ 23 ಮೀಟರ್‌ ದೂರ ಹೋಗಬೇಕು. ಆ ಬಳಿಕ ಆಟ ಆರಂಭವಾಗಲಿದ್ದು,ಕಿಟ್ಟಿಯನ್ನು ಗರಿಷ್ಠ ಬಾರಿ ಜಾಕ್‌ನ ಬಳಿ ಇರಿಸುವ ತಂಡ ಅಂಕ ಗೆಲ್ಲುತ್ತದೆ.

Commonwealth Games ದೇಶವನ್ನು ಮತ್ತೊಮ್ಮೆ ಪ್ರತಿನಿಧಿಸದಿರುವುದಕ್ಕೆ ಬೇಸರವಾಗುತ್ತಿದೆ: ನೀರಜ್‌ ಚೋಪ್ರಾ

ಸಿಂಗಲ್ಸ್ ಮಾದರಿಯಲ್ಲಿ ಅವಕಾಶಗಳ ಬಗ್ಗೆ ಹೇಳುವುದಾದರೆ, ಪ್ರತಿ ತಂಡವು ನಾಲ್ಕು ಪ್ರಯತ್ನಗಳನ್ನು ಪಡೆಯುತ್ತದೆ ಆದರೆ ಇತರ ಸ್ವರೂಪಗಳಲ್ಲಿ, ತಂಡವು ಪ್ರತಿ ಆಟಗಾರನಿಗೆ ಎರಡು ಎಸೆತಗಳನ್ನು ನೀಡಲಾಗುತ್ತದೆ. ನಾಲ್ಕು ಆಟಗಾರರ ಸ್ವರೂಪದಲ್ಲಿ, ಪ್ರತಿ ತಂಡವು ಒಂದು ತುದಿಯಿಂದ ಎಂಟು ಥ್ರೋಗಳು ಅಥವಾ ರೋಲ್‌ಗಳನ್ನು ಎಸೆಯಲು ಅವಕಾಶ ಪಡೆಯುತ್ತದೆ. ತಂಡವು ಜ್ಯಾಕ್‌ನ ಹತ್ತಿರ ಇರಿಸಲು ನಿರ್ವಹಿಸಿದ ಬೌಲ್‌ಗಳ ಸಂಖ್ಯೆಯಿಂದ ಅಂಕಗಳನ್ನು ನೀಡಲಾಗುತ್ತದೆ. ನಂತರ ವಿಜೇತರನ್ನು ನಿರ್ಧರಿಸಲು ಅಂಕಗಳನ್ನು ಲೆಕ್ಕಹಾಕಲಾಗುತ್ತದೆ. ಸಿಂಗಲ್ಸ್ ಸ್ಪರ್ಧೆಯಲ್ಲಿ ಪಾಯಿಂಟ್ಸ್ ಸ್ವರೂಪದ ಬಗ್ಗೆ ಹೇಳುವುದಾದರೆ, 21 ಅಂಕಗಳನ್ನು ತಲುಪುವ ಆಟಗಾರ ಪಂದ್ಯ ಗೆಲ್ಲುತ್ತಾನೆ. ಇದು ಸಾಮಾನ್ಯ ಮೇಲ್ನೋಟದ ನಿಯಮಗಳು ಮಾತ್ರವೇ ಆಗಿದೆ.

Latest Videos
Follow Us:
Download App:
  • android
  • ios