ಏಷ್ಯನ್ ಶೂಟಿಂಗ್: ಚಿಂಕಿಗೆ ಒಲಿಂಪಿಕ್ಸ್ ಟಿಕೆಟ್
ಮುಂಬರುವ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಚಿಂಕಿ ಯಾದವ್ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ 11ನೇ ಭಾರತೀಯ ಶೂಟರ್ ಎನ್ನುವ ಗೌರವಕ್ಕೆ ಚಿಂಕಿ ಭಾಜನರಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ದೋಹಾ (ನ.09): 14ನೇ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನ ವನಿತೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯ ಫೈನಲ್ ಪ್ರವೇಶಿಸಿದ ಚಿಂಕಿ ಯಾದವ್, 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಿದ್ದಾರೆ.
ಮನು ಭಾಕರ್‌ಗೆ ಏಷ್ಯನ್ ಶೂಟಿಂಗ್ ಚಿನ್ನ!
ಅರ್ಹತಾ ಸುತ್ತಿನಲ್ಲಿ 588 ಅಂಕಗಳನ್ನು ಪಡೆದ ಚಿಂಕಿ ಫೈನಲ್‌ಗೇರಿದ್ದರು. ಆದರೆ ಫೈನಲ್‌ನಲ್ಲಿ 6ನೇ ಸ್ಥಾನ ಪಡೆದು ಪದಕ ಗೆಲ್ಲುವಲ್ಲಿ ವಿಫಲರಾದರು. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ 11ನೇ ಶೂಟರ್ ಎನ್ನುವ ಹಿರಿಮೆಗೆ ಮಧ್ಯಪ್ರದೇಶದ 21 ವರ್ಷದ ಚಿಂಕಿ ಪಾತ್ರರಾಗಿದ್ದಾರೆ.
ರಷ್ಯಾ ವಿರುದ್ದ ಭರ್ಜರಿ ಗೆಲುವು, ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಹಾಕಿ ಇಂಡಿಯಾ!
25 ಮೀ. ಪಿಸ್ತೂಲ್ ವಿಭಾಗದಲ್ಲಿ ಭಾರತಕ್ಕಿದು 2ನೇ ಕೋಟಾ ಆಗಿದೆ. ಇದೇ ವರ್ಷ ಜರ್ಮನಿಯ ಮ್ಯೂನಿಕ್‌ನಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ರಾಹಿ ಸರ್ನೊಬತ್, ಟೋಕಿಯೋ ಗೇಮ್ಸ್‌ಗೆ ಅರ್ಹತೆ ಗಳಿಸಿದ್ದರು. ಇನ್ನು ಇದೇ ಕೂಟದಲ್ಲಿ ಮೊದಲ ದಿನ ಪುರುಷರ 10 ಮೀ. ಏರ್ ರೈಫಲ್ ವಿಭಾಗದಲ್ಲಿ 3ನೇ ಸ್ಥಾನ ಗಳಿಸುವ ಮೂಲಕ ದೀಪಕ್ ಕುಮಾರ್ 2020 ಒಲಿಂಪಿಕ್ಸ್’ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.