liu yu chen huang yaqiong ಚೀನಾದ ಹುವಾಂಗ್ ಯಾಕಿಯಾಂಗ್ ಅವರು ಝೆಂಗ್ ಸಿ ವೀ ಅವರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ದೇಶದ ಮೊದಲ ಬ್ಯಾಡ್ಮಿಂಟನ್ ಚಿನ್ನದ ಪದಕವನ್ನು ಗೆದ್ದ ನಂತರ ಅವರಿಗೆ ತಂಡದ ಸಹ ಆಟಗಾರ ಪ್ರಪೋಸ್‌ ಮಾಡಿರುವ ವಿಡಿಯೋ ವೈರಲ್‌ ಆಗಿದೆ.

ಪ್ಯಾರಿಸ್‌ (ಆ.3): ಸಿಟಿ ಆಫ್‌ ಲವ್‌.. ಅಂದ್ರೇನೆ ವಿಶ್ವದ ಜನರಿಗೆ ನೆನಪಾಗೋದು ಒಂದೇ ಸಿಟಿ ಅದು ಪ್ಯಾರಿಸ್‌. ಈ ಬಾರಿಯ ಒಲಿಂಪಿಕ್ಸ್‌ ನಡೆಯುತ್ತಿರೋದು ಕೂಡ ಇದೇ ಒಲವಿನ ನಗರಿಯಲ್ಲಿ. ಜಗತ್ತಿನ ಅಥ್ಲೀಟ್‌ಗಳಿಗೆ ವರ್ಷಗಳ ಕಾಲ ನಡೆದ ಪರಿಶ್ರಮಗಳಿಗೆ ಫಲ ಸಿಗುವ ದಿನವೆಂದರೆ, ಅದು ಒಲಿಂಪಿಕ್ಸ್‌ ನಡೆಯುವ ದಿನ. ಹಾಗೇನಾದರೂ ಚಿನ್ನವನ್ನೇ ಗೆದ್ದುಬಿಟ್ಟರೆ, ಅಲ್ಲಿಯವರೆಗೂ ಅದುಮಿಟ್ಟುಕೊಂಡು ಭಾವನೆಗಳು ಪ್ರವಾಹವಾಗಿ ಹರಿಯುತ್ತದೆ. ಅಂಥದ್ದೇ ಒಂದು ಕ್ಷಣ ಶುಕ್ರವಾರ ಪ್ಯಾರಿಸ್‌ನ ಬ್ಯಾಡ್ಮಿಂಟನ್‌ ಟೂರ್ನಿಗಳು ನಡೆಯುವ ಲಾ ಚಾಪೆಲ್‌ ಅರೇನಾದಲ್ಲಿ ನಡೆದಿದೆ. ಯೆಸ್‌.. ಚೀನಾದ ಬ್ಯಾಡ್ಮಿಂಟನ್‌ ಸ್ಟಾರ್‌ ಹುವಾಂಗ್ ಯಾಕಿಯಾಂಗ್ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ ಚಿನ್ನದ ಪದಕ ಮಾತ್ರವಲ್ಲದೆ ವೆಡ್ಡಿಂಗ್‌ ರಿಂಗ್‌ಅನ್ನು ಸಂಪಾದಿಸಿದ್ದಾರೆ. ಹೌದು, 30 ವರ್ಷದ ಷಟ್ಲರ್‌ಗೆ ಆಕೆಯ ಬಾಯ್‌ಫ್ರೆಂಡ್‌ ಹಾಗೂ ಚೀನಾದ ಸಹ ಷಟ್ಲರ್‌ ಲಿಯು ಯುಚೆನ್ ಸಿಟಿ ಆಫ್‌ ಲವ್‌ನಲ್ಲಿ ಪ್ರಪೋಸ್‌ ಮಾಡಿದರು. ಶಟ್ಲರ್‌ ಮಂಡಿಯೂರಿ ಪ್ರಪೋಸ್‌ ಮಾಡುತ್ತಿದ್ದಂತೆ, ಚಿನ್ನದ ಪದಕ ವಿಜೇತ ಹುಡುಗಿಯ ಆನಂದಕ್ಕೆ ಪಾರವೇ ಇದ್ದಿರಲಿಲ್ಲ.

ಆಗಸ್ಟ್‌ 2 ರಂದು ಪದಕ ಪ್ರದಾನ ಸಮಾರಂಭ ಮುಕ್ತಾಯವಾದ ಬೆನ್ನಲ್ಲಿಯೇ ಲಿಯು ಯುಚೆನ್‌ ಮಂಡಿಯೂರಿ ವೆಡ್ಡಿಂಗ್‌ ರಿಂಗ್‌ಅನ್ನು ತೊಡಿಸಿದ್ದಾರೆ. ಪ್ಯಾರಿಸ್‌ ಗೇಮ್ಸ್‌ನ ಬ್ಯಾಡ್ಮಿಂಟನ್‌ ಸ್ಪರ್ಧೆಗಳಿಗೆ ಆತಿಥ್ಯ ಸ್ಥಳವಾಗಿರುವ ಲಾ ಚಾಪೆಲ್‌ ಅರೇನಾದಲ್ಲಿ ಲಿಯು ಯುಚೆನ್‌ ಮಂಡಿಯೂರಿ, ಹುವಾಂಗ್ ಯಾಕಿಯಾಂಗ್‌ಗೆ ಮದುವೆ ಪ್ರಪೋಸಲ್‌ ಮಾಡುತ್ತಿದ್ದಂತೆ ಇಡೀ ಕೋರ್ಟ್‌ನಲ್ಲಿ ಕರತಾಡನ ವ್ಯಕ್ತವಾಯಿತು. ಅದಕ್ಕೂ ಕೆಲ ಹೊತ್ತಿನ ಮುಂಚೆಯಷ್ಟೇ ಮಿಶ್ರ ಡಬಲ್ಸ್‌ನಲ್ಲಿ ಚೀನಾ ದೇಶದ ಮೊಟ್ಟಮೊದಲ ಒಲಿಂಪಿಕ್ಸ್‌ ಪದಕವನ್ನು ಯುವಾಂಗ್‌ ಯಾಕಿಯಾಂಗ್‌ ಗೆದ್ದಿದ್ದರು. ಲಿಯು ಯುಚೆನ್ ತನ್ನ ಜೇಬಿನಿಂದ ವೆಡ್ಡಿಂಗ್‌ ರಿಂಗ್‌ ಹೊರತೆಗೆದು, ಚಿನ್ನದ ಪದಕ ವಿಜೇತೆಗೆ ಮದುವೆಯ ಪ್ರಸ್ತಾಪ ಮಾಡಿದಾಗ, ಸ್ಟೇಡಿಯಂನಲ್ಲಿ ಕರತಾಡನದ ಡೆಸಿಬಲ್‌ ಮಟ್ಟಕ್ಕೆ ಲೆಕ್ಕಕ್ಕೆ ಸಿಕ್ಕಿರಲಿಲ್ಲ. ಒಲಿವಿನ ನಗರಿಯಲ್ಲಿ ಪ್ರೀತಿಗೆ ಮದುವೆ ಮುದ್ರೆ ಬಿದ್ದಾಗಲಂತೂ ಪ್ರೇಕ್ಷಕರು ರೋಮಾಂಚನಗೊಂಡರು.

ಪ್ಯಾರಿಸ್‌ನಲ್ಲಿ ನಡೆದ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜೋಡಿ ಪ್ರಾಬಲ್ಯ ಸಾಧಿಸಿದ್ದರಿಂದ ಹುವಾಂಗ್ ಯಾಕಿಯಾಂಗ್ ಅವರು ಝೆಂಗ್ ಸಿ ವೀ ಅವರೊಂದಿಗೆ ಮಿಶ್ರ ಡಬಲ್ಸ್ ಚಿನ್ನ ಜಯಿಸಿದ್ದರು.

ಪದಕ ಪ್ರದಾನ ಸಮಾರಂಭದ ಬಳಿಕ ಹುವಾಂಗ್ ಯಾಕಿಯಾಂಗ್ ತಮ್ಮ ಕೊರಳಲ್ಲಿ ಚಿನ್ನದ ಪದಕ ಧರಿಸಿಕೊಂಡು ಅರೇನಾದಲ್ಲಿ ಇದ್ದ ಅಭಿಮಾನಿಗಳಿಗೆ ಕೃತಜ್ಞತೆ ಹೇಳಲು ಬರುತ್ತಿದ್ದರು. ಈ ಹಂತದಲ್ಲಿ ಒಳಗೆ ಬಂದ ಲಿಯು ಯುಚೆನ್‌, ಆಕೆಯ ಸಂಭ್ರಮವನ್ನು ಇನ್ನಷ್ಟು ಸ್ಪೆಷಲ್‌ ಮಾಡಿಸಿದರು. ಲಿಯು ಮಂಡಿಯೂರಿ ಮದುವೆ ಪ್ರಪೋಸಲ್‌ ಮಾಡುತ್ತಿದ್ದಂತೆ ಹುವಾಂಗ್‌ ಯಾಕಿಯಾಂಗ್‌ ಭಾವುಕರಾಗಿದ್ದು ಕಂಡುಬಂತು. ಇನ್ನು ಲಿಯುಗೂ ಕೂಡ ಸಂಭ್ರಮ ಎನ್ನುವಂತೆ ಹುವಾಂಗ್‌ ಕೂಡ ಪ್ರೇಕ್ಷಕರ ದನಿಗೆ ದನಿಗೂಡಿಸಿ ಯೆಸ್‌ ಎಂದರು.

ಅಚ್ಚರಿಯ ಪ್ರಪೋಸಲ್‌ ಬಳಿಕ ಮಾತನಾಡಿದ ಹುವಾಂಗ್‌ ಯಾಕಿಯಾಂಗ್‌, ನಾನು ಪ್ಯಾರಿಸ್‌ನಲ್ಲಿ ಎಂಗೇಜ್‌ಮೆಂಟ್‌ ರಿಂಗ್‌ನ ನಿರೀಕ್ಷೆ ಮಾಡಿರಲಿಲ್ಲ. ಗೇಮ್ಸ್‌ಗೂ ಮುನ್ನ ನನ್ನ ಸಂಪೂರ್ಣ ಗಮನ ಸಿದ್ಧತೆ ಹಾಗೂ ಚಿನ್ನದ ಪದಕದ ಮೇಲೆ ಮಾತ್ರವೇ ಇತ್ತು ಎಂದಿದ್ದಾರೆ. 'ನನಗೆ ಫೀಲಿಂಗ್‌ಅನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಆದರೆ, ನನಗೆ ಖುಷಿ ಅಂದರೆ ತುಂಬಾ ಖುಷಿಯಾಗುತ್ತಿದೆ..' ಎಂದು ಆನಂದಭಾಷ್ಪ ಸುರಿಸುತ್ತಲೇ ಹೇಳಿದ್ದಾರೆ. ನನ್ನ ಇಷ್ಟು ವರ್ಷದ ಶ್ರಮಕ್ಕೆ ಚಿನ್ನದ ಪದಕ ಸಿಕ್ಕಿದ್ದು ಹೆಮ್ಮೆ ಎನಿಸಿದರೆ, ಅದಕ್ಕಿಂತ ಅಚ್ಚರಿ ಎನಿಸಿದ್ದು ಈ ಎಂಗೇಜ್‌ಮೆಂಟ್‌ ರಿಂಗ್‌. ನಾನು ಒಲಿಂಪಿಕ್‌ ಚಾಂಪಿಯನ್‌ ಆಗಬೇಕು ಎನ್ನುವ ನಿಟ್ಟಿನಲ್ಲಿ ಮಾತ್ರವೇ ಪ್ರಯತ್ನ ಮಾಡುತ್ತಿದ್ದೆ. ಆದರೆ, ಈ ರಿಂಗ್‌ಅನ್ನು ನಿರೀಕ್ಷೆಯೇ ಮಾಡಿರಲಿಲ್ಲ ಎಂದಿದ್ದಾರೆ. ನಾವು ಈ ಚಿನ್ನದ ಪದಕದ ಸಂಭ್ರಮವನ್ನು ಈ ರೀತಿಯಲ್ಲಿ ಸೆಲಬ್ರೇಟ್‌ ಮಾಡುತ್ತೇವೆ ಎಂದು ನಿರೀಕ್ಷೆಯೇ ಮಾಡಿರಲಿಲ್ಲ ಎಂದಿದ್ದಾರೆ.

ಮನು ಭಾಕರ್ ಹ್ಯಾಟ್ರಿಕ್ ಪದಕ ಸಾಧನೆ ಜಸ್ಟ್ ಮಿಸ್, ಕೆಚ್ಚೆದೆಯ ಹೋರಾಟಕ್ಕೆ ಭಾರಿ ಮೆಚ್ಚುಗೆ!

ಲಿಯು ಯುಚೆನ್‌ ಹಾಗೂ ಅವರ ಡಬಲ್ಸ್‌ ಪಾರ್ಟ್‌ನರ್‌ ಔ ಕ್ಸುವಾನ್ ಯಿ ಚೀನಾವನ್ನು ಪುರುಷರ ಡಬಲ್ಸ್‌ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದರು. ಕಠಿಣ ಡ್ರಾ ಇದ್ದ ಕಾರಣಕ್ಕೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿ ಲಿಯು ಯುಚೆನ್‌ ಹಾಗೂ ಕ್ಸುವಾನ್‌ ಯೀ ಜೋಡಿ ಗ್ರೂಪ್‌ ಹಂತದಲ್ಲಿಯೇ ನಿರ್ಗಮನ ಕಂಡಿದ್ದರು. ಹುವಾಂಗ್ ಯಾಕಿಯಾಂಗ್ ಮತ್ತು ಝೆನ್ ಸಿ ವೀ ಪ್ಯಾರಿಸ್ ಗೇಮ್ಸ್‌ನಲ್ಲಿ ಬ್ಯಾಡ್ಮಿಂಟನ್‌ನ ಮೊದಲ ಚಿನ್ನದ ಪದಕವನ್ನು ಗೆದ್ದರು. ಶುಕ್ರವಾರ ನಡೆದ ಚಿನ್ನದ ಪದಕದ ಪಂದ್ಯದಲ್ಲಿ ಕಿಮ್ ವಾನ್ ಹೊ ಮತ್ತು ಜಿಯಾಂಗ್ ನಾ ಯುನ್ ವಿರುದ್ಧ ಆರಂಭದಿಂದ ಕೊನೆಯವರೆಗೂ ಅವರು ಪ್ರಾಬಲ್ಯ ಮೆರೆದರು. ಕೊರಿಯಾ ಜೋಡಿಯನ್ನು 21-8, 21-11 ಅಂತರದಿಂದ ಕೇವಲ 41 ನಿಮಿಷಗಳ ಆಟದಲ್ಲಿ ಸೋಲಿಸಿದರು.

ಹ್ಯಾಟ್ರಿಕ್ ಒಲಿಂಪಿಕ್ ಮೆಡಲ್‌ನತ್ತ ಮನು ಭಾಕರ್; 2ನೇ ಸ್ಥಾನಿಯಾಗಿ ಫೈನಲ್‌ಗೆ ಲಗ್ಗೆಯಿಟ್ಟ ಹರ್ಯಾಣ ಶೂಟರ್

Scroll to load tweet…