ಭಾರತದ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಜೋಡಿಯಾದ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಜೋಡಿ ಚೀನಾ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದೆ. ಈ ಕುರಿತಾದ ಜೋಡಿ ಇಲ್ಲಿದೆ ನೋಡಿ

ಫುಝೋ(ನ.10): ಭಾರೀ ನಿರೀಕ್ಷೆ ಮೂಡಿಸಿದ್ದ ಭಾರತದ ಪುರುಷರ ಡಬಲ್ಸ್ ಜೋಡಿಯಾದ ಸಾತ್ವಿಕ್ ಹಾಗೂ ಚಿರಾಗ್ ಶೆಟ್ಟಿ, ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದರು.

Scroll to load tweet…

ಚೀನಾ ಓಪನ್‌ ಬ್ಯಾಡ್ಮಿಂಟನ್‌: ಸೆಮಿಫೈನಲ್‌ಗೆ ಸಾತ್ವಿಕ್‌-ಚಿರಾಗ್‌!

ಶನಿವಾರ ನಡೆದ ಪಂದ್ಯದಲ್ಲಿ ಸಾತ್ವಿಕ್-ಚಿರಾಗ್ ಜೋಡಿ, ವಿಶ್ವ ನಂ.1 ಇಂಡೋನೇಷ್ಯಾದ ಮಾರ್ಕಸ್-ಕೆವಿನ್ ಜೋಡಿ ವಿರುದ್ಧ 16-21, 20-22 ರಿಂದ ಸೋತರು. ಇಂಡೋನೇಷ್ಯಾದ ಜೋಡಿ ಮೊದಲ ಗೇಮ್’ನಲ್ಲಿ ಮಿಂಚಿನ ಆಟ ಪ್ರದರ್ಶಿಸಿ ಮುನ್ನಡೆ ಗಳಿಸಿತು. ಆದರೆ ಎರಡನೇ ಗೇಮ್’ನಲ್ಲಿ ಆಕ್ರಮಣಕಾರಿಯಾಟ ಪ್ರದರ್ಶಿಸಿದ ಭಾರತದ ಜೋಡಿ, ವಿಶ್ವ ನಂ.1 ಶ್ರೇಯಾಂಕಿತ ಜೋಡಿಗೆ ಆಘಾತ ಮೂಡಿಸುವ ಹೊಸ್ತಿಲಲ್ಲಿತ್ತು. ಆದರೆ ಕೊನೆಯ ಎಚ್ಚೆತ್ತುಕೊಂಡು ಕೇವಲ 2 ಅಂಕಗಳ ಅಂತರಲ್ಲಿ ಜಯ ಸಾಧಿಸಿತು. ಸಾತ್ವಿಕ್-ಚಿರಾಗ್ ಜೋಡಿ ಟೂರ್ನಿ ಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದರು.

Scroll to load tweet…

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವ ನಂ.3ನೇ ಶ್ರೇಯಾಂಕಿತ ಜೋಡಿಯಾದ ಚೀನಾದ ಲಿ ಜುನ್ ಹುಯಿ ಹಾಗೂ ಲಿಯು ಯು ಚೆನ್ ವಿರುದ್ಧ ಜಯಭೇರಿ ಭಾರಿಸುವ ಮೂಲಕ ಅಂತಿಮ ನಾಲ್ಕರಘಟ್ಟ ಪ್ರವೇಶಿಸಿತ್ತು.