ಕೊಲೆ ಕೇಸ್: ಕುಸ್ತಿಪಟು ಸುಶೀಲ್ ಕುಮಾರ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ..!
* ಛತ್ರಸಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶೀಲ್ ಕುಮಾರ್ ಮೇಲೆ ಚಾರ್ಜ್‌ಶೀಟ್ ಸಲ್ಲಿಕೆ
* ದೆಹಲಿ ಪೊಲೀಸರಿಂದ ಮ್ಯಾಜಿಸ್ಪ್ರೇಟ್ ಮುಂದೆ 170 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ
* ಮೇ.04ರಂದು ಛತ್ರಸಾಲ್‌ನಲ್ಲಿ ಜೂನಿಯರ್ ಕುಸ್ತಿಪಟುವಿನ ಹತ್ಯೆಯಲ್ಲಿ ಸುಶೀಲ್ ಕುಮಾರ್ ಪಾತ್ರ
ನವದೆಹಲಿ(ಆ.03): ಕುಸ್ತಿಪಟು ಸಾಗರ್ ಧನಕರ್‌ರ ಕೊಲೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಮ್ಯಾಜಿಸ್ಪ್ರೇಟ್ ಮುಂದೆ 170 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದು, ದಿಗ್ಗಜ ಕುಸ್ತಿಪಟು, 2 ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್‌ರನ್ನು ಪ್ರಮುಖ ಆರೋಪಿಯಾಗಿ ಹೆಸರಿಸಲಾಗಿದೆ.
ಸುಶೀಲ್ ಕುಮಾರ್ ಜೊತೆ 12 ಜನರ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ಸೇರಿಸಲಾಗಿದೆ. ಮೂಲಗಳ ಪ್ರಕಾರ ಪೊಲೀಸರು ಪ್ರಕರಣದಲ್ಲಿ 50 ಮಂದಿಯನ್ನು ಸಾಕ್ಷಿಯಾಗಿ ಹಾಜರುಪಡಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಮೇ 4ರಂದು ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ಕೊಲೆ ನಡೆದಿತ್ತು.
ಕುಸ್ತಿಪಟು ಸುಶೀಲ್ ಕುಮಾರ್ ಹುಡುಕಿಕೊಟ್ಟವರಿಗೆ 1 ಲಕ್ಷ ರೂ ಬಹುಮಾನ..!
ಛತ್ರಸಾಲ್ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುತ್ತಿದ್ದ ಜೂನಿಯರ್ ನ್ಯಾಷನಲ್ ಕುಸ್ತಿ ಚಾಂಪಿಯನ್ ಸಾಗರ್ ರಾಣಾ ಅವರನ್ನು ಸುಶೀಲ್ ಕುಮಾರ್ ಹಾಗೂ ಮತ್ತವರ ಸಂಗಡಿಗರು ಹತ್ಯೆ ಮಾಡಿದ್ದಾರೆ. ಈ ಸಂಬಂಧ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಸದ್ಯ ತಿಹಾರ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.
ಕುಸ್ತಿ ಪಟು ಸುಶೀಲ್ ಹತ್ಯೆಗೆ ಬೆದರಿಕೆ ಹಾಕಿದ್ದ ರೌಡಿ ಬಂಧನ
ನವದೆಹಲಿ: ಭಾರತದ ಪದಕ ವಿಜೇತ ಕುಸ್ತಿ ಪಟು ಸುಶೀಲ್ ಕುಮಾರ್ ಅವರಿಗೆ ಹತ್ಯೆ ಬೆದರಿಕೆ ಹಾಕಿದ್ದ ಹಾಗೂ ಪಂಜಾಬ್, ದೆಹಲಿ, ಹರ್ಯಾಣ ಮತ್ತು ರಾಜಸ್ಥಾನಗಳಲ್ಲಿನ ಹಲವು ಅಪರಾಧ ಚಟುವಟಿಕೆಗಳಲ್ಲಿ ಬೇಕಾಗಿದ್ದ ಕಾಲಾ ಜತೇಡಿ ಎಂಬ ರೌಡಿಶೀಟರ್‌ನನ್ನು ದಿಲ್ಲಿಯ ವಿಶೇಷ ಪೊಲೀಸ್ ತಂಡ ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿ ಬಂಧಿಸಿದ್ದಾರೆ.
ಅಲ್ಲದೆ ರಾಜಸ್ಥಾನದಲ್ಲಿ ಸುಲಿಗೆ, ಅಪಹರಣ ಮತ್ತು ಹತ್ಯೆ ಪ್ರಕರಣಗಳಲ್ಲಿ ತೊಡಗಿಸಿಕೊಂಡು ಲೇಡಿ ಡಾನ್ ಎಂದೇ ಕುಖ್ಯಾತಿ ಪಡೆದಿದ್ದ ಅನುರಾಧಾಳನ್ನು ಸಹ ದೆಹಲಿ ವಿಶೇಷ ಪೊಲೀಸ್ ಪಡೆ ಬಂಧಿಸಿದೆ. ವಿಶೇಷವೆಂದರೆ ಕಾಲಾ ಜತೇಡಿ ಹುಡುಕಿಕೊಟ್ಟವರಿಗೆ 7 ಲಕ್ಷ ರು. ಬಹುಮಾನ ಘೋಷಿಸಲಾಗಿದ್ದರೆ, ಮಹಿಳಾ ಡಾನ್ ಅನುರಾಧ ಸುಳಿವು ನೀಡಿದವರಿಗೆ 10 ಸಾವಿರ ರು. ಬಹುಮಾನ ಘೋಷಿಸಲಾಗಿತ್ತು.