All England Open: 21 ವರ್ಷದ ಬಳಿಕ ಚಿನ್ನದ ಪದಕ ಗೆಲ್ತಾರಾ ಭಾರತೀಯ ಶಟ್ಲರ್‌ಗಳು..?

* ಇಂದಿನಿಂದ ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಆರಂಭ

* ಸತತ 21 ವರ್ಷಗಳಿಂದ ಚಿನ್ನದ ಪದಕದ ಕನವರಿಕೆಯಲ್ಲಿರುವ ಭಾರತೀಯ ಶಟ್ಲರ್

* 2001ರಲ್ಲಿ ಪುಲ್ಲೇಲಾ ಗೋಪಿಚಂದ್‌ ಪುರುಷರ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದರು

 

Can Lakshya Sen PV Sindhu end India 21 year old wait for another All England title kvn

ಬರ್ಮಿಂಗ್‌ಹ್ಯಾಮ್(ಮಾ.16)‌: ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ (All England Badminton Championship) ಬುಧವಾರ ಆರಂಭಗೊಳ್ಳಲಿದ್ದು, ಭಾರತದ ಶಟ್ಲರ್‌ಗಳು 21 ವರ್ಷಗಳ ಪದಕದ ಬರ ನೀಗಿಸಲು ಎದುರು ನೋಡುತ್ತಿದ್ದಾರೆ. 1899ರಿಂದ ನಡೆಯುತ್ತಿರುವ ಕೂಟದ ಇತಿಹಾಸದಲ್ಲಿ ಭಾರತ ಈವರೆಗೆ 2 ಬಾರಿ ಚಿನ್ನದ ಪದಕ ಗೆದ್ದುಕೊಂಡಿದೆ. 1980ರಲ್ಲಿ ಪ್ರಕಾಶ್‌ ಪಡುಕೋಣೆ (Prakash Padukone) ಹಾಗೂ 2001ರಲ್ಲಿ ಪುಲ್ಲೇಲಾ ಗೋಪಿಚಂದ್‌ (Pullela Gopichand) ಪುರುಷರ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದರು. 

2015ರಲ್ಲಿ ಸೈನಾ ನೆಹ್ವಾಲ್‌ (Saina Nehwal) ಫೈನಲ್‌ ತಲುಪಿದ್ದರೂ ಚಿನ್ನದ ಪದಕ ಗೆಲ್ಲಲು ವಿಫಲರಾಗಿದ್ದರು. ಈ ಬಾರಿ ಭಾರತ 3ನೇ ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದು, 2 ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿ.ವಿ.ಸಿಂಧು (PV Sindhu), ವಿಶ್ವ ಚಾಂಪಿಯನ್‌ಶಿಪ್‌ ಪದಕ ವಿಜೇತರಾದ ಕಿದಂಬಿ ಶ್ರೀಕಾಂತ್‌ (Kidambi Srikanth) ಹಾಗೂ ಲಕ್ಷ್ಯ ಸೆನ್‌ (Lakshya Sen) ಪ್ರಮುಖ ಆಕರ್ಷಣೆಯಾಗಿದ್ದಾರೆ.  ಕಳೆದ ವಾರ ಜರ್ಮನ್‌ ಓಪನ್‌ನಲ್ಲಿ (German Open) ರನ್ನರ್‌-ಅಪ್‌ ಆಗಿದ್ದ 20 ವರ್ಷದ ಸೆನ್‌ ತಮ್ಮ ಅಭೂತಪೂರ್ವ ಲಯ ಮುಂದುವರಿಸುವ ತವಕದಲ್ಲಿದ್ದು, ಮೊದಲ ಸುತ್ತಿನಲ್ಲಿ ಭಾರತದವರೇ ಆದ ಸೌರಭ್‌ ವರ್ಮಾ ವಿರುದ್ಧ ಸೆಣಸಲಿದ್ದಾರೆ. 

ಸಿಂಧುಗೆ ಚೀನಾದ ವಾಂಗ್‌ ಜಿ ಯಿ ಹಾಗೂ ಶ್ರೀಕಾಂತ್‌ಗೆ ಥಾಯ್ಲೆಂಡ್‌ನ ಕಾಂಟಾಫೆನ್ ವಾಂಗ್‌ಚರೊಯೆನ್‌ ಎದುರಾಗಲಿದ್ದಾರೆ. ಸೈನಾ ನೆಹ್ವಾಲ್‌ ಥಾಯ್ಲೆಂಡ್‌ನ ಚೊಚುವಾಂಗ್‌ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. ಸಾಯಿ ಪ್ರಣೀತ್‌, ಸಮೀರ್‌ ವರ್ಮಾ, ಎಚ್‌.ಎಸ್‌.ಪ್ರಣಯ್‌ ಕೂಡಾ ಕಣದಲ್ಲಿದ್ದಾರೆ.

ವಿಶ್ವ ರ‍್ಯಾಂಕಿಂಗ್‌‌: 11ನೇ ಸ್ಥಾನಕ್ಕೆ ಏರಿದ ಲಕ್ಷ್ಯ ಸೆನ್‌

ನವದೆಹಲಿ: ಭಾರತದ ಯುವ ಶಟ್ಲರ್‌, 20 ವರ್ಷದ ಲಕ್ಷ್ಯ ಸೆನ್‌ ಬ್ಯಾಡ್ಮಿಂಟನ್‌ (Badminton) ವಿಶ್ವ ರ‍್ಯಾಂಕಿಂಗ್‌ನಲ್ಲಿ ವೃತ್ತಿಬದುಕಿನ ಶ್ರೇಷ್ಠ 11ನೇ ಸ್ಥಾನಕ್ಕೇರಿದ್ದಾರೆ. ಮಂಗಳವಾರ ಬಿಡುಗಡೆಗೊಂಡ ಪುರುಷರ ಸಿಂಗಲ್ಸ್‌ ನೂತನ ರ‍್ಯಾಂಕಿಂಗ್‌ನಲ್ಲಿ ಅವರು 70,086 ಅಂಕಗಳನ್ನು ಸಂಪಾದಿಸಿದ್ದಾರೆ. ಈ ಪಟ್ಟಿಯಲ್ಲಿ ಡೆನ್ಮಾರ್ಕ್ನ ವಿಕ್ಟರ್‌ ಅಕ್ಸೆಲ್ಸನ್‌ (Viktor Axelsen) ಅಗ್ರಸ್ಥಾನದಲ್ಲಿ ಮುಂದುವರಿದಿದ್ದು, ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌ 12ನೇ ಹಾಗೂ ಸಾಯಿ ಪ್ರಣೀತ್‌ 19ನೇ ಸ್ಥಾನಕ್ಕೆ ಕುಸಿದಿದ್ದಾರೆ. 

ಇನ್ನು ಮಾಜಿ ವಿಶ್ವ ಚಾಂಪಿಯನ್‌ ಪಿ.ವಿ.ಸಿಂಧು ಮಹಿಳಾ ಸಿಂಗಲ್ಸ್‌ನಲ್ಲಿ 7ನೇ ಸ್ಥಾನ ಕಾಯ್ದುಕೊಂಡಿದ್ದು, ಸೈನಾ ನೆಹ್ವಾಲ್‌ 28ನೇ ಸ್ಥಾನದಲ್ಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ರಾಜ್‌ ರಂಕಿರೆಡ್ಡಿ-ಚಿರಾಗ್‌ ಶೆಟ್ಟಿ 8ನೇ ಹಾಗೂ ಅರ್ಜುನ್‌-ಧ್ರುವ್‌ ಕಪಿಲಾ ಜೋಡಿ 40ನೇ ಸ್ಥಾನದಲ್ಲಿದೆ. ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಮಹಿಳಾ ಡಬಲ್ಸ್‌ನಲ್ಲಿ 19ನೇ ಸ್ಥಾನದಲ್ಲಿದ್ದರೆ, ಸಾತ್ವಿಕ್‌ರಾಜ್ ರಂಕಿರೆಡ್ಡಿ - ಅಶ್ವಿನಿ ಪೊನ್ನಪ್ಪ ಜೋಡಿ ಮಿಶ್ರ ಡಬಲ್ಸ್‌ನ 25ನೇ ಸ್ಥಾನ ಪಡೆದುಕೊಂಡಿದೆ.

ಬೆಂಗಳೂರು ಟೆನಿಸ್‌: ಮುಕುಂದ್‌ 2ನೇ ಸುತ್ತಿಗೆ

ಬೆಂಗಳೂರು: ಐಟಿಎಫ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ (ITF Open Tennis Tournament) ಭಾರತದ ಮುಕುಂದ್‌ ಶಶಿಕುಮಾರ್‌ ಹಾಗೂ ನಿಶಾಂತ್‌ ದಾಬಸ್‌ 2ನೇ ಸುತ್ತು ಪ್ರವೇಶಿಸಿದ್ದಾರೆ. ಮಂಗಳವಾರ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಮುಕುಂದ್‌ ಭಾರತದವರೇ ಆದ ರಿಷಬ್‌ ಅಗರ್‌ವಾಲ್‌ ವಿರುದ್ಧ 5-7, 6-3, 6-3 ಸೆಟ್‌ಗಳಲ್ಲಿ ಗೆದ್ದರು. 

Sandeep Nangal ಅಂತಾರಾಷ್ಟ್ರೀಯ ಕಬಡ್ಡಿ ಪಟು ಸಂದೀಪ್ ನಂಗಲ್ ಮೇಲೆ ಭೀಕರ ಗುಂಡಿನ ದಾಳಿ, ಸ್ಥಳದಲ್ಲೇ ಸಾವು!

ನಿಶಾಂತ್‌, ನಿಕ್ಷೇಪ್‌ ರವಿಕುಮಾರ್‌ ವಿರುದ್ಧ 6-1, 7-6(10) ನೇರ ಸೆಟ್‌ಗಳಲ್ಲಿ ಜಯಿಸಿದರು. ಡಬಲ್ಸ್‌ನಲ್ಲಿ ಭಾರತದ ಯೂಕಿ ಭಾಂಬ್ರಿ-ಸಾಕೇತ್‌ ಮೈನೇನಿ, ಅರ್ನವ್‌-ಸೂರಜ್‌, ಮುಕುಂದ್‌-ವಿಷ್ಣುವರ್ಧನ್‌, ಅನಿರುದ್‌್ಧ-ವಿನಾಯಕ್‌, ಅರ್ಜುನ್‌ ಖಾಡೆ-ಗ್ರೇಟ್‌ ಬ್ರಿಟನ್‌ನ ಜೂಲಿಯನ್‌ ಜೋಡಿ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿತು.
 

Latest Videos
Follow Us:
Download App:
  • android
  • ios