ಬೆಂಗಳೂರು(ಡಿ.01): ಬಿಎಸ್ಎಂ ಜೈನ್ ಅಸೋಸಿಯೇಷನ್ ಪ್ರಾಯೋಜಕತ್ವದ ರಾಜ್ಯ ಮಟ್ಟದ ಜೈನ್  ಸಹಕಾರ್ ಕ್ರೀಡೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಡಿಸೆಂಬರ್ 15 ರಂದು(ಭಾನುವಾರ) ರಾಜ್ಯ ಮಟ್ಟದ ಪುರುಷ ಹಾಗೂ ಮಹಿಳೆಯರ ಶಟಲ್ ಬ್ಯಾಡ್ಮಿಂಟನ್ (ಪ್ಲಾಸ್ಟಿಕ್ ಕಾಕ್) ಹಾಗೂ ಬೆಂಗಳೂರಿಗರಿಗೆ ಇತರ ಕ್ರೀಡೆಗಳನ್ನು ಆಯೋಜಿಸಲಾಗಿದೆ.  

ಇದನ್ನೂ ಓದಿ: ಬೆಂಗಳೂರಿನಲ್ಲಿ ಜೈನ್ ಸಹಕಾರ್ ಬ್ಯಾಡ್ಮಿಂಟನ್ ಕ್ರೀಡಾಹಬ್ಬ!

ಬೆಂಗಳೂರಿನಲ್ಲಿ ನೆಲೆಸಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನ ಸಮುದಾಯದವರಿಗೆ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ಬ್ಯಾಡ್ಮಿಂಟನ್ ಸೇರಿದಂತೆ ಮಕ್ಕಳಿಗೆ ಚಿತ್ರಕಲೆ, ಕೇರಂ ಸ್ಪರ್ಧೆ ಹಾಗೂ ಮನೋರಂಜನೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಡಿಸೆಂಬರ್ 7ರೊಳಗೆ ಹೆಸರು ನೋಂದಾಯಿಸಿಕೊಳ್ಳಲು ಆಯೋಜಕರಾದ ಹರ್ಷೇಂದ್ರ ಜೈನ್ ಮಾಳ  ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಟೆಸ್ಟ್ ತ್ರಿಶತಕಕ್ಕೆ ವಿರೇಂದ್ರ ಸೆಹ್ವಾಗ್ ಕಾರಣ; ವಾರ್ನರ್ ಬಿಚ್ಚಿಟ್ರು ಸೀಕ್ರೆಟ್!

ಜೈನ್ ಸಹಕಾರ ಕ್ರೀಡೋತ್ಸವ ನಾಗರಭಾವಿಯಲ್ಲಿರುವ ಅಕ್ಷಯ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಲಿದೆ. ಡಿ.15ರ ಭಾನುವಾರ ಬೆಳಗ್ಗೆ 8.30ಕ್ಕೆ ಸ್ಪರ್ಧೆಗಳು ಆರಂಭಗೊಳ್ಳಲಿದೆ. ಕ್ರೀಡಾಕೂಟದ ಉದ್ಘಾಟನೆಯನ್ನು ಮಹಾನಗರ ಪಾಲಿಕೆ ಮೇಯರ್ ಗೌತಮ್  ಕುಮಾರ್, ಎಕ್ಸ್‌ಲೆಂಟ್ ವಿದ್ಯಾಸಂಸ್ಥೆಯ ಯುವರಾಜ್ ಜೈನ್, ಐಪಿಎಸ್ ಅಧಿಕಾರಿಗಳು ಹಾಗೂ ನ್ಯಾಯಾಧೀಶರು ನೆರವೇರಿಸಲಿದ್ದಾರೆ.  ಪ್ರತಿ ವರ್ಷದದಂತೆ ಈ ವರ್ಷವೂ ಜೈನ್ ಸಹಕಾರ್ ಕ್ರೀಡೋತ್ಸವ ಯಶಸ್ವಿಗೊಳಿಸಲು ಆಯೋಜಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.