Asianet Suvarna News Asianet Suvarna News

ಮೇರಿ vs ನಿಖತ್‌ ನಡುವೆ ಇಂದು ಬಾಕ್ಸಿಂಗ್ ಫೈಟ್‌

ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್ ಹಾಗೂ ಯುವ ಬಾಕ್ಸರ್‌ ನಿಖತ್‌ ಜರೀನ್‌ ನಡುವೆ ಕಾದಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯ ಮಹಿಳೆಯರ 51 ಕೆ.ಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುವವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

Boxer Mary Kom to take on Zareen un 51 kg trials
Author
New Delhi, First Published Dec 28, 2019, 1:25 PM IST

ನವದೆಹಲಿ[ಡಿ.28]: 6 ಬಾರಿ ವಿಶ್ವ ಚಾಂಪಿಯನ್‌ ಮೇರಿ ಕೋಮ್‌ ಹಾಗೂ ಯುವ ಬಾಕ್ಸರ್‌ ನಿಖತ್‌ ಜರೀನ್‌ ನಡುವಿನ ಬಹುನಿರೀಕ್ಷಿತ ಪಂದ್ಯ ಶನಿವಾರ ಇಲ್ಲಿ ನಡೆಯಲಿದೆ. 

ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯ ಮಹಿಳೆಯರ 51 ಕೆ.ಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುವವರು ಯಾರು ಎನ್ನುವುದು ಈ ಪಂದ್ಯದಲ್ಲಿ ನಿರ್ಧಾರವಾಗಲಿದೆ. ಶುಕ್ರವಾರ ನಡೆದ ಆಯ್ಕೆ ಟ್ರಯಲ್ಸ್‌ನ ಮೊದಲ ಪಂದ್ಯದಲ್ಲಿ ಮೇರಿ ಹಾಗೂ ನಿಖತ್‌ ಸುಲಭ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದರು.

ಅಭಿನವ ಬಿಂದ್ರಾ ವಿರುದ್ಧ ಕಿಡಿಕಾರಿದ ಮೇರಿ ಕೋಮ್

ಮಾಜಿ ಕಿರಿಯರ ವಿಶ್ವ ಚಾಂಪಿಯನ್‌ ಜರೀನ್‌, ಹಾಲಿ ರಾಷ್ಟ್ರೀಯ ಚಾಂಪಿಯನ್‌ ಜ್ಯೋತಿ ಗುಲಿಯಾ ವಿರುದ್ಧ ಗೆಲುವು ಸಾಧಿಸಿದರು. ಹಲವು ಬಾರಿ ಏಷ್ಯನ್‌ ಚಾಂಪಿಯನ್‌ ಆಗಿರುವ ಮೇರಿ ಕೋಮ್‌, ರಿತು ಗ್ರೇವಾಲ್‌ ವಿರುದ್ಧದ ಪಂದ್ಯದಲ್ಲಿ ಜಯಭೇರಿ ಬಾರಿಸಿದರು.

ಮೇರಿ-ನಿಖತ್‌ ಬಾಕ್ಸಿಂಗ್‌ ಫೈಟ್‌ಗೆ ವೇದಿಕೆ ಸಿದ್ಧ!

ಭಾರತೀಯ ಬಾಕ್ಸಿಂಗ್‌ ಫೆಡರೇಷನ್‌ (ಬಿಎಫ್‌ಐ) ಅಧ್ಯಕ್ಷ ಅಜಯ್‌ ಸಿಂಗ್‌, ಸನ್ಮಾನ ಕಾರ್ಯಕ್ರಮವೊಂದರಲ್ಲಿ ಮೇರಿಯ ಸಾಧನೆಗಳನ್ನು ಪರಿಗಣಿಸಿ ಒಲಿಂಪಿಕ್‌ ಅರ್ಹತಾ ಸುತ್ತಿಗೆ ನೇರ ಪ್ರವೇಶ ಕಲ್ಪಿಸಲಾಗುತ್ತದೆ ಎಂದು ಘೋಷಿಸಿದ್ದರು. ಇದನ್ನು ವಿರೋಧಿಸಿದ್ದ ನಿಖತ್‌ ಜರೀನ್‌, ತಮಗೆ ಸ್ಪರ್ಧಿಸಲು ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ಆಯ್ಕೆ ಟ್ರಯಲ್ಸ್‌ ನಡೆಸುವಂತೆ ಪಟ್ಟು ಹಿಡಿದಿದ್ದರು. ನಿಖತ್‌ ಬಗ್ಗೆ ಹಲವು ಬಾರಿ ಲಘುವಾಗಿ ಮಾತನಾಡಿದರೂ, ಬಿಎಫ್‌ಐ ನಿರ್ಧಾರವನ್ನು ಗೌರವಿಸುವುದಾಗಿ ಮೇರಿ ಹೇಳಿದ್ದರು.
 

Follow Us:
Download App:
  • android
  • ios