Asianet Suvarna News Asianet Suvarna News

ಬಾಕ್ಸಿಂಗ್: ಅಮಿತ್‌, ಮೇರಿಗೆ ಕಂಚಿನ ಪದಕ

ಭಾರತದ ತಾರಾ ಬಾಕ್ಸರ್‌ಗಳಾದ ವಿಕಾಸ್ ಕೃಷ್ಣನ್ ಹಾಗೂ ಸಿಮ್ರಜಿತ್ ಕೌರ್ ಫೈನಲ್ ಪ್ರವೇಶಿಸಿದ್ದಾರೆ. ಇನ್ನು ಮೇರಿ ಕೋಮ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

Boxer Mary Kom Settles for Bronze Simrajit Kaur and Vikas Krishan Reach Final
Author
Jordan, First Published Mar 11, 2020, 10:21 AM IST

ಅಮ್ಮಾನ್‌(ಮಾ.11): ಏಷ್ಯನ್‌/ಒಷಿಯಾನಿಯಾ ಒಲಿಂಪಿಕ್‌ ಅರ್ಹತಾ ಸುತ್ತಿನಲ್ಲಿ ಭಾರತಕ್ಕೆ ಮಿಶ್ರಫಲ ದೊರೆತಿದೆ. ಭಾರತದ ತಾರಾ ಬಾಕ್ಸರ್‌ಗಳಾದ ಮೇರಿ ಕೋಮ್‌, ಅಮಿತ್‌ ಪಂಘಾಲ್‌ ಹಾಗೂ ಲೊವ್ಲಿನಾ ಬೋರ್ಗಯಿ ಸೆಮಿಫೈನಲ್‌ನಲ್ಲಿ ಪರಾಭವ ಹೊಂದುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟರೆ, ವಿಕಾಸ್‌ ಕೃಷನ್‌ ಫೈನಲ್‌ ಪ್ರವೇಶಿಸಿದ್ದಾರೆ. ಒಟ್ಟಾರೆ ಭಾರತದ 8 ಬಾಕ್ಸರ್‌ಗಳು ಈಗಾಗಲೇ ಒಲಿಂಪಿಕ್‌ ಟಿಕೆಟ್‌ ಪಡೆದಿದ್ದಾರೆ. 2016ರ ಒಲಿಂಪಿಕ್ಸ್‌ನಲ್ಲಿ ಕೇವಲ 3 ಬಾಕ್ಸರ್‌ಗಳು ಮಾತ್ರ ಒಲಿಂಪಿಕ್‌ ಅರ್ಹತೆ ಪಡೆದಿದ್ದರು.

ಮಂಗಳವಾರ ನಡೆದ ಪುರುಷರ 52 ಕೆ.ಜಿ. ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ವಿಶ್ವ ಬೆಳ್ಳಿ ವಿಜೇತ ಅಮಿತ್‌, ಚೀನಾದ ಜಿಂಗಾನ್‌ ಹು ವಿರುದ್ಧ 2-3 ರಿಂದ ಸೋಲು ಕಂಡರು. 2012ರ ಲಂಡನ್‌ ಒಲಿಂಪಿಕ್ಸ್‌ನ ಕಂಚು ವಿಜೇತೆ, ತಾರಾ ಮಹಿಳಾ ಬಾಕ್ಸರ್‌ ಮೇರಿ ಕೋಮ್‌, 51 ಕೆ.ಜಿ. ವಿಭಾಗದ ಸೆಮೀಸ್‌ನಲ್ಲಿ ಮಾಜಿ ಯೂತ್‌ ವಿಶ್ವ ಚಾಂಪಿಯನ್‌ ಚೀನಾದ ಯುನ್‌ ಚಾಂಗ್‌ ವಿರುದ್ಧ 2-3 ರಿಂದ ಪರಾಭವ ಹೊಂದುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಅಮಿತ್, ಮೇರಿ ಕೋಮ್‌ಗೆ 2020ರ ಒಲಿಂಪಿಕ್ಸ್ ಟಿಕೆಟ್..!

ಮಹಿಳೆಯರ 69 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಲೊವ್ಲಿನಾ, ಚೀನಾದ ಹಾಂಗ್‌ ಗು ಎದುರು 0-5ರಿಂದ ಸೋಲು ಕಾಣುವ ಮೂಲಕ ಕಂಚಿನ ಪದಕ ಗೆದ್ದರು. 75 ಕೆ.ಜಿ. ವಿಭಾಗದ ಮತ್ತೊಂದು ಸೆಮೀಸ್‌ ಪಂದ್ಯದಲ್ಲಿ ಪೂಜಾ ರಾಣಿ, ಒಲಿಂಪಿಕ್‌ ಪದಕ ವಿಜೇತೆ ಎದುರು 0-5 ರಿಂದ ಪರಾಭವ ಹೊಂದುವ ಮೂಲಕ ಕಂಚು ಜಯಿಸಿದರು.

ಫೈನಲ್‌ಗೆ ವಿಕಾಸ್‌:

ಪುರುಷರ 69 ಕೆ.ಜಿ. ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನ ವಿಜೇತ ವಿಕಾಸ್‌ ಕೃಷನ್‌, ವಿಶ್ವ ಚಾಂಪಿಯನ್‌ಶಿಪ್‌ ಕಂಚು ವಿಜೇತ ಕಜಕಸ್ತಾನದ ಅಬ್ಲಿಖಾನ್‌ ಜುಸ್ಸಾಪೊವ್‌ ವಿರುದ್ಧ 3-2 ರಿಂದ ಗೆಲುವು ಪಡೆದು ಫೈನಲ್‌ ಪ್ರವೇಶಿಸಿದರು. ಅತ್ಯದ್ಭುತ ಪಂಚ್‌ಗಳಿಂದ ಗಮನಸೆಳೆದ ವಿಕಾಸ್‌, ಎದುರಾಳಿ ಬಾಕ್ಸರ್‌ ಸುಧಾರಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಪ್ರಬಲ ಹೊಡೆತಗಳ ಮೂಲಕ ಗಮನಸೆಳೆದ ವಿಕಾಸ್‌, ಉತ್ತಮ ಪ್ರದರ್ಶನದೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟರು.
 

Follow Us:
Download App:
  • android
  • ios