ಫ್ರೀಸ್ಟೈಲ್ ಈಜಿನಲ್ಲಿ ರಾಷ್ಟ್ರೀಯ ದಾಖಲೆ ಮುರಿದ ನಟ ಮಾಧವನ್ ಪುತ್ರ ವೇದಾಂತ್!
ಸ್ವಿಮ್ಮಿಂಗ್‌ನಲ್ಲಿ ಹೊಸ ಹೊಸ ದಾಖಲೆ ನಿರ್ಮಾಣಮಾಡುತ್ತಿರುವ ನಟ ಮಾಧವನ್ ಪುತ್ರ ವೇದಾಂತ್ ಇದೀಗ ಜ್ಯೂನಿಯರ್ ರಾಷ್ಟ್ರೀಯ ದಾಖಲೆ ನಿರ್ಮಿಸಿ ಮತ್ತೆ ಹೊಸ ಸಂಚಲನ ಮೂಡಿಸಿದ್ದಾರೆ
ನವದೆಹಲಿ(ಜು.18): ಬಾಲಿವುಡ್ ನಟ ಆರ್ ಮಾಧನವನ್ ಪುತ್ರ ವೇದಾಂತ್ ಮಾಧವನ್ ಈಜು ಸ್ಪರ್ಧೆಯಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. 1,500 ಮೀಟರ್ ಫ್ರೈಸ್ಟೈಲ್ ಸ್ವಿಮ್ಮಿಂಗ್ ಕಿರಿಯರ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಮುರಿದಿ ಹೊಸ ದಾಖಲೆ ಬರೆದಿದ್ದಾರೆ. ಜ್ಯೂನಿಯರ್ ಅಕ್ವೆಟಿಕ್ಸ್ ಫ್ರೀಸ್ಟೈಲ್ 1500 ಮೀಟರ್ ಸ್ವಿಮ್ಮಿಂಗ್ ಸ್ಪರ್ಧೆಯನ್ನು 16 ನಿಮಿಷದಲ್ಲಿ ಪೂರ್ಣಗೊಳಿಸಿದ ದಾಖಲೆಯನ್ನು ವೇದಾಂತ್ ಮಾಧವನ್ ಮುರಿದಿದ್ದಾರೆ. ಈ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಪುತ್ರನ ಸಾಧನೆಯನ್ನು ನಟ ಮಾಧನವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಮಾದವನ್ ಹಂಚಿಕೊಂಡ ವಿಡಿಯೋದಲ್ಲಿ ವೀಕ್ಷಕ ವಿವರಣೆಗಾರ ದಾಖಲೆ ಕುರಿತು ಉಲ್ಲೇಖಿಸಿದ್ದಾರೆ. ಅತ್ಯುತ್ತಮ ಪೇಸ್ ಮೂಲಕ ವೇದಾಂತ್ ಅದ್ವೈತ್ ಪೇಜ್ ರೆಕಾರ್ಡ್ ಮುರಿದಿದ್ದಾರೆ.
780 ಮೀಟರ್ ಬಳಿಕ ವೇದಾಂತ್ ವೇಗ ಹೆಚ್ಚಿಸಿಕೊಂಡು ಕ್ಷಣಾರ್ಧದಲ್ಲೇ ಗುರಿ ತಲುಪಿದರು. ಜ್ಯೂನಿಯರ್ ರೆಕಾರ್ಡ್ ಬ್ರೇಕ್ ಮಾಡಲು ವೇದಾಂತ್ ಸಫಲರಾಗುತ್ತಾರಾ? 15 ನಿಮಿಷದಲ್ಲಿ ಈಜು ಪೂರ್ಣಗೊಳಿಸಿದರೆ ಹೊಸ ದಾಖಲೆ ನಿರ್ಮಾಣವಾಗಲಿದೆ. ವೇದಾಂತ್ ತಮ್ಮ ವೇಗ ಹೆಚ್ಚಿಸಿದ್ದಾರೆ. ಈ ಮೂಲಕ ವೇದಾಂತ್ ಹೊಸ ದಾಖಲೆ ಬರೆದಿದ್ದಾರೆ. ಎಂದು ವೀಕ್ಷಕ ವಿವರಣೆಗಾರ ಹೇಳಿದ್ದಾರೆ. ವೇದಾಂತ್ ಜ್ಯೂನಿಯರ್ ರಾಷ್ಟ್ರೀಯ ದಾಖಲೆ ಮುರಿಯುತ್ತಾರೆ ಎಂದು ಊಹಿಸಿರಲಿಲ್ಲ. ಅತ್ಯುತ್ತಮ ವೇಗ ಹಾಗೂ ಸರಿಯಾದ ಕ್ರಮದ ಈಜಿನಿಂದ ಇದು ಸಾಧ್ಯವಾಗಿದೆ ಎಂದು ವೀಕ್ಷಕ ವಿವರಣೆಗಾರ ಹೇಳಿದ್ದಾರೆ.
ತಂದೆಯ ನೆರಳಲ್ಲಿ ಬದುಕಲು ಇಷ್ಟವಿಲ್ಲ; ನಟ ಮಾಧವನ್ ಪುತ್ರ ವೇದಾಂತ್ ಮಾತು
ಡೆನ್ಮಾರ್ಕ್ ಓಪನ್ ಈಜಿನಲ್ಲಿ ಚಿನ್ನದ ಪದಕ ಗೆದ್ದಿದ್ದ ವೇದಾಂತ್
ಡೆನ್ಮಾರ್ಕ್ನ ಕೊಪನ್‌ಹೆಗೇನ್‌ನಲ್ಲಿ ನಡೆದ ಡ್ಯಾನಿಶ್ ಓಪನ್ ಈಜು ಸ್ಪರ್ಧೆಯಲ್ಲಿ ಭಾರತದ ವೇದಾಂತ್ ಮಾಧವನ್ ಚಿನ್ನದ ಪದಕ ಗೆದ್ದಿದ್ದಾರೆ. ತಮಿಳಿನ ಖ್ಯಾತ ನಟ ಆರ್.ಮಾಧವನ್ ಅವರ ಪುತ್ರನಾಗಿರುವ, 16 ವರ್ಷದ ವೇದಾಂತ್ ಪುರುಷರ 800 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ 8 ನಿಮಿಷ 17.28 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಸ್ವರ್ಣ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಶುಕ್ರವಾರ 1500 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ 15.57.86 ನಿಮಿಷದಲ್ಲಿ ಗುರಿ ಮುಟ್ಟಿದ್ದ ವೇದಾಂತ್ ಬೆಳ್ಳಿ ಗೆದ್ದಿದ್ದರು. ಇನ್ನು, ಸಾಜನ್ ಪ್ರಕಾಶ್ ಪುರುಷರ 100 ಮೀ. ಬಟರ್‌ಪ್ಲೈ ಸ್ಪರ್ಧೆಯಲ್ಲಿ 5ನೇ ಸ್ಥಾನ ಪಡೆದರು. ಭಾರತ ಕೂಟದಲ್ಲಿ 2 ಚಿನ್ನ, 1 ಬೆಳ್ಳಿ ಗೆದ್ದಿದೆ. ಶುಕ್ರವಾರ ಸಾಜನ್ 200 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಚಿನ್ನ ಪಡೆದಿದ್ದರು.
ಬಟರ್‌ಫ್ಲೈ ವಿಭಾಗದಲ್ಲಿ ಬೆಳ್ಳಿ
ಡೆನ್ಮಾರ್ಕ್ನ ಕೊಪನ್‌ಹೆಗೇನ್‌ನಲ್ಲಿ ನಡೆದ ಯುವ ಪ್ರತಿಭೆ ವೇದಾಂತ್ ಮಾಧವನ್ 200 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದಾರೆ. 15.57.86 ನಿಮಿಷದಲ್ಲಿ ಗುರಿ ಮುಟ್ಟಿದ ವೇದಾಂತ್ ಮಾಧವನ್ ಬೆಳ್ಳಿ ಗೆದ್ದರು.