ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ಹಣ ಪಾವತಿಸದೇ ಆತಿಥ್ಯದ ಹಕ್ಕು ಕಳೆದುಕೊಂಡ ಭಾರತ..!

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ಟೂರ್ನಿಯ ಆತಿಥ್ಯ ಶುಲ್ಕ ಮುಂಗಡವಾಗಿ ಪಾವತಿಸಿದ ಹಿನ್ನಲೆಯಲ್ಲಿ ಭಾರತ ಮುಖಭಂಗ ಅನುಭವಿಸಿದೆ, ಮಾತ್ರವಲ್ಲ ಆತಿಥ್ಯವೂ ಕೈ ತಪ್ಪಿದೆ. ಭಾರತ ಬಾಕ್ಸಿಂಗ್‌ ಫೆಡರೇಷನ್‌ ಈಗ ಪೆನಾಲ್ಟಿ ಕಟ್ಟಬೇಕಾಗಿ ಬಂದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.

BFI fails to pay host fee  India loses hosting rights of men's World Boxing Championships

ನವದೆಹಲಿ(ಏ.30): 2021ರ ಪುರುಷರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ಆತಿಥ್ಯದ ಹಕ್ಕಿನಿಂದ ಭಾರತ ವಂಚಿತವಾಗಿದೆ. ಚಾಂಪಿಯನ್‌ಶಿಪ್‌ ನಡೆಸಲು ಮುಂಗಡ ಪಾವತಿಸಬೇಕಿದ್ದ ಹಣವನ್ನು ಕಟ್ಟುವಲ್ಲಿ ಭಾರತ ಬಾಕ್ಸಿಂಗ್‌ ಫೆಡರೇಷನ್‌ ವಿಫಲವಾಗಿದ್ದರಿಂದ ಆತಿಥ್ಯದ ಹಕ್ಕು ಕೈ ತಪ್ಪಿದೆ. 

ಇದೀಗ ಸರ್ಬಿಯಾ ಈ ಹಕ್ಕು ಪಡೆದಿದೆ. 2021ರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನ ಆತಿಥ್ಯವನ್ನು ಭಾರತ 2017ರಲ್ಲಿ ಪಡೆದಿತ್ತು. ಆದರೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆ (ಎಐಬಿಎ) ಭಾರತ ಹೊಂದಿದ್ದ ಒಪ್ಪಂದವನ್ನು ರದ್ದುಗೊಳಿಸಿದೆ. ಟೂರ್ನಿ ರದ್ದಾಗಿರುವ ಕಾರಣ, ಭಾರತ ಪೆನಾಲ್ಟಿ ರೂಪದಲ್ಲಿ ಸುಮಾರು 38,000 ರುಪಾಯಿ ಕಟ್ಟಬೇಕು ಎಂದು ಎಐಬಿಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಲದಿನಗಳ ಹಿಂದೆ ಬಾಕ್ಸಿಂಗ್‌ ಸಂಸ್ಥೆಯಿಂದ ಮಾನಸಿಕ ಫಿಟ್ನೆಸ್‌ ಪಾಠ

ಭಾರತೀಯ ಬಾಕ್ಸಿಂಗ್‌ ಫೆಡರೇಷನ್‌ (ಬಿಎಫ್‌ಐ) ಕೆಲದಿನಗಳ ಹಿಂದಷ್ಟೇ 374 ಬಾಕ್ಸರ್‌ಗಳು ಹಾಗೂ ಕೋಚ್‌ಗಳಿಗೆ ಆನ್‌ಲೈನ್‌ನಲ್ಲಿ ಮಾನಸಿಕ ಸದೃಢತೆಯ ಕಾರ್ಯಾಗಾರ ನಡೆಸಿತು. ಈ ಮೂಲಕ ಮಾನಸಿಕ ಫಿಟ್ನೆಸ್‌ಗೆ ಸಂಬಂಧಿಸಿದ ಕಾರ್ಯಾಗಾರ ನಡೆಸಿದ ದೇಶದ ಮೊದಲ ರಾಷ್ಟ್ರೀಯ ಫೆಡರೇಷನ್‌ ಎನಿಸಿಕೊಂಡಿತು. 

ಕೊರೋನಾ ಭೀತಿಯ ನಡುವೆಯೂ ಏಷ್ಯನ್ ಬಾಕ್ಸಿಂಗ್ ಟೂರ್ನಿಗೆ ಭಾರತ ಆತಿಥ್ಯ

ಏಷ್ಯನ್‌ ಬಾಕ್ಸಿಂಗ್‌ ಟೂರ್ನಿಗೆ ಆತಿಥ್ಯ ವಹಿಸಿದೆ ಭಾರತ

 ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ಗೆ ಭಾರತ ಆತಿಥ್ಯ ವಹಿಸಲಿದೆ. ಬಾಕ್ಸಿಂಗ್‌ ಟೂರ್ನಿ 2020ರ ನವೆಂಬರ್‌-ಡಿಸೆಂಬರ್‌ ತಿಂಗಳಲ್ಲಿ ನಡೆಯಲಿದೆ ಎಂದು ಭಾರತ ಬಾಕ್ಸಿಂಗ್‌ ಫೆಡರೇಷನ್‌ (ಬಿಎಫ್‌ಐ) ಸೋಮವಾರ ತಿಳಿಸಿದೆ. 

1980ರಲ್ಲಿ ಭಾರತ ಪುರಷರ ಏಷ್ಯನ್‌ ಕೂಟ ಆಯೋಜಿಸಿತ್ತು, 2003ರಲ್ಲಿ ಮಹಿಳಾ ಏಷ್ಯನ್‌ ಟೂರ್ನಿಗೆ ಆತಿಥ್ಯ ನೀಡಿತ್ತು. ಇದೀಗ ಪುರುಷ ಹಾಗೂ ಮಹಿಳಾ ಎರಡೂ ವಿಭಾಗದ ಟೂರ್ನಿಯನ್ನು ಆಯೋಜಿಸಲು ಉದ್ದೇಶಿಸಿದೆ.
 

Latest Videos
Follow Us:
Download App:
  • android
  • ios