ಬೆಂಗಳೂರು(ನ.12): ಪ್ರತಿ ನವೆಂಬರ್‌ನಲ್ಲಿ ಕರ್ನಾಟಕ ಟೆನಿಸ್ ಸಂಸ್ಥೆ ಮೈದಾನದಲ್ಲಿ ನಡೆಯುತ್ತಿದ್ದ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯನ್ನು ಈ ಬಾರಿ 2020ರ ಫೆ.10 ರಿಂದ 16ರ ವರೆಗೆ ನಡೆಸಲು ನಿರ್ಧರಿಸಲಾಗಿದೆ. ಟೂರ್ನಿಯನ್ನು 3 ತಿಂಗಳ ಕಾಲ ಮುಂದೂಡಲಾಗಿದೆ.

ಬೆಂಗಳೂರು ಓಪನ್: ಪ್ರಜ್ಞೇಶ್ ಚಾಂಪಿಯನ್

ಬೆಂಗಳೂರು ಓಪನ್, ಪುಣೆ ಎಟಿಪಿ 250 ಟೂರ್ನಿಯನ್ನು ಅನುಸರಿಸಲಿದ್ದು, ಆಸ್ಟ್ರೇಲಿಯನ್ ಓಪನ್ ಮಾದರಿಯಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ತಾರಾ ಟೆನಿಸಿಗರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಟೂರ್ನಿಯ ಪ್ರಶಸ್ತಿ ಮೊತ್ತವನ್ನು ಅಂದಾಜು ₹1.16 ಕೋಟಿಗೆ ಏರಿಸಲಾಗಿದೆ. ಟೂರ್ನಿಗೆ ಕರ್ನಾಟಕ ರಾಜ್ಯ ಸರ್ಕಾರ ಸೇರಿದಂತೆ ಕಾರ್ಪೋರೆಟ್ ಕಂಪೆನಿಗಳು ಪ್ರಾಯೋಜಕತ್ವ ನೀಡುತ್ತಿವೆ.

ಟೆನಿಸ್ ರ‍್ಯಾಂಕಿಂಗ್‌: ಅಗ್ರ 100ರ ಪಟ್ಟಿ ಲಿಯಾಂಡರ್ ಪೇಸ್ ಔಟ್

ಕಳೆದ ಆವತ್ತಿಯ ಬೆಂಗಳೂರು ಓಪನ್ ಟೂರ್ನಿಯಲ್ಲಿ ಪ್ರಜ್ಞೇಶ್ ಗುಣೇಶ್ವರನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ತಮ್ಮ ದೇಶದವರೇ ಆದ ಸಾಕೇತ್ ಮೈನೇನಿ ವಿರುದ್ಧ 6-2, 6-2 ನೇರ ಸೆಟ್ ಗಳಲ್ಲಿ ಮಣಿಸಿ ಗುಣೇಶ್ವರನ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.