ಬೆಂಗಳೂರು(ಫೆ.08): ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟದ ಬಾಲಕರ ಹಾಗೂ ಬಾಲಕಿಯರ ಖೋ-ಖೋ ಸ್ಪರ್ಧೆಯಲ್ಲಿ ಬೆಳಗಾವಿ ತಂಡ ಚಿನ್ನದ ಪದಕ ಜಯಿಸಿದೆ. ಫೈನಲ್‌ನಲ್ಲಿ ಬಾಲಕರ ಹಾಗೂ ಬಾಲಕಿಯರ ತಂಡಗಳೆರಡೂ ಬಾಗಲಕೋಟೆ ತಂಡದ ವಿರುದ್ಧ ಜಯಗಳಿಸಿದವು. 

ಇದನ್ನೂ ಓದಿ: ಮಿನಿ ಒಲಿಂಪಿಕ್ಸ್‌ ಈಜು: ವಿದಿತ್‌ಗೆ ಡಬಲ್‌ ಚಿನ್ನ

ಎರಡೂ ವಿಭಾಗಗಳಲ್ಲಿ ಹಾವೇರಿ ಹಾಗೂ ರಾಯಚೂರು ತಂಡಗಳು ಕಂಚಿನ ಪದಕಕ್ಕೆ ತೃಪ್ತಿಪಟ್ಟವು. ಬಾಲಕರ ಅಥ್ಲೆಟಿಕ್ಸ್‌ 400 ಮೀ. ಓಟದಲ್ಲಿ ಧೃವ್‌ ಬಲ್ಲಾಳ್‌ ಚಿನ್ನ ಗೆದ್ದರೆ, ಬಾಲಕಿಯರ 400 ಮೀ. ಓಟದಲ್ಲಿ ಪ್ರಿಯಾಂಕ ಒಲೇಕಾರ್‌ ಸ್ವರ್ಣ ಪದಕಕ್ಕೆ ಮುತ್ತಿಟ್ಟರು. 

ಇದನ್ನೂ ಓದಿ: ಒಲಿಂಪಿಕ್ಸ್‌ಗೆ ಕೊರೋನಾ ಭೀತಿ: ಸ್ಪಷ್ಟನೆ ನೀಡಿದ ಆಯೋಜಕರು

ಬಾಲಕರ ಲಾಂಗ್‌ಜಂಪ್‌ನಲ್ಲಿ ಪರ್ವೇಶ್‌, ಬಾಲಕಿಯರ ಲಾಂಗ್‌ ಜಂಪ್‌ನಲ್ಲಿ ಅದ್ವಿಕಾ ಆದಿತ್ಯ ಚಿನ್ನದ ಪದಕ ಜಯಿಸಿದರು. ಬ್ಯಾಡ್ಮಿಂಟನ್‌ ಬಾಲಕರ ಸಿಂಗಲ್ಸ್‌ನಲ್ಲಿ ಸಾತ್ವಿಕ್‌ ಶಂಕರ್‌, ಬಾಲಕಿಯರ ಸಿಂಗಲ್ಸ್‌ನಲ್ಲಿ ಅನುಷ್ಕಾ ಮೊದಲ ಸ್ಥಾನ ಪಡೆದರು.