ಬೆಂಗಳೂರು(ಫೆ.06):  ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟದ 3ನೇ ದಿನವಾದ ಬುಧವಾರ ಈಜು ಸ್ಪರ್ಧೆಯಲ್ಲಿ ಬೆಂಗಳೂರಿನ ಡಾಲ್ಫಿನ್‌ ಆಕ್ವಾಟಿಕ್ಸ್‌ ಕೇಂದ್ರದ ವಿದಿತ್‌ 2 ಚಿನ್ನ ಜಯಿಸಿದರು. ಬಾಲಕರ 200 ಮೀ. ಬ್ರೆಸ್ಟ್‌ ಸ್ಟ್ರೋಕ್ಸ್, 50 ಮೀ. ಬಟರ್‌ಫ್ಲೈನಲ್ಲಿ ಅವರು ಸ್ವರ್ಣಕ್ಕೆ ಮುತ್ತಿಟ್ಟರು. 

ಬಾಲಕಿಯರ 200 ಮೀ., 50 ಮೀ. ಬಟರ್‌ಫ್ಲೈನಲ್ಲಿ ರಿಷಿಕಾ, 50 ಮೀ. ಫ್ರೀಸ್ಟೈಲ್‌, 50 ಮೀ. ಬ್ಯಾಕ್‌ಸ್ಟೊ್ರೕಕ್‌ನಲ್ಲಿ ರಿಧಿಮಾ ಚಿನ್ನ ಜಯಿಸಿದರು. ಬಾಲಕರ ವಿಭಾಗದ ಫುಟ್ಬಾಲ್‌ನಲ್ಲಿ ಬೆಂಗಳೂರು ಹಾಗೂ ಬೆಳಗಾವಿ ತಂಡಗಳು ಫೈನಲ್‌ಗೇರಿದರೆ, ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ, ಬೆಂಗಳೂರು ತಂಡಗಳು ಪ್ರಶಸ್ತಿಗೆ ಸೆಣಸಲಿವೆ. 

ವಾಲಿಬಾಲ್‌ ಬಾಲಕರ ವಿಭಾಗದಲ್ಲಿ ಬೆಂಗಳೂರು, ಬಾಲಕಿಯರ ವಿಭಾಗದಲ್ಲಿ ಕೊಪ್ಪಳ ತಂಡಗಳು ಪ್ರಶಸ್ತಿ ಗೆದ್ದವು. ನೆಟ್‌ಬಾಲ್‌ ಬಾಲಕರ ವಿಭಾಗದಲ್ಲಿ ಚಿತ್ರದುರ್ಗ, ಬಾಲಕಿಯರ ವಿಭಾಗದಲ್ಲಿ ಎಸ್‌ಎವಿಎಂ ಬೆಂಗಳೂರು ತಂಡಗಳು ಚಿನ್ನ ಗೆದ್ದವು.