ತಪ್ಪಿಸಿಕೊಂಡು ಓಡಿ ಹೋಗಲು ಯತ್ನ, ಬಾಸ್ಕೆಟ್‌ಬಾಲ್ ಆಟಗಾರ್ತಿಯ ಕ್ರೀಡಾಂಗಣದಿಂದ ಕೆಳಕ್ಕೆ ತಳ್ಳಿದ ಕಾಮುಕರು!
18ರ ಹರೆಯದ ಪ್ರತಿಭಾನ್ವಿತ ಬಾಸ್ಕೆಟ್‌ಬಾಲ್ ಆಟಗಾರ್ತಿಯನ್ನು ಕ್ರೀಡಾಂಗಣ ಮೇಲಿನ ಅಂತಸ್ತಿಗೆ ಎಳೆದುಕೊಂಡು ಹೊದ ಮೂವರು ಯುವಕರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಿಪಡಿಸಿದ ಬೆನ್ನಲ್ಲೇ ಅಲ್ಲಿಂದಲೆ ಕೆಳಕ್ಕೆ ತಳ್ಳಿಹಾಕಿದ ಘಟನೆ ನಡೆದಿದೆ.
ಮೊಹಾಲಿ(ಆ.18): ದೇಶದಲ್ಲಿ ಮತ್ತೆ ಮತ್ತೆ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಲೇ ಇದೆ. ಪ್ರತಿ ಘಟನೆಗಳು ಒಂದಕ್ಕಿಂತ ಒಂದು ಭೀಕರ. ಇದೀಗ ಪ್ರತಿಭಾನ್ವಿತ ಬಾಸ್ಕೆಟ್‌ಬಾಲ್ ಆಟಗಾರ್ತಿಯ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿದೆ. ಆದರೆ ಅತ್ಯಾಚಾರದಿಂದ ತಪ್ಪಿಸಿಕೊಂಡರೂ ಬಳಿಕ ಘನಘೋರ ದುರಂತವೇ ಪಂಜಾಬ್‌ನ ಮೊಗಾ ಜಿಲ್ಲೆಯಲ್ಲಿ ನಡೆದುಹೋಗಿದೆ. ಬಾಸ್ಕೆಟ್‌ಬಾಲ್ ಅಭ್ಯಾಸಕ್ಕೆ ಕ್ರೀಡಾಂಗಣಕ್ಕೆ ಆಗಮಿಸುವ 18ರ ಹರೆಯದ ಆಟಗಾರ್ತಿಯನ್ನು ಮೂವರು ಯುವಕರು ಕ್ರೀಡಾಂಗಣದ ಮೇಲ್ಬಾಗಕ್ಕೆ ಎಳೆದುಕೊಂಡು ಹೋಗಿದ್ದಾರೆ. ಬಳಿಕ ಮೂವರು ಯುವಕರು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಆದರೆ ಈಕೆ ಪ್ರಬಲವಾಗಿ ವಿರೋಧಿ ಬಿಡಿಸಿಕೊಂಡು ಯುವಕರಿಂದ ತಪ್ಪಿಸಿಕೊಳ್ಳುಲು ಯತ್ನಿಸಿದ್ದಾಳೆ. ಈಕೆ ಜೀವಂತವಾಗಿ ಮರಳಿದರೆ ತಮ್ಮ ಕ್ರೀಡಾ ಭವಿಷ್ಯ ಇಲ್ಲಿಗೆ ಅಂತ್ಯವಾಗಲಿದೆ ಎಂದು ಅರಿತ ಯುವಕರು ಆಕೆಯನ್ನು ಕ್ರೀಡಾಂಗಣ ಮೇಲ್ಬಾಗದಿಂದ ಕೆಳಕ್ಕೆ ನೂಕಿದ್ದಾರೆ. ಕೆಳಕ್ಕೆ ಬಿದ್ದ ಆಟಗಾರ್ತಿಯ ಕಾಲು, ಕೈ ಹಾಗೂ ದವಡೆ, ಬೆನ್ನುಮೂಳೆ ಮುರಿದಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದರೂ ಇದುವರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಇದರ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ.
ಬಾಸ್ಕೆಟ್‌ಬಾಲ್ ಆಟಗಾರ್ತಿಯನ್ನು ಪಂಜಾಬ್ ದಯಾನಂದ್ ಸಾಗರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಗಸ್ಟ್ 12 ರಂದು ಈ ಘಟನೆ ನಡೆದಿದೆ. ಇದುವರೆಗೂ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿಲ್ಲ. ಇತ್ತ ಯುವತಿ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ನಿರಂತರವಾಗಿ ಚಿಕಿತ್ಸೆ ನಡೆಯುತ್ತಿದೆ ಎಂದು ಆಸ್ಪತ್ರೆ ಹೇಳಿದೆ.
ದೇಗುಲಕ್ಕೆಂದು ರೆಸಾರ್ಟ್‌ಗೆ ಕರೆದೊಯ್ದ ಕಾಲೇಜು ಮುಖ್ಯಸ್ಥ: ಹೆಣ್ಣುಮಕ್ಕಳ ದೂರು
ಬರೋಬ್ಬರಿ 25 ಅಡಿ ಎತ್ತರದಿಂದ ಬಾಸ್ಕೆಟ್‌ಬಾಲ್ ಆಟಗಾರ್ತಿಯನ್ನು ಕಳೆಕ್ಕೆ ತಳ್ಳಲಾಗಿದೆ. ಈ ಕುರಿತು ಬಾಸ್ಕೆಟ್‌ಬಾಲ್ ಆಟಗಾರ್ತಿ ತಂದೆ ದೂರು ನೀಡಿದ್ದಾರೆ. ಪ್ರತಿ ದಿನ ಅಭ್ಯಾಸಕ್ಕೆ ತೆರಳುವ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿದೆ. ಈ ವೇಳೆ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದ ವೇಳೆ ಮೂವರು ಯುವಕರು ಆಕೆಯನ್ನು ಕ್ರೀಡಾಂಗಣದ ಮೇಲಿಂದ ಕೆಳಕ್ಕೆ ತಳ್ಳಿದ್ದಾರೆ. ಬಳಿಕ ಮೂವರ ಯುವಕರು ನಾಪತ್ತೆಯಾಗಿದ್ದಾರೆ. ಕ್ರೀಡಾಂಗಣದ ಸಿಸಿಟಿವಿ ಪರಿಶೀಲಿಸಿ ಯುವಕರನ್ನು ಪತ್ತೆ ಹಚ್ಚುವ ಕಾರ್ಯವನ್ನು ಪಂಜಾಬ್ ಪೊಲೀಸರು ಮಾಡಿಲ್ಲ ಎಂದು ಯುವತಿ ತಂದೆ ಆರೋಪಿಸಿದ್ದಾರೆ. ನನ್ನ ಮಗಳು ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ. ಆಕೆಯ ಭವಿಷ್ಯವೇ ಅಂತ್ಯವಾಗಿದೆ. ಚೇತರಿಸಿಕೊಂಡರು ನಡೆದಾಡುವ ಕುರಿತು ವೈದ್ಯರು ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಆರೋಪಿಗಳು ರಾಜಾರೋಶವಾಗಿ ತಿರುಗಾಡುತ್ತಿದ್ದಾರೆ ಎಂದು ಯುವತಿ ತಂದೆ ಆಕ್ರೋಶ ಹೊರಹಾಕಿದ್ದಾರೆ.
ಮಗಳನ್ನು ರೇಪ್ ಮಾಡಲು ಯತ್ನಿಸಿದ ಲಿವ್ ಇನ್ ಪಾರ್ಟ್ನರ್ ಮರ್ಮಾಂಗವನ್ನೇ ಕತ್ತರಿಸಿದ ತಾಯಿ!
ಅಪ್ರಾಪ್ತನಿಂದ ಬಾಲಕಿ ಮೇಲೆ ಅತ್ಯಾಚಾರ
ಹದಿನಾಲ್ಕು ವರ್ಷದ ಬಾಲಕ ಐದು ವರ್ಷದ ಬಾಲಕಿಯನ್ನು ಅಂಗನವಾಡಿ ಕಟ್ಟಡದ ಮೇಲೆ ಕರೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ಹುಬ್ಬಳ್ಳಿಯ ವೀರಾಪೂರ ಓಣಿ ಗೊಲ್ಲರ ಓಣಿಯಲ್ಲಿ ನಡೆದಿದೆ. ಆಟವಾಡುತ್ತಿದ್ದ ಬಾಲಕಿಗೆ ಚಾಕಲೆಟ್ ನೀಡಿ ಬಾಲಕಿಯನ್ನು ಪುಸಲಾಯಿಸಿದ ಅಪ್ರಾಪ್ತ ಅತ್ಯಾಚಾರ ಮಾಡಿದ್ದಾನೆ ಎಂದು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಾಲಕಿಯನ್ನು ಕಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ‘ಅತ್ಯಾಚಾರ ಕುರಿತು ಬಾಲಕಿ ತಾಯಿ ದೂರು ನೀಡಿದ್ದಾರೆ. ವೈದ್ಯರು, ಬಾಲಕಿಯ ಹೇಳಿಕೆಯನ್ನು ಪಡೆಯಲಾಗುವುದು. ಕಾನೂನು ಪ್ರಕಾರ ಆರೋಪಿ ಬಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಇನ್‌ಸ್ಪೆಕ್ಟರ್ ಶ್ಯಾಮರಾಜ ಸಜ್ಜನ ತಿಳಿಸಿದರು.