Australian Open: 63ನೇ ಯತ್ನದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕಾರ್ನೆಟ್
* ಸತತ ಪ್ರಯತ್ನದ ಫಲ ಕೊನೆಗೂ ಮಹಿಳಾ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಪ್ರವೇಶಿಸಿದ ಅಲೈಜ್ ಕಾರ್ನೆಟ್
* ಅಲೈಜ್ ಕಾರ್ನೆಟ್ ಫ್ರಾನ್ಸ್‌ನ ಟೆನಿಸ್ ಆಟಗಾರ್ತಿ
* 63ನೇ ಗ್ರ್ಯಾನ್ ಸ್ಲಾಂನಲ್ಲಿ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶ
ಮೆಲ್ಬರ್ನ್(ಜ.25): ಫ್ರಾನ್ಸ್‌ನ ಟೆನಿಸ್ ಆಟಗಾರ್ತಿ ಅಲೈಜ್ ಕಾರ್ನೆಟ್ (Alize Cornet) ಚೊಚ್ಚಲ ಬಾರಿಗೆ ಗ್ರ್ಯಾನ್ ಸ್ಲಾಂ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇದು ಅವರು ಆಡುತ್ತಿರುವ 63ನೇ ಗ್ರ್ಯಾನ್ ಸ್ಲಾಂ. 2 ದಿನಗಳ ಹಿಂದಷ್ಟೇ ತಮ್ಮ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಕಾರ್ನೆಟ್, 17ನೇ ಬಾರಿಗೆ ಆಸ್ಪ್ರೇಲಿಯನ್ ಓಪನ್‌ನಲ್ಲಿ (Australian Open) ಆಡುತ್ತಿದ್ದಾರೆ. ಸೋಮವಾರ ನಡೆದ ಮಹಿಳಾ ಸಿಂಗಲ್ಸ್ 4ನೇ ಸುತ್ತಿನಲ್ಲಿ 2 ಬಾರಿ ಗ್ರ್ಯಾನ್ ಸ್ಲಾಂ ವಿಜೇತೆ ರೊಮೇನಿಯಾದ ಸಿಮೋನಾ ಹಾಲೆಪ್ (Simona Halep) ವಿರುದ್ಧ 6-4, 3-6, 6-4 ಸೆಟ್‌ಗಳಲ್ಲಿ ಜಯಗಳಿಸಿದರು.
2005ರಲ್ಲಿ ಫ್ರೆಂಚ್ ಓಪನ್‌ಗೆ (French Open) ವೈಲ್ಡ್‌ಕಾರ್ಡ್ ಪ್ರವೇಶ ಪಡೆಯುವ ಮೊದಲ ಮೊದಲ ಗ್ರ್ಯಾನ್ ಸ್ಲಾಂ ಆಡಿದ್ದ ಅವರು, 5 ಬಾರಿ 4ನೇ ಸುತ್ತಿನಲ್ಲಿ ಸೋತಿದ್ದರು. 2009ರ ಆಸ್ಪ್ರೇಲಿಯನ್ ಓಪನ್‌ನ 4ನೇ ಸುತ್ತಿನಲ್ಲಿ ಮ್ಯಾಚ್ ಪಾಯಿಂಟ್ ಗಳಿಸುವ ವರೆಗೂ ತಲುಪಿದ್ದರೂ ಕ್ವಾರ್ಟರ್ ಫೈನಲ್‌ಗೇರಿರಲಿಲ್ಲ. 2022ರ ಋುತುವಿನ ಬಳಿಕ ನಿವೃತ್ತಿ ಪಡೆಯುವ ಮನಸಿನೊಂದಿಗೆ ಆಸ್ಪ್ರೇಲಿಯನ್ ಓಪನ್‌ಗೆ ಕಾಲಿಟ್ಟಕಾರ್ನೆಟ್, ತಮ್ಮ ವೃತ್ತಿಬದುಕಿನಲ್ಲಿ ಚೊಚ್ಚಲ ಬಾರಿಗೆ ಕ್ವಾರ್ಟರ್ ಫೈನಲ್‌ಗೇರುವಲ್ಲಿ ಯಶಸ್ವಿಯಾಗಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಅವರಿಗೆ ಅಮೆರಿಕದ ಡೇನಿಯಲ್ ಕಾಲಿನ್ಸ್ ಎದುರಾಗಲಿದ್ದಾರೆ. 2ನೇ ಶ್ರೇಯಾಂಕಿತೆ ಬೆಲಾರುಸ್‌ನ ಆರಾರಯ$್ನ ಸಬಲೆಂಬಾ ಸೋತು ಹೊರಬಿದ್ದರೆ, 7ನೇ ಶ್ರೇಯಾಂಕಿತೆ ಇಗಾ ಸ್ವಿಯಾಟೆಕ್ ಕ್ವಾರ್ಟರ್ ಪ್ರವೇಶಿಸಿದ್ದಾರೆ.
ಮೆಡ್ವೆಡೆವ್ ಕ್ವಾರ್ಟರ್‌ಗೆ: ಪುರುಷರ ಸಿಂಗಲ್ಸ್‌ನ 4ನೇ ಸುತ್ತಿನಲ್ಲಿ ವಿಶ್ವ ನಂ.2 ಡ್ಯಾನಿಲ್ ಮೆಡ್ವೆಡೆವ್ ಅಮೆರಿಕದ ಮ್ಯಾಕ್ಸಿಮ್ ಕ್ರೆಸ್ಸಿ ವಿರುದ್ಧ 3-1 ಸೆಟ್‌ಗಳಲ್ಲಿ ಗೆದ್ದು ಕ್ವಾರ್ಟರ್ ಫೈನಲ್‌ಗೇರಿದರೆ, 4ನೇ ಶ್ರೇಯಾಂಕಿತ ಸ್ಟೆಫಾನೋಸ್ ಸಿಟ್ಸಿಪಾಸ್ ಅಮೆರಿಕದ ಫ್ರಿಟ್‌್ಜ ವಿರುದ್ಧ 5 ಸೆಟ್‌ಗಳ ಪಂದ್ಯವನ್ನು 3-2ರಲ್ಲಿ ಗೆದ್ದು ಅಂತಿಮ 8ರ ಸುತ್ತು ಪ್ರವೇಶಿಸಿದರು.
ಏಷ್ಯಾಕಪ್ ಮಹಿಳಾ ಹಾಕಿ: ಸೆಮಿಫೈನಲ್‌ಗೆ ಭಾರತ
ಮಸ್ಕಟ್: ಏಷ್ಯಾ ಕಪ್ ಮಹಿಳಾ ಹಾಕಿ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಭಾರತ ತಂಡ ಈ ವರ್ಷ ಜುಲೈನಲ್ಲಿ ನಡೆಯಲಿರುವ ಎಫ್‌ಐಎಚ್ ಹಾಕಿ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಸೋಮವಾರ ನಡೆದ ‘ಎ’ ಗುಂಪಿನ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಸಿಂಗಾಪುರ ವಿರುದ್ಧ ಭಾರತ 9-1 ಗೋಲುಗಳ ಗೆಲುವು ಸಾಧಿಸಿತು. ಇದರೊಂದಿಗೆ ಗುಂಪಿನಲ್ಲಿ 2ನೇ ಸ್ಥಾನಿಯಾಗಿ ಸೆಮೀಸ್‌ಗೇರಿತು. ಬುಧವಾರ (ಜ.26) ನಡೆಯಲಿರುವ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಭಾರತ, ದ.ಕೊರಿಯಾವನ್ನು ಎದುರಿಸಲಿದೆ. ದ.ಕೊರಿಯಾ 3 ಜಯದೊಂದಿಗೆ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು. ಮತ್ತೊಂದು ಸೆಮೀಸ್‌ನಲ್ಲಿ ಜಪಾನ್ ಹಾಗೂ ಚೀನಾ ಸೆಣಸಲಿವೆ.
ದೇಶದ ಚೊಚ್ಚಲ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಶುರು
ಲಖನೌ: ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ, ಭಾರತ ಪ್ಯಾರಾ ಬ್ಯಾಡ್ಮಿಂಟನ್ ತಂಡದ ಮುಖ್ಯ ತರಬೇತುದಾರ ಗೌರವ್ ಖನ್ನಾ ಹಾಗೂ ಏಜೆಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ಸಹಯೋಗದಲ್ಲಿ ದೇಶದ ಮೊದಲ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಆರಂಭಗೊಂಡಿದೆ. 2028 ಮತ್ತು 2032ರ ಪ್ಯಾರಾಲಿಂಪಿಕ್ಸ್ ಅನ್ನು ಗುರಿಯಾಗಿರಿಸಿಕೊಂಡು ಹೊಸ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಸಲುವಾಗಿ ಈ ಅಕಾಡೆಮಿ ಆರಂಭಗೊಂಡಿದೆ.
Australian Open: ರಾಫೆಲ್ ನಡಾಲ್, ಆಶ್ಲೆ ಬಾರ್ಟಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ
ಈ ಹೈ ಪರ್ಫಾಮೆನ್ಸ್ ಕೇಂದ್ರವು 4 ಕೋರ್ಟ್‌ಗಳು, ಬಿಡಬ್ಲ್ಯೂಎಫ್ ಅನುಮೋದಿತ 2 ಸಿಂಥೆಟಿಕ್ ಮ್ಯಾಟ್ಸ್, ವ್ಹೀಲ್‌ಚೇರ್ ಅಥ್ಲೀಟ್‌ಗಳಿಗಾಗಿ 2 ವುಡನ್ ಕೋರ್ಟ್‌ಗಳನ್ನು ಒಳಗೊಂಡಿದೆ. ಜತೆಗೆ ಸುಸಜ್ಜಿತ ಜಿಮ್, ಐಸ್ ಸ್ನಾನ, ಹಬೆ ಸ್ನಾನ, ಹೈಡ್ರೋಥೆರಪಿ ಸೇರಿದಂತೆ ಅಥ್ಲೀಟ್‌ಗಳಿಗೆ ಅಗತ್ಯವಿರುವ ಅತ್ಯಾಧುನಿಕ ಸೌಲಭ್ಯಗಳು ಹಾಗೂ ಕ್ರೀಡಾಪಟುಗಳಿಗೆ ಸುಸಜ್ಜಿತ ಕೊಠಡಿಗಳನ್ನು ಒಳಗೊಂಡಿದೆ ಎಂದು ಗೌರವ್ ತಿಳಿಸಿದ್ದಾರೆ.