Australian Open: ಹಾಲಿ ಚಾಂಪಿಯನ್ ನವೋಮಿ ಒಸಾಕ ಔಟ್..!
* ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂ ಟೂರ್ನಿಯಿಂದ ಹೊರಬಿದ್ದ ಹಾಲಿ ಚಾಂಪಿಯನ್ ಒಸಾಕ
* ಟೂರ್ನಿಯ ಮೂರನೇ ಸುತ್ತಿನಲ್ಲೇ ಜಪಾನ್ ಆಟಗಾರ್ತಿಗೆ ಶಾಕ್
* ಅಂತಿಮ 16ರ ಸುತ್ತಿಗೆ ಲಗ್ಗೆಯಿಟ್ಟ ರಾಫೆಲ್ ನಡಾಲ್
ಮೆಲ್ಬರ್ನ್(ಜ.22): ಆಸ್ಪ್ರೇಲಿಯನ್ ಓಪನ್ (Australian Open 2022) ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್, ಜಪಾನ್‌ನ ನವೋಮಿ ಒಸಾಕ (Naomi Osaka) 3ನೇ ಸುತ್ತಿನಲ್ಲಿ ಅಭಿಯಾನ ಕೊನೆಗೊಳಿಸಿದ್ದಾರೆ. ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಒಸಾಕ, ವಿಶ್ವ ನಂ.60 ಅಮೆರಿಕದ ಅಮಾಂಡ ಅನಿಸಿಮೊವ ವಿರುದ್ಧ 6-4, 3-6, 6-7 ಸೆಟ್‌ಗಳಿಂದ ಸೋತು ಹೊರಬಿದ್ದರು. ಮೊದಲ ಸೆಟ್‌ನಲ್ಲಿ ಗೆದ್ದ ಹೊರತಾಗಿಯೂ ಒಸಾಕ, ತಮಗಿಂತ ಕಡಿಮೆ ರ‍್ಯಾಂಕಿಂಗ್ ಹೊಂದಿರುವ ಆಟಗಾರ್ತಿಯ ಎದುರು ಸೋಲುಂಡು ಪ್ರಶಸ್ತಿ ಉಳಿಸಿಕೊಳ್ಳಲು ವಿಫಲರಾದರು.
ಮಹಿಳಾ ಸಿಂಗಲ್ಸ್‌ನ ವಿಶ್ವ ನಂ.1, ಆಸ್ಪ್ರೇಲಿಯಾ ಆಶ್ಲೆ ಬಾರ್ಟಿ, ಪುರುಷರ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ರಾಫೆಲ್ ನಡಾಲ್(Rafael Nadal), ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಅಂತಿಮ 16ರ ಸುತ್ತು ಪ್ರವೇಶಿಸಿದರು. ಆಶ್ಲೆ, ಇಟೆಲಿಯ ಕ್ಯಾಮಿಲಾ ಜಾರ್ಜಿ ವಿರುದ್ಧ 6-2, 6-3 ಸೆಟ್‌ಗಳಲ್ಲಿ ಗೆಲುವು ಸಾಧಿಸಿದ್ದು, 4ನೇ ಸುತ್ತಿನಲ್ಲಿ ಅಮಾಂಡ ಎದುರಾಗಲಿದ್ದಾರೆ. ಮೊದಲ ಗ್ರ್ಯಾನ್ ಸ್ಲಾಂ ಗೆಲ್ಲುವ ನಿರೀಕ್ಷೆಯಲ್ಲಿರುವ ವಿಶ್ವ ನಂ.3, ಝ್ವೆರೆವ್, ಮೊಲ್ಡೋವಾದ ರಾಡು ಅಲ್ಬೋಟ್ ವಿರುದ್ಧ 6-3, 6-4, 6-4 ನೇರ ಸೆಟ್‌ಗಳಿಂದ ಗೆದ್ದು 4ನೇ ಸುತ್ತಿಗೆ ಲಗ್ಗೆ ಇಟ್ಟರು. ಮುಂದಿನ ಸುತ್ತಿನಲ್ಲಿ ಅವರು ಕೆನಡಾದ ಡೆನಿಸ್ ಶಾಪೋವಲೊವ್ ವಿರುದ್ಧ ಸ್ಪರ್ಧಿಸಲಿದ್ದಾರೆ.
ಇನ್ನು, ದಾಖಲೆಯ 21ನೇ ಗ್ರ್ಯಾನ್ ಸ್ಲಾಂ ಗೆಲ್ಲುವ ತವಕದಲ್ಲಿರುವ ನಡಾಲ್, ಟೋಕಿಯೋ ಒಲಿಂಪಿಕ್ಸ್ (Tokyo Olympics) ಬೆಳ್ಳಿ ವಿಜೇತ, ರಷ್ಯಾದ ಕರೆನ್ ಕಚನೋವ್‌ರನ್ನು ಮಣಿಸಿದರು. ಅವರು ಪಂದ್ಯವನ್ನು 6-3, 6-2, 3-6, 6-1 ಸೆಟ್‌ಗಳಿಂದ ಗೆದ್ದು ಅಂತಿಮ 16ರ ಸುತ್ತಿಗೆ ತಲುಪಿದರು.
Sania Mirza: ಟೆನಿಸ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ
ಬ್ಯಾಡ್ಮಿಂಟನ್: ಸೆಮೀಸ್‌ಗೆ ಸಿಂಧು, ಪ್ರಣಯ್ ಔಟ್
ಲಖನೌ: ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು (PV Sindhu) ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಶುಕ್ರವಾರ 1 ಗಂಟೆ 5 ನಿಮಿಷಗಳ ಕಾಲ ನಡೆದ ಮಹಿಳಾ ಸಿಂಗಲ್ಸ್‌ನ ರೋಚಕ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಸಿಂಧು, ಥಾಯ್ಲೆಂಡ್‌ನ ಸುಪನಿದಾ ಕೇಟೊಂಗ್ ವಿರುದ್ಧ 11-21, 21-12, 21-17 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು.
ಶನಿವಾರ ನಡೆಯಲಿರುವ ಸೆಮೀಸ್‌ನಲ್ಲಿ ಅವರು ರಷ್ಯಾದ ಎವ್ಗೇನಿಯಾ ಕೊಸೆಸ್ಕಯಾ ವಿರುದ್ಧ ಸ್ಪರ್ಧಿಸಲಿದ್ದಾರೆ. ಇನ್ನು, ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್.ಪ್ರಣಯ್ ಕ್ವಾರ್ಟರ್‌ನಲ್ಲಿ ಅಭಿಯಾನ ಕೊನೆಗೊಳಿಸಿದರು. ಅವರು ಫ್ರಾನ್ಸ್‌ನ ಅರ್ನಾಡ್ ಮೆರ್‌ಕ್ಲೆ ವಿರುದ್ಧ 19-21, 16-21 ಗೇಮ್‌ಗಳಿಂದ ಸೋಲನುಭವಿಸಿದರು.
Australian Open: ವರ್ಷದ ಮೊದಲ ಟೆನಿಸ್ ಗ್ರ್ಯಾನ್ ಸ್ಲಾಂಗೆ ಕೋವಿಡ್ ಗುಮ್ಮ..!
ಪುರುಷರ ಸಿಂಗಲ್ಸ್‌ನಲ್ಲಿ ಮಿಥುನ್ ಮಂಜುನಾಥ್, ಪುರುಷರ ಡಬಲ್ಸ್‌ನಲ್ಲಿ ಕೃಷ್ಣ ಪ್ರಸಾದ್-ವಿಷ್ಣುವರ್ಧನ್, ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ ಜೊಲ್ಲಿ-ಗಾಯತ್ರಿ ಗೋಪಿಚಂದ್, ಮಿಶ್ರ ಡಬಲ್ಸ್‌ನಲ್ಲಿ ಅರ್ಜುನ್-ತ್ರೀಸಾ ಜೋಡಿ ಸೆಮೀಸ್ ಪ್ರವೇಶಿಸಿತು.
ಏಷ್ಯನ್ ಮಹಿಳಾ ಫುಟ್ಬಾಲ್: ಆಸ್ಪ್ರೇಲಿಯಾಗೆ 18-0 ಜಯ
ಮುಂಬೈ: ಎಎಫ್‌ಸಿ ಮಹಿಳಾ ಏಷ್ಯನ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಆಸ್ಪ್ರೇಲಿಯಾ, ಇಂಡೋನೇಷ್ಯಾ ವಿರುದ್ಧ 18-0 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಇತ್ತೀಚೆಗೆ ಫಿಫಾ ವರ್ಷದ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ರೇಸ್‌ನಲ್ಲಿ ರನ್ನರ್-ಅಪ್ ಸ್ಥಾನ ಪಡೆದಿದ್ದ ಆಸ್ಪ್ರೇಲಿಯಾ ನಾಯಕಿ ಸ್ಯಾಮ್ ಕೆರ್‌್ರ ಒಟ್ಟು 5 ಗೋಲು ಬಾರಿಸಿದರು. ಮತ್ತೊಂದು ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ ಫಿಲಿಪ್ಪೀನ್ಸ್ 1-0 ಗೋಲಿನ ಜಯ ಸಾಧಿಸಿತು.