Asianet Suvarna News Asianet Suvarna News

Australian Open 2022: ಎರಡನೇ ಸುತ್ತು ಪ್ರವೇಶಿಸಿದ ಎಮ್ಮಾ, ಮೆಡ್ವೆಡೆವ್‌, ಮರ್ರೆ

* ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆ್ಯಂಡಿ ಮರ್ರೆ, ಡ್ಯಾನಿಲ್‌ ಮೆಡ್ವೆಡೆವ್ ಶುಭಾರಂಭ

* ಯುಎಸ್‌ ಓಪನ್‌ ಚಾಂಪಿಯನ್‌ ಎಮ್ಮಾ ರಾಡುಕಾನು ಎರಡನೇ ಸುತ್ತು ಪ್ರವೇಶ


16 ವರ್ಷಗಳ ಬಳಿಕ ಸೆರೆನಾ ವಿಲಿಯಮ್ಸ್‌ ರ‍್ಯಾಂಕಿಂಗ್‌ ಅಗ್ರ 50ರ ಕೆಳಕ್ಕೆ

Australian Open 2022 Andy Murray Daniil Medvedev Roars Into Round Two kvn
Author
Bengaluru, First Published Jan 19, 2022, 9:30 AM IST

ಮೆಲ್ಬರ್ನ್‌(ಜ.19): ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ (Australian Open Tennis Grandslam) ವಿಶ್ವ ನಂ.2 ಡ್ಯಾನಿಲ್‌ ಮೆಡ್ವೆಡೆವ್‌(Daniil Medvedev), ಮಾಜಿ ನಂ.1 ಆ್ಯಂಡಿ ಮರ್ರೆ(Andy Murray), ಯುಎಸ್‌ ಓಪನ್‌ (US Open) ಚಾಂಪಿಯನ್‌ ಎಮ್ಮಾ ರಾಡುಕಾನು 2ನೇ ಸುತ್ತು ಪ್ರವೇಶಿಸಿದ್ದಾರೆ. ಮಂಗಳವಾರ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಮೆಡ್ವೆಡೆವ್‌ ಸ್ವಿಜರ್‌ಲೆಂಡ್‌ನ ಹೆನ್ರಿ ಲಾಕ್ಸೊನೆನ್‌ ವಿರುದ್ಧ 6-1, 6-4, 7-6(3) ಸೆಟ್‌ಗಳಲ್ಲಿ ಗೆಲುವು ಸಾಧಿಸಿದರೆ, ಮರ್ರೆ ಜಾರ್ಜಿಯಾದ ನಿಕೋಲೆಜ್‌ ವಿರುದ್ಧ ಜಯಗಳಿಸಿದರು.

ಮಹಿಳಾ ಸಿಂಗಲ್ಸ್‌ನಲ್ಲಿ 19 ವರ್ಷದ ರಾಡುಕಾನು ಅಮೆರಿಕದ ಸ್ಲೋನ್‌ ಸ್ಟೆಫನ್ಸ್‌ ವಿರುದ್ಧ 6-0, 2-6, 6-1 ಸೆಟ್‌ಗಳಲ್ಲಿ ಗೆದ್ದು ಶುಭಾರಂಭ ಮಾಡಿದರು. ಆದರೆ ಯುಎಸ್‌ ಓಪನ್‌ ರನ್ನರ್‌-ಅಪ್‌, ಕೆನಡಾದ ಲೈಲಾ ಫರ್ನಾಂಡೆಜ್‌ ಆಸ್ಪ್ರೇಲಿಯಾದ ಮ್ಯಾಡಿನ್ಸನ್‌ ವಿರುದ್ಧ ಹಾಗೂ, 2 ಬಾರಿ ವಿಂಬಲ್ಡನ್‌ ಚಾಂಪಿಯನ್‌ ಚೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ ರೊಮಾನಿಯಾದ ಸೊರಾನ ವಿರುದ್ಧ ಮೊದಲ ಸುತ್ತಲ್ಲೇ ಸೋತು ನಿರ್ಗಮಿಸಿದರು.

16 ವರ್ಷಗಳ ಬಳಿಕ ಸೆರೆನಾ ರ‍್ಯಾಂಕಿಂಗ್‌ ಅಗ್ರ 50ರ ಕೆಳಕ್ಕೆ

ಮೆಲ್ಬರ್ನ್‌: ಅಮೆರಿಕದ ಖ್ಯಾತ ಟೆನಿಸ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ (Serena Williams) 2006ರ ಬಳಿಕ ಮೊದಲ ಬಾರಿ ವಿಶ್ವ ಟೆನಿಸ್‌ ರ‍್ಯಾಂಕಿಂಗ್‌ನಲ್ಲಿ 50ಕ್ಕಿಂತ ಕೆಳಕ್ಕೆ ಕುಸಿದಿದ್ದಾರೆ. ಸೋಮವಾರ ಪ್ರಕಟವಾದ ಡಬ್ಲ್ಯುಟಿಎ (WTA Rankings) ನೂತನ ರ‍್ಯಾಂಕಿಂಗ್‌ನಲ್ಲಿ ಅವರು 59ನೇ ಸ್ಥಾನ ಪಡೆದಿದ್ದಾರೆ. 2021ರಲ್ಲಿ ಕೇವಲ 6 ಟೆನಿಸ್‌ ಟೂರ್ನಿಗಳಲ್ಲಿ ಆಡಿರುವ ಅವರು, ರ‍್ಯಾಂಕಿಂಗ್‌ನಲ್ಲಿ 12 ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. 

Australian Open 2022: ಇಂದಿನಿಂದ ಆಸ್ಟ್ರೇಲಿಯನ್ ಓಪನ್‌ ಗ್ರ್ಯಾನ್‌ ಸ್ಲಾಂ ಆರಂಭ

ಈ ಪಟ್ಟಿಯಲ್ಲಿ ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ. ಒಟ್ಟು 23 ಮಹಿಳಾ ಸಿಂಗಲ್ಸ್‌ ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿರುವ ಸೆರೆನಾ ಕೆಲ ಸಮಯದಿಂದ ಸತತವಾಗಿ ಗಾಯಗೊಳ್ಳುತ್ತಿದ್ದು, ವಿಂಬಲ್ಡನ್‌ ಟೂರ್ನಿಯಿಂದ ಅರ್ಧಕ್ಕೇ ನಿರ್ಗಮಿಸಿದ್ದರು. ಸದ್ಯ ನಡೆಯುತ್ತಿರುವ ಆಸ್ಪ್ರೇಲಿಯನ್‌ ಓಪನ್‌ನಿಂದಲೂ ಹೊರಗುಳಿದಿದ್ದಾರೆ.

3 ವರ್ಷ ನಿರ್ಬಂಧದಿಂದ ಜೋಕೋಗೆ ವಿನಾಯಿತಿ ?

ಬೆಲ್ಗ್ರೇಡ್‌: ವಿಶ್ವ ನಂ.1 ಟೆನಿಸಿಗ ನೋವಾಕ್‌ ಜೋಕೋವಿಚ್‌ (Novak Djokovic) ಅವರಿಗೆ ಆಸ್ಪ್ರೇಲಿಯಾ ಪ್ರವೇಶಕ್ಕೆ 3 ವರ್ಷಗಳ ನಿರ್ಬಂಧದಿಂದ ವಿನಾಯಿತಿ ಸಿಗುವ ಸಾಧ್ಯತೆ ಇದೆ. ಈ ಬಗ್ಗೆ ಅಲ್ಲಿನ ಪ್ರಧಾನಿ ಸ್ಕಾಟ್‌ ಮಾರಿಸನ್‌ ಸುಳಿವು ನೀಡಿದ್ದು, ನಿರ್ಬಂಧ ಅವಧಿಗೂ ಮುನ್ನ ತೆರವಾಗಲೂಬಹುದು ಎಂದಿದ್ದಾರೆ. 

ನಿರ್ಬಂಧದಿಂದ ವಿನಾಯಿಸಿ ಸಿಕ್ಕರೆ ಮಾತ್ರ ಜೋಕೋವಿಚ್‌ಗೆ ಮುಂದಿನ ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಆಡಲು ಜೋಕೋಗೆ ಅವಕಾಶ ಸಿಗಲಿದೆ. ಆದರೆ ಅವರು ಫ್ರೆಂಚ್‌ ಓಪನ್‌ನಿಂದ (French Open) ಹೊರಬೀಳುವ ಸಾಧ್ಯತೆ ಹೆಚ್ಚಿದೆ. ಇತ್ತೀಚೆಗೆ ಕೋವಿಡ್‌ ದೃಢಪಟ್ಟಿದ್ದರಿಂದ ಇನ್ನು 6 ತಿಂಗಳ ಬಳಿಕವೇ ಲಸಿಕೆ ಪಡೆಯಲು ಅವಕಾಶವಿದ್ದು, ಜೂನ್‌ 2ನೇ ವಾರ ಲಸಿಕೆ ಪಡೆಯಬಹುದು. ಆದರೆ ಮೇ ಅಥವಾ ಜೂನ್‌ನಲ್ಲಿ ಫ್ರೆಂಚ್‌ ಓಪನ್‌ ಆರಂಭವಾಗುವ ಸಾಧ್ಯತೆ ಇರುವುದರಿಂದ ಜೋಕೋವಿಚ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶ ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

French Open:ಲಸಿಕೆ ಪಡೆಯದಿದ್ರೆ ಜೋಕೋವಿಚ್‌ಗೆ ಫ್ರಂಚ್‌ ಓಪನ್‌ಗೂ ಇಲ್ಲ ಎಂಟ್ರಿ..!

ಲಸಿಕೆ ಪಡೆಯದೇ ಮೆಲ್ಬೊರ್ನ್‌ಗೆ ಬಂದಿಳಿದಿದ್ದ ಸರ್ಬಿಯಾದ ಟೆನಿಸಿಗನಿಗೆ ಆಸ್ಟ್ರೇಲಿಯಾ ಸರ್ಕಾರ ಬಿಸಿ ಮುಟ್ಟಿಸಿತ್ತು. ಕಾನೂನು ಹೋರಾಟದಲ್ಲೂ ಜೋಕೋವಿಚ್‌ಗೆ ಹಿನ್ನೆಡೆಯಾಗಿದ್ದರಿಂದ ನೊವಾಕ್ ಜೋಕೋವಿಚ್‌ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂನಲ್ಲಿ ಪಾಲ್ಗೊಳ್ಳದೇ ತವರಿಗೆ ವಾಪಾಸ್ಸಾಗಿದ್ದರು.
 

Follow Us:
Download App:
  • android
  • ios