ಆಸ್ಪ್ರೇಲಿಯನ್ ಓಪನ್: ಕ್ವಾರ್ಟರ್‌ಗೆ ಜೋಕೋ, ಸೆರೆನಾ
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ನೊವಾಕ್ ಜೋಕೋವಿಚ್ ಹಾಗೂ ಸೆರೆನಾ ವಿಲಿಯಮ್ಸ್ ಕ್ವಾರ್ಟರ್ ಫೈನಲ್ಸ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮೆಲ್ಬರ್ನ್(ಫೆ.15): 8 ಬಾರಿ ಚಾಂಪಿಯನ್ ನೋವಾಕ್ ಜೋಕೋವಿಚ್ ಆಸ್ಪ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗಾಯದ ನಡುವೆಯೂ ಹೋರಾಟ ಬಿಡದ ಜೋಕೋವಿಚ್, ಭಾನುವಾರ ನಡೆದ 4ನೇ ಸುತ್ತಿನ ಪಂದ್ಯದಲ್ಲಿ ಕೆನಡಾದ ಮಿಲೊಸ್ ರವೊನಿಚ್ ವಿರುದ್ಧ 7-6, 4-6, 6-1, 6-4 ಸೆಟ್‌ಗಳಲ್ಲಿ ಜಯ ಗಳಿಸಿದರು. ಇದರೊಂದಿಗೆ ರೋಜರ್ ಫೆಡರರ್ ಬಳಿಕ ಗ್ರ್ಯಾನ್ ಸ್ಲಾಂಗಳಲ್ಲಿ 300 ಪಂದ್ಯಗಳನ್ನು ಗೆದ್ದು ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾದರು.
23 ಗ್ರ್ಯಾನ್‌ಗಳ ಒಡತಿ ಸೆರೆನಾ ವಿಲಿಯಮ್ಸ್ 4ನೇ ಸುತ್ತಿನ ಪಂದ್ಯದಲ್ಲಿ ಬೆಲಾರುಸ್‌ನ ಆಯ್ರ್ನಾ ಸಬಲೆನ್ಕಾ ವಿರುದ್ಧ 6-4, 2-6, 6-4 ಸೆಟ್‌ಗಳಲ್ಲಿ ಜಯಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಸೆರೆನಾಗೆ 2ನೇ ಶ್ರೇಯಾಂಕಿತೆ ಸಿಮೋನಾ ಹಾಲೆಪ್ ಎದುರಾಗಲಿದ್ದಾರೆ. 4ನೇ ಸುತ್ತಿನ ಪಂದ್ಯದಲ್ಲಿ ಹಾಲೆಪ್, ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಇಗಾ ಸ್ವಿಯಾಟೆಕ್ ವಿರುದ್ಧ 3-6, 6-1, 6-4 ಸೆಟ್‌ಗಳಲ್ಲಿ ಗೆದ್ದರು. 3ನೇ ಶ್ರೇಯಾಂಕಿತೆ ನವೊಮಿ ಒಸಾಕ ಸಹ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಆಸ್ಟ್ರೇಲಿಯನ್ ಓಪನ್: ಜೋಕೋಗೆ ಪ್ರಯಾಸದ ಜಯ
ಪುರುಷರ ಸಿಂಗಲ್ಸ್‌ನ 4ನೇ ಸುತ್ತಿನ ಪಂದ್ಯದಲ್ಲಿ ಕಳೆದ ಬಾರಿ ರನ್ನರ್-ಅಪ್ ಡೊಮಿನಿಕ್ ಥೀಮ್, 18ನೇ ಶ್ರೇಯಾಂಕಿತ ಆಟಗಾರ ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೊವ್ ವಿರುದ್ಧ ಸೋತು ಹೊರಬಿದ್ದರು.