ಮೆಲ್ಬರ್ನ್‌(ಫೆ.02): ಅಮೆರಿಕದ ಸೋಫಿಯಾ ಕೆನಿನ್‌, 2 ಬಾರಿಯ ಗ್ರ್ಯಾಂಡ್‌ಸ್ಲಾಂ ಚಾಂಪಿಯನ್‌ ಸ್ಪೇನ್‌ನ ಗಾರ್ಬೈನ್‌ ಮುಗುರುಜಾರನ್ನು ಫೈನಲ್‌ನಲ್ಲಿ ಮಣಿಸಿ ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾಂಡ್‌ಸ್ಲಾಂ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಶನಿವಾರ ನಡೆದ ಫೈನಲ್‌ನಲ್ಲಿ 4-6, 6-2, 6-2 ಸೆಟ್‌ಗಳಲ್ಲಿ ಜಯಿಸಿದರು. ಮೊದಲ ಬಾರಿಗೆ ಗ್ರ್ಯಾಂಡ್‌ಸ್ಲಾಂ ಟೂರ್ನಿಯ ಫೈನಲ್‌ಗೇರಿದ್ದ ಕೆನಿನ್‌, ಮೊದಲ ಪ್ರಯತ್ನದಲ್ಲೇ ಟ್ರೋಫಿಗೆ ಮುತ್ತಿಟ್ಟರು.

ಆಸ್ಪ್ರೇಲಿಯನ್‌ ಓಪನ್‌: ಜೋಕೋವಿಚ್‌-ಥೀಮ್‌ ಫೈನಲ್‌ ಫೈಟ್‌!

14ನೇ ಶ್ರೇಯಾಂಕಿತ ಆಟಗಾರ್ತಿ ಈ ಗೆಲುವಿನೊಂದಿಗೆ ವಿಶ್ವ ಶ್ರೇಯಾಂಕದಲ್ಲಿ 7ನೇ ಸ್ಥಾನಕ್ಕೇರಲಿದ್ದು, ಅಮೆರಿಕದ ನಂ.1 ಆಟಗಾರ್ತಿಯಾಗಿ ಹೊರಹೊಮ್ಮಲಿದ್ದಾರೆ. 21 ವರ್ಷದ ಕೆನಿನ್‌, 12 ವರ್ಷಗಳಲ್ಲಿ ಆಸ್ಪ್ರೇಲಿಯನ್‌ ಓಪನ್‌ ಗೆದ್ದ ಅತಿಕಿರಿಯ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾದರು. 2008ರಲ್ಲಿ ರಷ್ಯಾದ ಮರಿಯಾ ಶರಪೋವಾ 20ನೇ ವಯಸ್ಸಿನಲ್ಲಿ ಚಾಂಪಿಯನ್‌ ಆಗಿದ್ದರು.

ಆಸ್ಪ್ರೇಲಿಯನ್‌ ಓಪನ್‌: ರಾಫೆಲ್‌ ನಡಾಲ್‌ಗೆ ಥೀಮ್‌ ಶಾಕ್‌!

20 ಕೋಟಿ ರುಪಾಯಿ ಬಹುಮಾನ

ಚಾಂಪಿಯನ್‌ ಪಟ್ಟಕ್ಕೇರಿದ ಕೆನಿನ್‌ಗೆ 19.72 ಕೋಟಿ ರುಪಾಯಿ ಬಹುಮಾನ ದೊರೆಯಿತು. ರನ್ನರ್‌-ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟ ಮುಗುರುಜಾ, 9.88 ಕೋಟಿ ಬಹುಮಾನ ಗಳಿಸಿದರು.

ಜೋಕೋವಿಚ್‌ vs ಥೀಮ್‌ ಫೈನಲ್‌ ಮುಖಾಮುಖಿ ಇಂದು

ಪುರುಷರ ಸಿಂಗಲ್ಸ್‌ನ ಫೈನಲ್‌ ಪಂದ್ಯ ಭಾನುವಾರ ನಡೆಯಲಿದ್ದು, ವಿಶ್ವ ನಂ.2 ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಹಾಗೂ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. 16 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಜೋಕೋವಿಚ್‌, 7 ಬಾರಿ ಆಸ್ಪ್ರೇಲಿಯನ್‌ ಗೆದ್ದಿದ್ದಾರೆ. ದಾಖಲೆಯ 8ನೇ ಬಾರಿಗೆ ಟ್ರೋಫಿ ಎತ್ತಿಹಿಡಿಯಲು ಸೆಣಸಲಿದ್ದಾರೆ. ಥೀಮ್‌ ಮೊದಲ ಬಾರಿಗೆ ಆಸ್ಪ್ರೇಲಿಯನ್‌ ಓಪನ್‌ ಫೈನಲ್‌ಗೇರಿದ್ದು, ಚೊಚ್ಚಲ ಗ್ರ್ಯಾಂಡ್‌ಸ್ಲಾಂ ಗೆಲ್ಲುವ ಗುರಿ ಹೊಂದಿದ್ದಾರೆ.