ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 'ಆ್ಯಂಟಿ ಸೆಕ್ಸ್‌ ಬೆಡ್‌'; ವಿಡಿಯೋ ಹಂಚಿಕೊಂಡ ಅಸೀಸ್ ಲೇಡಿ ಅಥ್ಲೀಟ್ಸ್‌

ಕಳೆದ ಬಾರಿಯಂತೆ ಈ ಬಾರಿ ಕೂಡಾ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿ 'ಆ್ಯಂಟಿ ಸೆಕ್ಸ್‌ ಬೆಡ್‌' ಅಳವಡಿಸಲಾಗಿದೆ. ಇದನ್ನು ಆಸೀಸ್ ಅಥ್ಲೀಟ್‌ಗಳು ಕ್ವಾಲಿಟಿ ಚೆಕ್ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Athletes Test Anti Sex Beds At Paris Olympics Share Videos On Instagram video goes viral kvn

ಪ್ಯಾರಿಸ್: ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮೊದಲು ಪರಿಚಯಿಸಿದ್ದ 'ಆ್ಯಂಟಿ ಸೆಕ್ಸ್‌ ಬೆಡ್‌'ಗಳು ಇದೀಗ 2024ರ ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಗ್ರಾಮಕ್ಕೂ ಎಂಟ್ರಿಕೊಟ್ಟಿವೆ. ಒಲಿಂಪಿಕ್ಸ್‌ ಕ್ರೀಡಾಗ್ರಾಮದಲ್ಲಿ ಇರುವಾಗ ಅಥ್ಲೀಟ್‌ಗಳು ಅನ್ಯೋನ್ಯತೆಯನ್ನು ತಡೆಯುವ ಉದ್ದೇಶದಿಂದ ಆಯೋಜಕರು ಕಾರ್ಡ್‌ಬೋರ್ಡ್‌ನಿಂದ ಮಾಡಿದ ಹಾಸಿಗೆಗಳನ್ನು ಮತ್ತೊಮ್ಮೆ ಪರಿಚಯಿಸಲಾಗಿದೆ. ಕಳೆದ ಬಾರಿಯೇ 'ಆ್ಯಂಟಿ ಸೆಕ್ಸ್‌ ಬೆಡ್‌'ಗಳು ಅಳವಡಿಸಿದ್ದರ ಬಗ್ಗೆ ಕೆಲವು ಅಥ್ಲೀಟ್‌ಗಳು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಹೀಗಿದ್ದೂ ಮತ್ತೊಮ್ಮೆ ಒಲಿಂಪಿಕ್ಸ್ ಆಯೋಜಕರು 'ಆ್ಯಂಟಿ ಸೆಕ್ಸ್‌ ಬೆಡ್‌'ಗಳನ್ನು ಕ್ರೀಡಾಗ್ರಾಮದಲ್ಲಿ ವ್ಯವಸ್ಥೆ ಮಾಡಿದ್ದಾರೆ.

ಇದೀಗ ಆಸ್ಟ್ರೇಲಿಯಾದ ಟೆನಿಸ್ ತಾರೆಯರಾದ ಡೇರಿಯ ಸಾವಿಲ್ಲೆ ಮತ್ತು ಎಲೆನ್ ಪೆರೆಜ್‌ ಜತೆಯಾಗಿ 'ಆ್ಯಂಟಿ ಸೆಕ್ಸ್‌ ಬೆಡ್‌'ಗಳ ಕ್ವಾಲಿಟಿ ಟೆಸ್ಟ್ ಮಾಡಿದ್ದಾರೆ. ಈ ಬೆಡ್‌ನ ಮೇಲೆ ಈ ಜೋಡಿ ವಾಲಿ ಪ್ರಾಕ್ಟೀಸ್, ಸ್ಕ್ವಾಟ್‌ ಜಂಪ್ಸ್‌, ಸ್ಟೆಪ್‌-ಅಪ್ಸ್ ಸೇರಿದಂತೆ ಹಲವು ಅಭ್ಯಾಸಗಳನ್ನು ನಡೆಸಿದ್ದು, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ದಿಗ್ಗಜ ಶೂಟರ್‌ ಅಭಿನವ್‌ ಬಿಂದ್ರಾಗೆ ಒಲಿಂಪಿಕ್‌ ಆರ್ಡರ್‌ ಗೌರವ! ಏನಿದು ಒಲಿಂಪಿಕ್‌ ಆರ್ಡರ್‌?

 
 
 
 
 
 
 
 
 
 
 
 
 
 
 

A post shared by Daria Saville (@daria_sav)

"ಒಲಿಂಪಿಕ್ಸ್‌ ಗ್ರಾಮದಲ್ಲಿರುವ ಕಾರ್ಡ್‌ಬೋರ್ಡ್‌ಗಳನ್ನು ಟೆಸ್ಟ್‌ ಮಾಡಿದ್ದೇವೆ" ಎನ್ನುವ ಕ್ಯಾಪ್ಶನ್ ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹೀಗಿದೆ ನೋಡಿ ಆ ವಿಡಿಯೋ:

ಇನ್ನು ಐರ್ಲೆಂಡ್ ಜಿಮ್ನಾಸ್ಟ್‌ ಪಟು ರೀಸ್ ಮೆಕ್ಲೆನಾಘನ್ ಕೂಡಾ ಈ 'ಆ್ಯಂಟಿ ಸೆಕ್ಸ್‌ ಬೆಡ್‌' ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

 
 
 
 
 
 
 
 
 
 
 
 
 
 
 

A post shared by Rhys McClenaghan (@rhysmcc1)

ಇನ್ನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಪರ್ಧೆಯ ಕುರಿತಾಗಿ ಹೇಳುವುದಾದರೇ, ಇದೇ ಜುಲೈ 26ರಿಂದ ಆರಂಭವಾಗಲಿರುವ ಪ್ಯಾರಿಸ್ ಕ್ರೀಡಾಕೂಟದಲ್ಲಿ ಭಾರತದಿಂದ 117 ಅಥ್ಲೀಟ್‌ಗಳು ಪಾಲ್ಗೊಳ್ಳುತ್ತಿದ್ದಾರೆ. ಕಳೆದ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಶ್ರೇಷ್ಠ ಸಾಧನೆ ಮಾಡಿದ್ದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವು ಒಂದು ಚಿನ್ನ, ಎರಡು ಬೆಳ್ಳಿ ಹಾಗೂ 4 ಕಂಚಿನೊಂದಿಗೆ ಒಟ್ಟಾರೆ 7 ಪದಕಗಳನ್ನು ಮುಡಿಗೇರಿಸಿಕೊಂಡಿತ್ತು.

ಈಗಾಗಲೇ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಕ್ರೀಡಾಪಟುಗಳಿಗೆ ಬಿಸಿಸಿಐ 8.5 ಕೋಟಿ ರುಪಾಯಿ ನೆರವು ಘೋಷಿಸಿದೆ. ಈಗಾಗಲೇ ಭಾರತದ ಹಲವು ಕ್ರೀಡಾಪಟುಗಳು ಒಲಿಂಪಿಕ್ಸ್ ಕ್ರೀಡಾಗ್ರಾಮವನ್ನು ಪ್ರವೇಶಿಸಿದ್ದಾರೆ.
 

Latest Videos
Follow Us:
Download App:
  • android
  • ios