ದಿಗ್ಗಜ ಶೂಟರ್‌ ಅಭಿನವ್‌ ಬಿಂದ್ರಾಗೆ ಒಲಿಂಪಿಕ್‌ ಆರ್ಡರ್‌ ಗೌರವ! ಏನಿದು ಒಲಿಂಪಿಕ್‌ ಆರ್ಡರ್‌?

ಬಿಂದ್ರಾ 2008ರ ಬೀಜಿಂಗ್‌ ಒಲಿಂಪಿಕ್ಸ್‌ನ ಪುರುಷರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದರು. ಒಲಿಂಪಿಕ್‌ ಕ್ರೀಡಾಕೂಟದ ಪ್ರಚಾರ, ಬೆಳವಣಿಗೆಗೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಭಾರತದ ದಿಗ್ಗಜ ಶೂಟರ್‌ಗೆ ‘ಒಲಿಂಪಿಕ್‌ ಆರ್ಡರ್‌’ ಗೌರವ ನೀಡಲು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ನಿರ್ಧರಿಸಿದೆ.

Abhinav Bindra awarded prestigious Olympic Order by IOC kvn

ನವದೆಹಲಿ: ಒಲಿಂಪಿಕ್‌ ಕ್ರೀಡಾಕೂಟದ ಪ್ರಚಾರ, ಬೆಳವಣಿಗೆಗೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಭಾರತದ ದಿಗ್ಗಜ ಶೂಟರ್‌, ಒಲಿಂಪಿಕ್‌ ಚಿನ್ನ ವಿಜೇತ ಅಭಿನವ್‌ ಬಿಂದ್ರಾಗೆ ‘ಒಲಿಂಪಿಕ್‌ ಆರ್ಡರ್‌’ ಗೌರವ ನೀಡಲು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ನಿರ್ಧರಿಸಿದೆ.

ಈ ಬಗ್ಗೆ ಐಒಸಿ ಅಧ್ಯಕ್ಷ ಥಾಮಸ್‌ ಬಾಕ್‌ ಬಿಂದ್ರಾ ಅವರಿಗೆ ಪತ್ರ ಬರೆದಿದ್ದು, ಪ್ಯಾರಿಸ್‌ನಲ್ಲಿ ಆ.10ರಂದು ನಡೆಯಲಿರುವ ಐಒಸಿಯ 142ನೇ ವಾರ್ಷಿಕ ಸಭೆಯಲ್ಲಿ ಈ ಗೌರವವನ್ನು ಪ್ರಧಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಬಿಂದ್ರಾ 2008ರ ಬೀಜಿಂಗ್‌ ಒಲಿಂಪಿಕ್ಸ್‌ನ ಪುರುಷರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದರು. ಆ ಮೂಲಕ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ಅಂತಾರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್‌ ಫೆಡರೇನ್‌ (ಐಎಸ್‌ಎಸ್‌ಎಫ್‌)ನ ಅಥ್ಲೀಟ್‌ಗಳ ಸಮಿತಿಯ ಸದಸ್ಯರಾಗಿ 2010ರಿಂದ 2020ರ ವರೆಗೂ ಸೇವೆ ಸಲ್ಲಿಸಿದ್ದರು. 2018ರಿಂದ ಐಒಸಿ ಅಥ್ಲೀಟ್‌ಗಳ ಸಮಿತಿಯ ಸದಸ್ಯರಾಗಿದ್ದಾರೆ.

ಭಾರತ ತಂಡದ ಆಟಗಾರರಿಗೆ ಕೋಚ್‌ ಗೌತಮ್‌ ಗಂಭೀರ್‌ ಖಡಕ್‌ ಎಚ್ಚರಿಕೆ!

ಏನಿದು ಒಲಿಂಪಿಕ್‌ ಆರ್ಡರ್‌?

ಒಲಿಂಪಿಕ್‌ನಲ್ಲಿ ವೈಯಕ್ತಿಕ ಸಾಧನೆ, ಕ್ರೀಡಾಕೂಟದ ಬಗ್ಗೆ ಸಕಾರಾತ್ಮಕ ಪ್ರಚಾರ, ಕ್ರೀಡೆಯ ಅಭಿವೃದ್ಧಿಗೆ ವಿವಿಧ ರೀತಿಗಳಲ್ಲಿ ನೆರವಾಗುವ ವ್ಯಕ್ತಿಗಳಿಗೆ ಐಒಸಿ ಒಲಿಂಪಿಕ್‌ ಆರ್ಡರ್‌ ಗೌರವ ನೀಡಲಿದೆ. ಒಲಿಂಪಿಕ್‌ ಆರ್ಡರ್‌ ಸಮಿತಿ ಈ ಗೌರವಕ್ಕೆ ಹೆಸರುಗಳನ್ನು ಶಿಫಾರಸು ಮಾಡಲಿದ್ದು, ಕಾರ್ಯಕಾರಿ ಸಮಿತಿ ನಿರ್ಧರಿಸಲಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌: ರಾಜ್ಯದ ಅಥ್ಲೀಟ್‌ಗಳಿಗೆ ತಲಾ ₹5 ಲಕ್ಷ ಮಂಜೂರು ಮಾಡಿದ ಸಿಎಂ

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಒಂಬತ್ತು ಮಂದಿ ಕ್ರೀಡಾಪಟುಗಳಿಗೆ ತಲಾ ಐದು ಲಕ್ಷ ರೂಪಾಯಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಜೂರು ಮಾಡಿದ್ದಾರೆ.

ಕರ್ನಾಟಕ ಒಲಿಂಪಿಕ್ ಸಂಸ್ಥೆ(ಕೆಒಎ) ಅಧ್ಯಕ್ಷ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು ಅವರು ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನವಾಗಿ ತಲಾ 5 ಲಕ್ಷ ರುಪಾಯಿ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಹಣ ಮಂಜೂರು ಮಾಡಿದ್ದಾರೆ.

ಲಿಯಾಂಡರ್ ಪೇಸ್, ​​ಅಮೃತರಾಜ್ ಟೆನಿಸ್‌ ಹಾಲ್ ಆಫ್ ಫೇಮ್‌ ಸೇರ್ಪಡೆ

ಕ್ರೀಡಾಕೂಟದ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್‌ನಲ್ಲಿ ರಾಜ್ಯದ ಅಶ್ವಿನಿ ಪೊನ್ನಪ್ಪ, ಮಹಿಳಾ ಗಾಲ್ಫ್‌ನಲ್ಲಿ ಅದಿತಿ ಅಶೋಕ್, ಈಜು ಸ್ಪರ್ಧೆಯಲ್ಲಿ ಧಿನಿಧಿ ದೇಸಿಂಘು, ಶ್ರೀಹರಿ ನಟರಾಜ್‌, ಅಥ್ಲೆಟಿಕ್ಸ್‌ನಲ್ಲಿ ಎಂ.ಆರ್.ಪೂವಮ್ಮ, ಮಿಜೋ ಚಾಕೋ, ಟೇಬಲ್‌ ಟೆನಿಸ್‌ನಲ್ಲಿ ಅರ್ಚನಾ ಕಾಮತ್, ಪುರುಷರ ಟೆನಿಸ್ ಡಬಲ್ಸ್‌ನಲ್ಲಿ ರೋಹನ್ ಭೋಪಣ್ಣ, ಪುರುಷರ 71 ಕೆಜಿ ಬಾಕ್ಸಿಂಗ್‌ನಲ್ಲಿ ನಿಶಾಂತ್ ದೇವ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಈ 9 ಮಂದಿಗೆ ಕೆಒಎ ವತಿಯಿಂದ ಪ್ರತ್ಯೇಕ ನೆರವು ದೊರೆಯಲಿದೆ ಎಂದು ಗೋವಿಂದರಾಜು ಅವರು ತಿಳಿಸಿದ್ದಾರೆ. ಒಲಿಂಪಿಕ್ಸ್‌ ಜು.26 ರಿಂದ ಆಗಸ್ಟ್ 11ರ ವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿದೆ.

Latest Videos
Follow Us:
Download App:
  • android
  • ios