ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: 3 ಚಿನ್ನ ಗೆದ್ದ ಭಾರತ ತಂಡ
ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಮಹಿಳಾ ಕುಸ್ತಿಪಟುಗಳು ಪ್ರಾಬಲ್ಯ ಮೆರೆದಿದ್ದು 3 ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ನವದೆಹಲಿ(ಫೆ.21): ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮಹಿಳಾ ಕುಸ್ತಿಪಟುಗಳು ಪ್ರಾಬಲ್ಯ ಮೆರೆದಿದ್ದಾರೆ. ಗುರುವಾರ ಆರಂಭವಾದ ಮಹಿಳಾ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ತಾರಾ ಮಹಿಳಾ ಕುಸ್ತಿಪಟುಗಳಾದ ದಿವ್ಯಾ ಕಕ್ರಾನ್, ಸರಿತಾ ಮೋರ್ ಮತ್ತು ಪಿಂಕಿ ಚಿನ್ನದ ಪದಕ ಗೆದ್ದಿದ್ದರೇ, ನಿರ್ಮಲಾ ದೇವಿ ಬೆಳ್ಳಿಗೆ ತೃಪ್ತಿಪಟ್ಟರು. ಒಟ್ಟಾರೆ ಭಾರತ 4 ಚಿನ್ನ, 1 ಬೆಳ್ಳಿ, 4 ಕಂಚಿನೊಂದಿಗೆ 9 ಪದಕ ಗೆದ್ದಿದ್ದು ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
ಏಷ್ಯನ್ ಕುಸ್ತಿ: ಐತಿಹಾಸಿಕ ಚಿನ್ನ ಗೆದ್ದ ಸುನಿಲ್ ಕುಮಾರ್!
ಮಹಿಳೆಯರ 68 ಕೆ.ಜಿ. ವಿಭಾಗದ ಫ್ರೀಸ್ಟೈಲ್ ಫೈನಲ್ ಸ್ಪರ್ಧೆಯಲ್ಲಿ ದಿವ್ಯಾ, ಕಿರಿಯರ ವಿಶ್ವ ಚಾಂಪಿಯನ್ ಜಪಾನ್‌ನ ನರುಹಾ ಮತ್ಸುಯೂಕಿ ವಿರುದ್ಧ ಗೆಲುವು ಸಾಧಿಸಿದರು. ಕೂಟದಲ್ಲಿ ದಿವ್ಯಾ ಅತ್ಯುತ್ತಮ ಪ್ರದರ್ಶನ ತೋರಿದರು. ದಿವ್ಯಾ ಆಡಿದ 4 ಸ್ಪರ್ಧೆಗಳಲ್ಲಿ ಜಯಭೇರಿ ಬಾರಿಸಿದರು. 59 ಕೆ.ಜಿ. ವಿಭಾಗದ ಮತ್ತೊಂದು ಫೈನಲ್ ಸ್ಪರ್ಧೆಯಲ್ಲಿ ಸರಿತಾ ಮೋರ್, ಮಂಗೋಲಿಯಾದ ಕುಸ್ತಿಪಟು ವಿರುದ್ಧ ಜಯಿಸಿ ಚಿನ್ನ ಗೆದ್ದರು. 55 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಪಿಂಕಿ, ಚಿನ್ನದ ಪದಕ ಗೆದ್ದರು.
ಏಷ್ಯನ್ ಕುಸ್ತಿ: ಭಾರತಕ್ಕೆ ಮತ್ತೆ 3 ಕಂಚು
ನಿರ್ಮಲಾಗೆ ರಜತ:
4ನೇ ಚಿನ್ನದ ಭರವಸೆ ಮೂಡಿಸಿದ್ದ ನಿರ್ಮಲಾ ದೇವಿ 50 ಕೆ.ಜಿ. ವಿಭಾಗದ ಫೈನಲ್ ಪಂದ್ಯದಲ್ಲಿ ಜಪಾನ್‌ನ ಮಿಹೊ ಇಗರ್ಶಿ ವಿರುದ್ಧ 2-3 ರಿಂದ ಪರಾಭವ ಹೊಂದುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.