ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಸಂಜೀತ್‌ಗೆ ಒಲಿದ ಚಿನ್ನದ ಪದಕ
* ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸಾರ್ವಕಾಲಿಕ ಸಾಧನೆ ಮಾಡಿದ ಭಾರತದ ಬಾಕ್ಸರ್‌ಗಳು
* ಚಿನ್ನ ಗೆದ್ದ ಸಂಜಿತ್, ಬೆಳ್ಳಿಗೆ ತೃಪ್ತಿಪಟ್ಟುಕೊಂಡ ಅಮಿತ್, ಶಿವ್ ಥಾಪ
*ಪುರುಷರ 91 ಕೆ.ಜಿ ವಿಭಾಗದ ಫೈನಲ್‌ನಲ್ಲಿ ರಿಯೋ ಓಲಿಂಪಿಕ್ಸ್ ಪದಕ ವಿಜೇತನನ್ನು ಸೋಲಿಸಿದ ಸಂಜಿತ್
ದುಬೈ(ಜೂ.01): ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ನಲ್ಲಿ ಭಾರತ ಅತ್ಯದ್ಭುತ ಪ್ರದರ್ಶನ ತೋರುವ ಮೂಲಕ 2 ಚಿನ್ನದೊಂದಿಗೆ ಒಟ್ಟು 15 ಪದಕಗಳನ್ನು ಜಯಿಸುವ ಮೂಲಕ ಸಾರ್ವಕಾಲಿಕ ಸಾಧನೆ ಮಾಡಿದೆ.
ಸೋಮವಾರ ನಡೆದ ಪುರುಷರ 91 ಕೆ.ಜಿ ವಿಭಾಗದ ಫೈನಲ್‌ನಲ್ಲಿ ರಿಯೋ ಓಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ, ಕಜಕಸ್ತಾನದ ವಾಸ್ಸಿಲಿ ವಿರುದ್ಧ ಸಂಜಿತ್ 3-2 ಅಂತರದಲ್ಲಿ ಗೆಲುವು ಸಾಧಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಈ ಮೊದಲು ಮಹಿಳೆಯರ 75 ಕೆ.ಜಿ ವಿಭಾಗದಲ್ಲಿ ಪೂಜಾ ರಾಣಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದರು.
ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: 10 ಪದಕ ಗೆದ್ದ ಭಾರತದ ಮಹಿಳಾ ಬಾಕ್ಸರ್‌ಗಳು
ಇನ್ನುಳಿದಂತೆ ಫೈನಲ್‌ನಲ್ಲಿ ಮುಗ್ಗರಿಸಿದ ಅಮಿತ್ ಪಂಘಾಲ್(52 ಕೆ.ಜಿ) ಹಾಗೂ ಶಿವ ಥಾಪ (64 ಕೆ.ಜಿ) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. 15 ಪದಕಗಳೊಂದಿಗೆ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ತೋರಿದೆ. 2019ರಲ್ಲಿ ಭಾರತ 13 ಪದಕ ಗೆದ್ದಿತ್ತು.