* ‍‍ಏಷ್ಯನ್‌ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸಾರ್ವಕಾಲಿಕ ಸಾಧನೆ.* ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ 15 ಪದಕ ಪಕ್ಕಾ*  ಸೆಮೀಸ್‌ ಪ್ರವೇಶಿಸಿದ ಅಮಿತ್‌ ಪಂಘಾಲ್‌, ವಿಕಾಸ್‌ ಕೃಷನ್‌ ಹಾಗೂ ವರೀಂದರ್‌ ಸಿಂಗ್‌

ದುಬೈ(ಮೇ.28): ಇಲ್ಲಿ ನಡೆಯುತ್ತಿರುವ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ 15 ಪದಕಗಳನ್ನು ಗೆಲ್ಲುವುದು ಖಚಿತವಾಗಿದೆ. ಈ ಮೂಲಕ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಸಾರ್ವಕಾಲಿಕ ಸಾಧನೆ ಮಾಡಿದೆ.

ತಾರಾ ಬಾಕ್ಸರ್‌ಗಳಾದ ಅಮಿತ್‌ ಪಂಘಾಲ್‌, ವಿಕಾಸ್‌ ಕೃಷನ್‌ ಹಾಗೂ ವರೀಂದರ್‌ ಸಿಂಗ್‌ ಸಹ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. 2019ರ ಆವೃತ್ತಿಯಲ್ಲಿ 13 ಪದಕಗಳನ್ನು ಗೆದ್ದಿದ್ದು, ಭಾರತದ ಈ ವರೆಗಿನ ದಾಖಲೆಯಾಗಿತ್ತು.

ಫ್ರೆಂಚ್‌ ಓಪನ್‌ ಟೆನಿಸ್‌: ಸುಮಿತ್‌ಗೆ ಸೋಲು

ಪ್ಯಾರಿಸ್‌: ಭಾರತದ ಅಗ್ರ ಟೆನಿಸಿಗ ಸುಮಿತ್‌ ನಗಾಲ್‌ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೂರ್ನಿಯ ಪ್ರಧಾನ ಸುತ್ತಿಗೆ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ. ಟೂರ್ನಿಯ ಅರ್ಹತಾ ಸುತ್ತಿನ 2ನೇ ಪಂದ್ಯದಲ್ಲಿ ನಗಾಲ್‌, ವಿಶ್ವ ರ‍್ಯಾಂಕಿಂಗ್‌ನಲ್ಲಿ ತಮಗಿಂತ 23 ಸ್ಥಾನಗಳು ಕೆಳಗಿರುವ, ವಿಶ್ವ ನಂ.146 ಚಿಲಿ ದೇಶದ ಅಲೆಯಾಂಡ್ರೋ ಟಬಿಲೊ ವಿರುದ್ಧ 3-6, 3-6 ನೇರ ಸೆಟ್‌ಗಳಲ್ಲಿ ಪರಾಭವಗೊಂಡರು. 

ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌‌: ಭಾರತಕ್ಕೆ 12 ಪದಕ ಖಚಿತ

ಟೂರ್ನಿಯಲ್ಲಿ ಭಾರತದ ಯಾವೊಬ್ಬ ಸಿಂಗಲ್ಸ್‌ ಆಟಗಾರರು ಪ್ರಧಾನ ಸುತ್ತಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ರಾಮ್‌ಕುಮಾರ್‌ ರಾಮನಾಥನ್‌, ಪ್ರಜ್ನೇಶ್‌ ಗುಣೇಶ್ವರನ್‌ ಹಾಗೂ ಅಂಕಿತಾ ರೈನಾ ಸಹ ಅರ್ಹತಾ ಸುತ್ತಿನಲ್ಲೇ ಸೋಲುಂಡಿದ್ದರು. ಪುರುಷರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಹಾಗೂ ದಿವಿಜ್‌ ಶರಣ್‌ ಸ್ಪರ್ಧಿಸಲಿದ್ದಾರೆ.