ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌‌: ಭಾರತಕ್ಕೆ 12 ಪದಕ ಖಚಿತ

* ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ 12 ಪದಕ ಪಕ್ಕಾ

* ವೇಳಾಪಟ್ಟಿ ಸಿದ್ಧಗೊಂಡಾಗಲೇ 7 ಬಾಕ್ಸರ್‌ಗಳು ನೇರವಾಗಿ ಸೆಮೀಸ್ ಪ್ರವೇಶಿಸಿದ್ದರು.

* ಇದೀಗ ಮತ್ತೆ ನಾಲ್ವರು ಭಾರತದ ಬಾಕ್ಸರ್‌ಗಳು ಸೆಮೀಸ್‌ಗೇರಿದ್ದಾರೆ.

Asian Boxing Championships Indian Boxer Assured 12 Medals kvn

ದುಬೈ(ಮೇ.27): ಇಲ್ಲಿ ನಡೆಯುತ್ತಿರುವ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಕನಿಷ್ಠ 12 ಪದಕಗಳು ದೊರೆಯುವುದು ಖಚಿತವಾಗಿದೆ. ವೇಳಾಪಟ್ಟಿ ಸಿದ್ಧಗೊಂಡಾಗಲೇ ತಾರಾ ಬಾಕ್ಸರ್‌ ಮೇರಿ ಕೋಮ್‌(51 ಕೆ.ಜಿ) ಸೇರಿ 7 ಬಾಕ್ಸರ್‌ಗಳು ನೇರವಾಗಿ ಸೆಮಿಫೈನಲ್‌ ಪ್ರವೇಶಿಸಿ, ಪದಕ ಖಚಿತಪಡಿಸಿಕೊಂಡಿದ್ದರು. 

ಇದೀಗ ಸಂಜೀತ್‌ (91 ಕೆ.ಜಿ), ಸಾಕ್ಷಿ (54 ಕೆ.ಜಿ), ಜ್ಯಾಸ್ಮಿನ್‌(57 ಕೆ.ಜಿ), ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಸಿಮ್ರಜ್‌ಜಿತ್‌ ಕೌರ್‌ (60 ಕೆ.ಜಿ) ಹಾಗೂ ಶಿವ ಥಾಪ (64 ಕೆ.ಜಿ) ಕ್ವಾರ್ಟರ್‌ ಫೈನಲ್‌ನಲ್ಲಿ ಜಯಿಸಿ, ಸೆಮೀಸ್‌ಗೇರುವ ಮೂಲಕ ಪದಕ ಖಚಿತಪಡಿಸಿಕೊಂಡಿದ್ದಾರೆ.

ಫ್ರೆಂಚ್‌ ಓಪನ್‌: ರಾಮ್‌, ಅಂಕಿತಾಗೆ ಸೋಲು

ಪ್ಯಾರಿಸ್‌: ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯ ಪ್ರಧಾನ ಸುತ್ತಿಗೇರುವ ಭಾರತದ ಅಂಕಿತಾ ರೈನಾ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ಫ್ರೆಂಚ್‌ ಓಪನ್‌ ಮಹಿಳಾ ಸಿಂಗಲ್ಸ್‌ನ ಅರ್ಹತಾ ಸುತ್ತಿನ 2ನೇ ಪಂದ್ಯದಲ್ಲಿ ಅಂಕಿತಾ, ಜರ್ಮನಿಯ ಗ್ರೀಟ್‌ ಮಿನ್ನೆನ್‌ ವಿರುದ್ಧ 2-6, 0-6 ಸೆಟ್‌ಗಳಲ್ಲಿ ಸೋತು ಹೊರಬಿದ್ದರು. 

ಫ್ರೆಂಚ್‌ ಓಪನ್‌ ಟೆನಿಸ್‌: ರಾಮ್‌ಕುಮಾರ್‌ಗೆ ಗೆಲುವು, ಪ್ರಜ್ನೇಶ್‌ಗೆ ಸೋಲಿನ ಶಾಕ್

ಇದೇ ಪುರುಷರ ಸಿಂಗಲ್ಸ್‌ನ 2ನೇ ಪಂದ್ಯದಲ್ಲಿ ರಾಮ್‌ಕುಮಾರ್‌ ರಾಮನಾಥನ್‌, ಉಜ್ಬೇಕಿಸ್ತಾನದ ಡೆನಿಸ್‌ ಇಸ್ಟೊಮಿನ್‌ ವಿರುದ್ಧ 1-6, 2-6 ಸೆಟ್‌ಗಳಲ್ಲಿ ಪರಾಭವಗೊಂಡು ಟೂರ್ನಿಯಿಂದ ನಿರ್ಗಮಿಸಿದರು.
 

Latest Videos
Follow Us:
Download App:
  • android
  • ios