* ಆರ್ಚರಿ ವಿಶ್ವಕಪ್ ಕ್ರೀಡಾಕೂಟದಲ್ಲಿ ಭಾರತಕ್ಕೆ ನಿರಾಸೆ* ಪದಕವಿಲ್ಲದೇ ಬರಿಗೈನಲ್ಲಿ ವಾಪಾಸಾದ ಭಾರತ* ಆತನು ದಾಸ್‌-ದೀಪಿಕಾ ಕುಮಾರಿಗೆ ಎದುರಾಯ್ತು ನಿರಾಸೆ

ಯಾಂಕ್ಟನ್‌(ಅ.02): ಆರ್ಚರಿ ವಿಶ್ವಕಪ್‌ (Archey World Cup) ಫೈನಲ್‌ ಟೂರ್ನಿಯಿಂದ ಭಾರತ ಬರಿಗೈನಲ್ಲಿ ವಾಪಸಾಗಲಿದೆ. ಮಹಿಳೆಯರ ವೈಯಕ್ತಿಕ ರೀಕರ್ವ್‌ ಕಂಚಿನ ಪದಕದ ಪಂದ್ಯದಲ್ಲಿ ದೀಪಿಕಾ ಕುಮಾರಿ (Deepika Kumari) ಸೋಲುಂಡ ಬಳಿಕ ಅವರ ಪತಿ ಅತನು ದಾಸ್‌ (Atanu Das) ಕೂಡ ಕಂಚಿನ ಪದಕದ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು. 

ಹಾಲಿ ಒಲಿಂಪಿಕ್‌ ಚಾಂಪಿಯನ್‌ ಟಿರ್ಕಿಯ ಮೆಟೆ ಗಾಜೊಜ್‌ ವಿರುದ್ಧ 0-6(27-29, 26-27,28-30)ರಲ್ಲಿ ಸೋತರು. ದೀಪಿಕಾ ಸ್ಪರ್ಧಿಸುತ್ತಿದ್ದ ವೇಳೆ ಅತನು ಕೋಚ್‌ ಆಗಿ ಕಾಣಿಸಿಕೊಂಡಿದ್ದರು. ಈ ಮೊದಲು ವಿಶ್ವ 2ನೇ ಶ್ರೇಯಾಂಕಿತ ಆರ್ಚರ್‌ ದೀಪಿಕಾ ಕುಮಾರಿ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಜರ್ಮನಿಯ ಮಿಚೆಲ್ ಕ್ರೊಪ್ಪೆನ್‌ ಎದುರು ಸೋಲು ಕಂಡಿದ್ದರು.

ಏಷ್ಯನ್‌ ಟಿಟಿ: ಕಂಚು ಗೆದ್ದ ಭಾರತ ತಂಡ

ದೋಹಾ: ಏಷ್ಯನ್‌ ಟೇಬಲ್‌ ಟೆನಿಸ್‌ (Asian Table Tennis) ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪುರುಷರ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ. ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತ 0-3 ಅಂತರದಲ್ಲಿ ಕೊರಿಯಾ ವಿರುದ್ಧ ಸೋಲುಂಡಿತು. ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೂ ಕಂಚಿನ ಪದಕ ದೊರೆಯಲಿದೆ.

Scroll to load tweet…

ಜಿ.ಸತ್ಯನ್‌, ಶರತ್‌ ಕಮಲ್‌, ಹರ್ಮೀತ್‌ ದೇಸಾಯಿ, ಸುನಿಲ್ ಶೆಟ್ಟಿ, ಮತ್ತು ಮಾನವ ಥಕ್ಕರ್ ಅವರನ್ನೊಳಗೊಂಡ ತಂಡ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. 1976ರ ಬಳಿಕ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿದು ಭಾರತಕ್ಕೆ ಎರಡನೇ ಪದಕವಾಗಿದೆ. ಭಾರತ ಟೇಬಲ್ ಟೆನಿಸ್‌ ತಂಡದ ಸಾಧನೆಗೆ ಸಾಯ್ ಶುಭ ಹಾರೈಸಿದೆ. 

ರಿಯೋ ಒಲಿಂಪಿಕ್ಸ್‌ನ 10+ ಬಾಕ್ಸಿಂಗ್‌ ಪಂದ್ಯಗಳಲ್ಲಿ ಮೋಸ!

ಸೆಮಿಫೈನಲ್‌ಗೆ ಭಾರತ ಟೇಬಲ್ ಟೆನಿಸ್‌ ತಂಡವು ಅರ್ಹತೆ ಗಿಟ್ಟಿಸಿಕೊಳ್ಳುತ್ತಿದ್ದಂತೆಯೇ ಶರತ್ ಕಮಲ್‌ ಟ್ವೀಟ್‌ ಮೂಲಕ ಸಂತಸ ವ್ಯಕ್ತಪಡಿಸಿದ್ದರು.

Scroll to load tweet…

 ಜಿ.ಸತ್ಯನ್‌, ಶರತ್‌ ಕಮಲ್‌, ಹರ್ಮೀತ್‌ ದೇಸಾಯಿ ತಮ್ಮ ಪಂದ್ಯಗಳಲ್ಲಿ ಸೋತರು. ಮಹಿಳಾ ತಂಡ ಕ್ವಾರ್ಟರ್‌ ಫೈನಲ್‌ನಲ್ಲೇ ಸೋಲುಂಡಿತ್ತು.