ರಾಷ್ಟ್ರೀಯ ಕ್ರೀಡಾ ದಿನ; ಫಿಟ್ ಇಂಡಿಯಾ ಮೊಬೈಲ್ ಆ್ಯಪ್ ಬಿಡುಗಡೆ!

  • 135 ಕೋಟಿ ಭಾರತೀಯರ ಅತ್ಯಂತ ಸಮಗ್ರ ಫಿಟ್ನೆಸ್ ಉಚಿತ ಆ್ಯಪ್
  • ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಸಚಿವ ಅನುರಾಗ್ ಠಾಕೂರ್‌ರಿಂದ ಆ್ಯಪ್ ಲಾಂಚ್
  • ಫಿಟ್ ಇಂಡಿಯಾ ಆ್ಯಪ್‌ನಿಂದ ಸದೃಢ  ನವ ಭಾರತ ನಿರ್ಮಾಣ
     
Anurag Singh Thakur launched Fit India Mobile App on National Sports Day ckm

ನವದೆಹಲಿ(ಆ.29): ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಉಚಿತ ಫಿಟ್ ಇಂಡಿಯಾ ಆ್ಯಪ್ ಬಿಡುಗಡೆ ಮಾಡಲಾಗಿದೆ. ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಫಿಟ್ ಇಂಡಿಯಾ ಎರಡನೇ ವಾರ್ಷಿಕೋತ್ಸವ ಮತ್ತು ಆಜಾ಼ದಿ ಕಾ ಅಮೃತ್ ಮಹೋತ್ಸವ್ ಅಂಗದ ಕಾರ್ಯಕ್ರಮದಲ್ಲಿ ನೂತನ ಆ್ಯಪ್ ಬಿಡುಗಡೆ ಮಾಡಲಾಯಿತು.  ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ  ಅನುರಾಗ್ ಠಾಕೂರ್  ಫಿಟ್ ಇಂಡಿಯಾ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದರು. 

ಚಿನ್ನದ ಹುಡುಗನಿಗೆ ರಕ್ಷಣಾ ಸಚಿವರಿಂದ ಸನ್ಮಾನ; ಕ್ರೀಡಾಂಗಣಕ್ಕೆ ನೀರಜ್ ಚೋಪ್ರಾ ಹೆಸರು!

ಮೊಬೈಲ್ ಆ‍್ಯಪ್ ಬಿಡುಗಡೆಗೂ ಮುನ್ನ ಅನುರಾಗ್ ಠಾಕೂರ್ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಹಾಕಿ ದಂತ ಕಥೆ ಮೇಜರ್ ಧ್ಯಾನ್ ಚಂದ್ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.  ನಿಶಿತ್ ಪ್ರಮಾಣಿಕ್ ಅವರು ಸಹ ಪುತ್ಥಳಿಗೆ ಗೌರವ ಸಲ್ಲಿಸಿದರು.

 

ಸಚಿವರು ವರ್ಚುವಲ್ ಮೂಲಕ ಭಾರತೀಯ ಹಾಕಿ ತಂಡದ ನಾಯಕ ಮನ್ ಪ್ರೀತ್ ಸಿಂಗ್, ಕುಸ್ತಿಪಟು ಸಂಗ್ರಾಮ್ ಸಿಂಗ್, ಕ್ರೀಡಾ ಪತ್ರಕರ್ತ ಅಜಯ್ ಮೆಮೊನ್ ಮತ್ತು ಪೈಲೆಟ್,  ಕ್ಯಾಪ್ಟನ್ ಅನ್ಯಾ ದಿವ್ಯಾ, ಶಾಲಾ ವಿದ್ಯಾರ್ಥಿ ಮತ್ತು ಗೃಹಿಣಿಯೊಂದಿಗೆ ಸಂವಾದ ನಡೆಸಿದರು. ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ನಂತರ ಆ್ಯಪ್ ಬಳಕೆ ಕುರಿತು ಮಾಹಿತಿ ನೀಡಲಾಯಿತು.  ಫಿಟ್ ಇಂಡಿಯಾ ಆ್ಯಪ್ ಉಚಿತವಾಗಿದ್ದು, ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಮತ್ತು ಆಂಡ್ರಾಯ್ಡ್ ಮತ್ತು ಐ.ಓ.ಎಸ್ ವೇದಿಕೆಗಳಲ್ಲಿ ಇದು ಲಭ್ಯವಿದೆ. ಇದನ್ನು ಬೇಸಿಕ್ ಸ್ಮಾರ್ಟ್ ಫೋನ್ ಗಳಲ್ಲೂ ಕಾರ್ಯನಿರ್ವಹಿಸುವಂತೆ ಅಭಿವೃದ್ಧಿಪಡಿಸಲಾಗಿದೆ.
 
ರಾಷ್ಟ್ರೀಯ ಕ್ರೀಡಾ ದಿನ ಹಾಗೂ ಫಿಟ್ ಇಂಡಿಯಾದ ಎರಡನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರನ್ನು ಅಭಿನಂದಿಸಿದ ಅವರು, “ಫಿಟ್ ಇಂಡಿಯಾ ಮೊಬೈಲ್ ಆ್ಯಪ್ ಪ್ರತಿಯೊಬ್ಬ ಭಾರತೀಯನ ಅಂಗೈಯಲ್ಲಿ ಫಿಟ್ನೆಸ್ ಮಟ್ಟವನ್ನು ಸುಲಭವಾಗಿ ಅಳೆಯಬಹುದಾಗಿದೆ. ಇದರಲ್ಲಿ ಕೆಲವು ಅಸಾಧಾರಣ ವೈಶಿಷ್ಟ್ಯಗಳಿದ್ದು, “ಫಿಟ್ನೆಸ್ ಸ್ಕೋರ್”, ಅನಿಮೇಟೆಡ್ ವಿಡಿಯೋಸ್, ಆಕ್ಟಿವಿಟಿ ಟ್ರಾಕರ್ಸ್ ಮತ್ತು ಮೈ ಪ್ಲಾನ್ ನಂತಹ ವೈಯಕ್ತಿಕವಾಗಿ ಬೇಕಾಗಿರುವ ಅಗತ್ಯಗಳನ್ನು ಇದು ಪೂರೈಸಲಿದೆ.

 

ವಿಶ್ವ ಅಥ್ಲೆಟಿಕ್ಸ್; ರಿಲೆಯಲ್ಲಿ ಪದಕ ವಿಜೇತ ಕನ್ನಡತಿ ಪ್ರಿಯಾ ಮೋಹನ್‌ಗೆ ಸನ್ಮಾನ!

ಪ್ರತಿಯೊಬ್ಬ ಭಾರತೀಯರ ಬದುಕಿನಲ್ಲಿ ಫಿಟ್ನೆಸ್ ಅವಿಭಾಜ್ಯ ಅಂಗವನ್ನಾಗಿ ಮಾಡುವ ಗುರಿಯೊಂದಿಗೆ ರಾಷ್ಟ್ರೀಯ ಕ್ರೀಡಾ ದಿನದಂದು ಗೌರವಾನ್ವಿತ ಪ್ರಧಾನಮಂತ್ರಿ ಅವರು 2019 ರ ಆಗಸ್ಟ್ 29 ರಂದು ಫಿಟ್ ಇಂಡಿಯಾ ಆಂದೋಲನಕ್ಕೆ ಚಾಲನೆ ನೀಡಿದ್ದರು. ಇಂದು ಇದು ಜನಾಂದೋಲನವಾಗಿದೆ. ಫಿಟ್ ಇಂಡಿಯಾ ಆಂದೋಲನದಲ್ಲಿ ಸಾರ್ವಜನಿಕರು ಭಾಗಹಿಸುವ ಮೂಲಕ ಆಜಾ಼ದಿ ಕಾ ಅಮೃತ್ ಮಹೋತ್ಸವ್ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಆರೋಗ್ಯಕರ ಸದೃಢ ಭಾರತ ನಾವು ನಮ್ಮ ನಾಗರಿಕರಿಗೆ ಕಲ್ಪಿಸುವ ಹೊಸ ಭಾರತವಾಗಿದೆ. “ಫಿಟ್ ಇಂಡಿಯಾ ಮೊಬೈಲ್ ಆ್ಯಪ್ 135 ಕೋಟಿ ಭಾರತೀಯರ ಅತ್ಯಂತ ಸಮಗ್ರ ಫಿಟ್ನೇಸ್ ಆ್ಯಪ್ ಆಗಿದೆ” ಎಂದು ಅನುರಾಗ್ ಠಾಕೂರ್ ಹೇಳಿದರು.

ನಮ್ಮ ಯುವ ಸಮೂಹ ಸದೃಢಗೊಳ್ಳುವುದನ್ನು ಅರಿತುಕೊಳ್ಳುವ ಮೂಲಕ ಅವರು ದೇಶಕ್ಕೆ ಅರ್ಥಪೂರ್ಣ ಕೊಡುಗೆ ನೀಡುವುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿಯೊಬ್ಬರೂ ಮೊಬೈಲ್ ಆ್ಯಪ್ ಅನ್ನು ಜನಪ್ರಿಯಗೊಳಿಸಬೇಕು. “ ಈ ಆ್ಯಪ್ ಉಚಿತವಾಗಿದೆ, ಆದರೆ ನಮ್ಮ ಫಿಟ್ನೇಸ್ ಗೆ ಇದು ಅಮೂಲ್ಯವಾದದ್ದು” ಎಂದು ಹೇಳಿದರು.
 

Latest Videos
Follow Us:
Download App:
  • android
  • ios