Asianet Suvarna News Asianet Suvarna News

ಒಂದೇ ಪಾಯಿಂಟ್‌ನಿಂದ ಕಂಚಿನ ಪದಕ ತಪ್ಪಿಸಿಕೊಂಡ ಶೂಟಿಂಗ್‌ ಸ್ಕೀಟ್‌ ಮಿಶ್ರ ಟೀಮ್‌!

ಶೂಟಿಂಗ್‌ ಮಿಶ್ರ ಟೀಮ್‌ನ ಸ್ಕೀಟ್‌ ವಿಭಾಗದಲ್ಲಿ ಭಾರತ ತಂಡ ಕೇವಲ ಒಂದೇ ಒಂದು ಅಂಕದಿಂದ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
 

Anant Jeet Singh NARUKA Maheshwari CHAUHAN Finish 4th in SKEET MIXED TEAM san
Author
First Published Aug 5, 2024, 7:00 PM IST | Last Updated Aug 5, 2024, 7:07 PM IST

ಪ್ಯಾರಿಸ್‌ (ಆ.5): ಮಹಿಳೆಯರ 25 ಮೀಟರ್‌ ಪಿಸ್ತೂಲ್‌ ಬಳಿಕ ಶೂಟಿಂಗ್‌ನಲ್ಲಿ ಭಾರತಕ್ಕೆ ಮತ್ತೊಂದು ಕಂಚಿನ ಪದಕ ಮಿಸ್‌ ಆಗಿದೆ. ಶೂಟಿಂಗ್‌ನ ಮಿಶ್ರ ಸ್ಕೀಟ್‌ ವಿಭಾಗದಲ್ಲಿ ಕಂಚಿನ ಪದಕದ ಮ್ಯಾಚ್‌ ಆಡಿದ್ದಅನಂತ್‌ ಜೀತ್‌ ಸಿಂಗ್‌ ನರುಕಾ ಹಾಗೂ ಮಹೇಶ್ವರಿ ಚೌಹಾಣ್‌ ಜೋಡಿ ಕೇವಲ ಒಂದೇ ಒಂದು ಶಾಟ್‌ ಮಿಸ್‌ ಆದ ಕಾರಣಕ್ಕೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಸೋಮವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಭಾರತದ ಜೋಡಿ 43-44 ರಿಂದ ಚೀನಾದ ಲಿಯು ಜಿನ್‌ಲಿನ್‌ ಹಾಗೂ ಜಿಯಾನ್‌ ಯಿಟ್‌ಲಿಂಗ್‌ ಜೋಡಿಯ ಎದುರು ಸೋಲಿಗೆ ಶರಣಾಯಿತು. ಅರಂಭದಲ್ಲಿ ಭಾರತದ ಶೂಟರ್‌ಗಳು ಎಡವಿದರೂ, 2ನೇ ಹೌಸ್‌ ಶೂಟಿಂಗ್‌ ವೇಳೆ ಜಿಯಾನ್‌ ಯಿಟ್‌ಲಿಂಗ್‌ ಮೂರು ಶಾಟ್‌ ಮಿಸ್‌ ಮಾಡಿದ್ದರಿಂದ ಭಾರತಕ್ಕೆ ತಿರುಗೇಟು ನೀಡುವ ಅವಕಾಶ ಸಿಕ್ಕಿತ್ತು. ಆದರೆ, ನಾಲ್ಕನೇ ಹೌಸ್‌ ಶೂಟಿಂಗ್‌ ವೇಳೆ ಮಹೇಶ್ವರಿ ಚೌಹಾಣ್‌ ಮಾಡಿದ ಒಂದು ಮಿಸ್‌ ಶೂಟ್‌ ಕಂಚಿನ ಪದಕದ ಅವಕಾಶವನ್ನು ಹಾಳು ಮಾಡಿತು. ಕೊನೆಯ ಎರಡು ಹೌಸ್‌ ಶೂಟಿಂಗ್‌ನಲ್ಲಿ ಎರಡೂ ತಂಡಗಳು ಎಲ್ಲಾ 16 ಅಂಕಗಳನ್ನು ಸಂಪಾದಿಸಿದ್ದವು. ಕೊನೆಯ ಹೌಸ್‌ನಲ್ಲಿ ಚೀನಾದ ಒಂದು ಶೂಟ್‌ ಮಿಸ್‌ ಆಗಿದ್ದರೂ, ಶೂಟ್‌ ಆಫ್‌ ಅವಕಾಶವಿತ್ತು. ಆದರೆ, ಜಿನ್‌ಲಿನ್‌ ಹಾಗೂ ಯಿಟ್‌ಲಿಂಗ್‌ ಇಬ್ಬರೂ ಪರ್ಫೆಕ್ಟ್‌ 8 ಅಂಕ ಸಂಪಾದಿಸಿದ್ದರಿಂದ ಭಾರತ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಮಹೇಶ್ವರಿ ಚೌಹಾಣ್‌ ಹಾಗೂ ಅನಂತ್‌ ಜೀತ್‌ ಸಿಂಗ್ ನರುಕಾ ಜೋಡಿ ಅರ್ಹತಾ ಸುತ್ತಿನಲ್ಲಿ 146 ಅಂಕ ಸಂಪಾದಿಸಿ ನಾಲ್ಕನೇ ಸ್ಥಾನ ಪಡೆದುಕೊಳ್ಳುವ ಮೂಲಕ ಕಂಚಿನ ಪದಕದ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದ್ದರು.

ಇಂದಿನಿಂದ ಕುಸ್ತಿ: ಭಾರತದ ಅಥ್ಲೀಟ್‌‌ಗಳ ಮೇಲೆ ಹೆಚ್ಚಿದ ನಿರೀಕ್ಷೆ

ಪ್ಯಾರಿಸ್‌ ಒಲಿಂಪಿಕ್ಸ್‌ನ ಶೂಟಿಂಗ್‌ ಸ್ಪರ್ಧೆಯಲ್ಲಿ ಭಾರತ ಮೂರು ಇವೆಂಟ್‌ಗಳಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.  ಮನು ಭಾಕರ್‌, ಸರಬ್ಜೋತ್‌ ಸಿಂಗ್‌ ಈ ಮುನ್ನ ತಮ್ಮ ಇವೆಂಟ್‌ಗಳಲ್ಲಿ ನಾಲ್ಕನೇ ಸ್ಥಾನ ಪಡೆದುಕೊಳ್ಳುವ ಮೂಲಕ ಕಂಚಿನ ಪದಕವನ್ನು ಮಿಸ್‌ ಮಾಡಿಕೊಂಡಿದ್ದರು.

ಪತ್ನಿ ನತಾಶಾ ಕೈಕೊಟ್ಟ ಬಳಿಕ ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಬಿಗ್ ಶಾಕ್..!

Latest Videos
Follow Us:
Download App:
  • android
  • ios