ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್: ಕ್ವಾರ್ಟರ್‌ಗೆ ಸಿಂಧು, ಲಕ್ಷ್ಯ ಲಗ್ಗೆ
ಪ್ರತಿಷ್ಠಿಯ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ತಾರಾ ಆಟಗಾರ್ತಿ ಪಿ.ವಿ.ಸಿಂಧು ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬರ್ಮಿಂಗ್‌ಹ್ಯಾಮ್(ಮಾ.19): ಅಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್‌ಗೆ ಭಾರತದ ತಾರಾ ಶಟ್ಲರ್, ಹಾಲಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಹಾಗೂ ಯುವ ಶಟ್ಲರ್ ಲಕ್ಷ್ಯ ಸೆನ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಮಹಿಳಾ ಸಿಂಗಲ್ಸ್ 2ನೇ ಸುತ್ತಿನಲ್ಲಿ ಸಿಂಧು, ಡೆನ್ಮಾರ್ಕ್ನ ಕ್ರಿಸ್ಟೋಫರ್ಸೆನ್ ವಿರುದ್ಧ 21-8, 21-8 ನೇರ ಗೇಮ್‌ಗಳಲ್ಲಿ, ಕೇವಲ 25 ನಿಮಿಷಗಳಲ್ಲಿ ಸುಲಭ ಗೆಲುವು ದಾಖಲಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧುಗೆ ಜಪಾನ್‌ನ ಅಕನೆ ಯಮಗುಚಿ ಎದುರಾಗಲಿದ್ದಾರೆ. ಈ ಇಬ್ಬರು ಹಲವು ರೋಚಕ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದಾರೆ.
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿ: ಸಿಂಧು ಶುಭಾರಂಭ
ಇದೇ ವೇಳೆ ಪುರುಷರ 2ನೇ ಸುತ್ತಿನ ಪಂದ್ಯದಲ್ಲಿ ಲಕ್ಷ್ಯ, ಥಾಯ್ಲೆಂಡ್‌ನ ವಾಂಗ್‌ಚಾರೊಯಿನ್ ವಿರುದ್ಧ 21-18, 21-12 ಗೇಮ್‌ಗಳಲ್ಲಿ ಜಯಗಳಿಸಿದರು. 2ನೇ ಸುತ್ತಿನಲ್ಲಿ ಸೋಲು ಕಂಡ ಎಚ್.ಎಸ್.ಪ್ರಣಯ್, ಸಾಯಿ ಪ್ರಣೀತ್ ಹೊರಬಿದ್ದರು. ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್-ಅಶ್ವಿನಿ ಸಹ ಸೋಲು ಕಂಡರು.