Asianet Suvarna News Asianet Suvarna News

All England Badminton ವಿಶ್ವ ನಂ.3 ಆಟಗಾರನಿಗೆ ಅಘಾತ ನೀಡಿದ ಲಕ್ಷ್ಯ ಸೆನ್, ಸೈನಾ, ಸಿಂಧು ಔಟ್!

ಅಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್

ಕ್ವಾರ್ಟರ್ ಫೈನಲ್ ಹಂತಕ್ಕೆ ಲಕ್ಷ್ಯ ಸೆನ್ 

ಪಿವಿ ಸಿಂಧು, ಸೈನಾ ನೆಹ್ವಾಲ್, ಕೆ.ಶ್ರೀಕಾಂತ್ ನಿರ್ಗಮನ

All England Badminton Lakshya Sen Stuns World no 3 Anders Antonsen PV sindhu saina Nehwal Srikanth bow out san
Author
Bengaluru, First Published Mar 17, 2022, 11:59 PM IST

ಬರ್ಮಿಂಗ್ ಹ್ಯಾಂ (ಮಾ. 17):  ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತೆ (World Championships bronze medallist ) ಲಕ್ಷ್ಯ ಸೇನ್ (Lakshya Sen )ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲಿ (All England Championships ) ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಗುರುವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೆನ್,  ವಿಶ್ವದ 3ನೇ ಶ್ರೇಯಾಂಕದ ಆಟಗಾರ  ಡೆನ್ಮಾರ್ಕ್‌ನ ಆಂಡರ್ಸ್ ಆ್ಯಂಟನ್ಸನ್ ಅವರನ್ನು ನೇರ ಗೇಮ್‌ಗಳಲ್ಲಿ ಮಣಿಸಿ ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು. ದಿನದ ಇತರ ಪಂದ್ಯಗಳಲ್ಲಿ ಒಲಿಂಪಿಕ್ ಪದಕ ವಿಜೇತರಾದ ಪಿವಿ ಸಿಂಧು (PV Sindhu ), ಸೈನಾ ನೆಹ್ವಾಲ್‌ ( Saina Nehwal) ಹಾಗೂ ಪುರುಷರ ವಿಭಾಗದಲ್ಲಿ ಕೆ.ಶ್ರೀಕಾಂತ್ ತಮ್ಮ ಹೋರಾಟ ಮುಗಿಸಿದರು.

ಅಲ್ಮೋರಾದ 20 ವರ್ಷದ ಹುಡುಗ ಸೆನ್, ಜನವರಿಯಲ್ಲಿ ಇಂಡಿಯಾ ಓಪನ್‌ನಲ್ಲಿ ಚೊಚ್ಚಲ ಸೂಪರ್ 500 ಪ್ರಶಸ್ತಿಯನ್ನು ಗೆದ್ದಿದ್ದರೆ, ಕಳೆದ ವಾರ ನಡೆದ ಜರ್ಮನ್ ಓಪನ್ ಟೂರ್ನಿಯಲ್ಲಿ ಫೈನಲ್ ಸಾಧನೆ ಮಾಡಿದ್ದರು. ಮೂರನೇ ಶ್ರೇಯಾಂಕದ ಅಂಟನ್ಸನ್ (Anders Antonsen ) ವಿರುದ್ಧ  21-16, 21-18 ರಿಂದ ಜಯ ಸಾಧಿಸಿದರು. ಆಂಟೊನ್ಸೆನ್ 2019 ರ ಬಾಸೆಲ್ ಮತ್ತು 2021 ಹುಯೆಲ್ವಾ ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಕ್ರಮವಾಗಿ ಎರಡು ಬಾರಿ ಪದಕ ಗೆದ್ದ ಷಟ್ಲರ್ ಅಗಿದ್ದಾರೆ. ಅಂತರಾಷ್ಟ್ರೀಯ ವೇದಿಕೆಯಲ್ಲಿ ಇದು ಇವರಿಬ್ಬರ ಮೊದಲ ಮುಖಾಮುಖಿ ಎನಿಸಿತ್ತು. ಸೆನ್ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಲು ಗುವಾಂಗ್ ಜು ಅವರನ್ನು ಎದುರಿಸಲಿದ್ದಾರೆ.

ಐದನೇ ಶ್ರೇಯಾಂಕದ ಭಾರತದ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜರ್ಮನಿಯ ಮಾರ್ಕ್ ಲ್ಯಾಮ್‌ಫಸ್ ಮತ್ತು ಮಾರ್ವಿನ್ ಸೀಡೆಲ್ ಅವರನ್ನು 21-7, 21-7 ರಿಂದ ಸುಲಭವಾಗಿ ಸೋಲಿಸುವ ಮೂಲಕ ಕ್ವಾರ್ಟರ್ ಫೈನಲ್ ಗೇರಿದರು.

ಕೊಹ್ಲಿಗಿಂತ ರೋಹಿತ್ ಬೆಸ್ಟ್ ಟೆಸ್ಟ್ ಕ್ಯಾಪ್ಟನ್ ಎಂದ ಮಾಜಿ ಕ್ರಿಕೆಟಿಗ
ಆದರೆ, ವಿಶ್ವದ 7ನೇ ಶ್ರೇಯಾಂಕದ ಸಿಂಧು, ಒಂದು ಗಂಟೆ ಆರು ನಿಮಿಷಗಳ ಎರಡನೇ ಸುತ್ತಿನ ಪಂದ್ಯದಲ್ಲಿ 13ನೇ ಶ್ರೇಯಾಂಕಿತ ಎಡಗೈ ಆಟಗಾರ ತಕಹಾಶಿ ವಿರುದ್ಧ 19-21, 21-16, 17-21 ಅಂತರದಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದರು. ಎರಡನೇ ಸುತ್ತಿನ ರೋಚಕ ಮೂರು ಗೇಮ್‌ಗಳ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಜಪಾನಿನ ಅಕಾನೆ ಯಮಗುಚಿ ವಿರುದ್ಧ ಸೋಲನುಭವಿಸುವ ಮೂಲಕ ಸೈನಾ ನೆಹ್ವಾಲ್ ಅವರ ಹೋರಾಟವೂ ಕೊನೆಗೊಂಡಿದೆ. ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಹಾಗೂ ವಿಶ್ವದ ಮಾಜಿ ನಂ.1 ಆಟಗಾರ್ತಿ ಸೈನಾ 50 ನಿಮಿಷಗಳ ಮಹಿಳೆಯರ ಸಿಂಗಲ್ಸ್ ಹಣಾಹಣಿಯಲ್ಲಿ ವಿಶ್ವದ ನಂ.2 ಆಟಗಾರ್ತಿ ಯಮಗುಚಿ ವಿರುದ್ಧ 14-21, 21-17, 17-21 ಗೇಮ್ ಗಳಿಂದ ಸೋಲು ಕಂಡರು. ಕಳೆದ ವಾರ ಜರ್ಮನ್ ಓಪನ್‌ನಲ್ಲಿ ಥಾಯ್ಲೆಂಡ್‌ನ ರಚನೋಕ್ ಇಂಟನಾನ್ ವಿರುದ್ಧ ನೇರ ಗೇಮ್‌ಗಳಲ್ಲಿ ಸೋತಿದ್ದ ಸೈನಾ ಈ ಬಾರಿ ಬಹಳ ಸುಧಾರಿತ ಪ್ರದರ್ಶನವನ್ನು ನೀಡಿದರು.

IPL 2022: ಐಪಿಎಲ್ ಆರಂಭಕ್ಕೂ ಮುನ್ನ ಎದುರಾಳಿ ಬ್ಯಾಟರ್‌ಗಳಿಗೆ ಖಡಕ್ ವಾರ್ನಿಂಗ್ ನೀಡಿದ ಹರ್ಷಲ್ ಪಟೇಲ್..!
ನಂತರದ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಅವರು, ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಎರಡನೇ ಸುತ್ತಿನಲ್ಲಿ ಇಂಡೋನೇಷ್ಯಾದ ಆಂಥೋನಿ ಸಿನಿಸುಕಾ ಗಿಂಟಿಂಗ್ ವಿರುದ್ಧ 21-9, 18-21, 19-21 ರಿಂದ ಸೋತರು.  ಗಮನಾರ್ಹ ಫಲಿತಾಂಶದಲ್ಲಿ, ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಅವರು ತಮ್ಮ ಆರನೇ ಶ್ರೇಯಾಂಕದ ಎದುರಾಳಿಗಳಾದ ಇಂಡೋನೇಷ್ಯಾದ ಗ್ರೇಸಿಯಾ ಪೋಲಿ ಮತ್ತು ಅಪ್ರಿಯಾನಿ ರಹಾಯು ಮೊದಲ ಗೇಮ್ ಅನ್ನು 21-18 ರಿಂದ ಗೆದ್ದ ನಂತರ 2ನೇ ಗೇಮ್ ನಲ್ಲಿ 14-19 ರಲ್ಲಿ ಹಿನ್ನಡೆಯಲ್ಲಿದ್ದ ವೇಳೆ ನಿವೃತ್ತಿ ಘೋಷಿದರು. ಇದರಿಂದಾಗ ಭಾರತದ ಜೋಡಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

Follow Us:
Download App:
  • android
  • ios