ಕೊಹ್ಲಿಗಿಂತ ರೋಹಿತ್ ಬೆಸ್ಟ್ ಟೆಸ್ಟ್ ಕ್ಯಾಪ್ಟನ್ ಎಂದ ಮಾಜಿ ಕ್ರಿಕೆಟಿಗ

* ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ

* ಹಿಟ್‌ಮ್ಯಾನ್ ರೋಹಿತ್ ಶರ್ಮಾ ನಾಯಕತ್ವದಡಿ ಟೀಂ ಇಂಡಿಯಾ ಅಜೇಯ ನಾಗಾಲೋಟ

* ಕೊಹ್ಲಿ ದಾಖಲೆಯನ್ನು ರೋಹಿತ್ ಶರ್ಮಾ ಹಿಂದಿಕ್ಕಲಿದ್ದಾರೆ ಎಂದ ವಾಸೀಂ ಜಾಫರ್

Rohit Sharma Can Become Better Test Captain Than Virat Kohli Says Wasim Jaffer kvn

ಮುಂಬೈ(ಮಾ.17): ರೋಹಿತ್ ಶರ್ಮಾ (Rohit Sharma) ಟೀಂ ಇಂಡಿಯಾ (Team India) ಮೂರು ಮಾದರಿಯ ನಾಯಕರಾದ ಬಳಿಕ ಅಜೇಯವಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಹಲವಾರು ಕ್ರಿಕೆಟ್‌ ಪಂಡಿತರು ಈಗಾಗಲೇ ಗುಣಗಾನ ಮಾಡಿದ್ದಾರೆ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ (Wasim Jaffer) ಒಂದು ಹೆಜ್ಜೆ ಮುಂದೆ ಹೋಗಿ, ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ರೋಹಿತ ಶರ್ಮಾ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
 
ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ದ ಮುಕ್ತಾಯವಾದ ಎರಡು ಪಂದ್ಯಗಳ ಟೆಸ್ಟ್ ಸರಣಿ ಸೇರಿದಂತೆ ಭಾರತ ತಂಡವು ತವರಿನಲ್ಲಿ ಆಡಿದ ಕಳೆದ 14 ಪಂದ್ಯಗಳಲ್ಲಿ ಭರ್ಜರಿ ಗೆಲುವಿನ ನಗೆ ಬೀರಿದೆ. ಲಂಕಾ ಎದುರಿನ ಟೆಸ್ಟ್ ಸರಣಿ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಟೀಂ ಇಂಡಿಯಾ 4ನೇ ಸ್ಥಾನಕ್ಕೇರಿದೆ. ಭಾರತ ತಂಡವು ತನ್ನ ಮುಂದಿನ ಟೆಸ್ಟ್ ಪಂದ್ಯವನ್ನು ಜುಲೈನಲ್ಲಿ ಇಂಗ್ಲೆಂಡ್ ವಿರುದ್ದ ಕಣಕ್ಕಿಳಿಯಲಿದೆ. ಕಳೆದ ವರ್ಷ ಸ್ಥಗಿತವಾಗಿದ್ದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಕೊನೆಯ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ, ಜುಲೈನಲ್ಲಿ ಆಡಲಿದೆ.

ಇದೀಗ ರೋಹಿತ್ ಶರ್ಮಾ ನಾಯತ್ವದ ಬಗ್ಗೆ ಮಾತನಾಡಿದ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್, ಖಂಡಿತವಾಗಿಯೂ ವಿರಾಟ್ ಕೊಹ್ಲಿಯವರಿಗಿಂತಲೂ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನ ಯಶಸ್ವಿ ನಾಯಕರಾಗುತ್ತಾರೆ. ನಾಯಕನಾಗಿ ಅವರೆಷ್ಟು ಪಂದ್ಯಗಳನ್ನು ಆಡುತ್ತಾರೆ ಎನ್ನುವುದು ಗೊತ್ತಿಲ್ಲ. ಆದರೆ ತಂತ್ರಗಾರಿಯಲ್ಲಿ ಅವರೊಬ್ಬ ನಿಪುಣ ನಾಯಕ. ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಎಲ್ಲಾ ಸರಣಿಗಳನ್ನು ಹೇಗೆ ಕ್ಲೀನ್‌ ಸ್ವೀಪ್ ಮಾಡಿದೆ ಎನ್ನುವುದು ನಾವೆಲ್ಲರು ನೋಡಿದ್ದೇವೆ. ಸರಿಯಾದ ವ್ಯಕ್ತಿಗೆ ಟೀಂ ಇಂಡಿಯಾ ನಾಯಕತ್ವ ಹಸ್ತಾಂತರವಾಗಿದೆ ಎಂದು ಅನಿಸಲಾರಂಭಿಸಿದೆ ಎಂದು ವಾಸೀಂ ಜಾಫರ್ ಹೇಳಿದ್ದಾರೆ.

IPL 2022: ಐಪಿಎಲ್ ಆರಂಭಕ್ಕೂ ಮುನ್ನ ಎದುರಾಳಿ ಬ್ಯಾಟರ್‌ಗಳಿಗೆ ಖಡಕ್ ವಾರ್ನಿಂಗ್ ನೀಡಿದ ಹರ್ಷಲ್ ಪಟೇಲ್..!

ವಿರಾಟ್ ಕೊಹ್ಲಿ (Virat Kohli) ಭಾರತ ಕ್ರಿಕೆಟ್ ಕಂಡಂತಹ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ನಂ.1 ಸ್ಥಾನಕ್ಕೇರಿತ್ತು. ಇದರ ಜತೆಗೆ ಭಾರತ ಪರ ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ನಾಯಕ ಎನ್ನುವ ಕೀರ್ತಿ ವಿರಾಟ್ ಕೊಹ್ಲಿಗಿದೆ. ಇದಷ್ಟೇ ಅಲ್ಲದೇ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಏಷ್ಯಾದ ಮೊದಲ ನಾಯಕ ಎನ್ನುವ ಹಿರಿಮೆ ಕೂಡಾ ವಿರಾಟ್ ಕೊಹ್ಲಿಗಿದೆ. 

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು ಸೋಲುತ್ತಿದ್ದಂತೆಯೇ ವಿರಾಟ್ ಕೊಹ್ಲಿ ದಿಢೀರ್ ಎನ್ನುವಂತೆ ಟೆಸ್ಟ್ ತಂಡದ ನಾಯಕತ್ವಕ್ಕೆ ಗುಡ್‌ ಬೈ ಹೇಳಿದ್ದರು. ಹೀಗಾಗಿ ಬಿಸಿಸಿಐ ಆಯ್ಕೆ ಸಮಿತಿಯು ಮೂರು ಮಾದರಿಯ ಭಾರತೀಯ ಕ್ರಿಕೆಟ್‌ ತಂಡಕ್ಕೆ ಒಬ್ಬನೇ ನಾಯಕನಿರಲಿ ಎನ್ನುವ ಉದ್ದೇಶದಿಂದ ರೋಹಿತ್ ಶರ್ಮಾ ಅವರಿಗೆ ಭಾರತ ಟೆಸ್ಟ್ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ. ರೋಹಿತ್ ಶರ್ಮಾ ತಮಗೆ ಸಿಕ್ಕಿದ ನಾಯಕತ್ವವನ್ನು ಎರಡು ಕೈಗಳಿಂದ ಬಾಚಿಕೊಂಡಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿದೆ.

ಸದ್ಯ ರೋಹಿತ್ ಶರ್ಮಾ 14ನೇ ಆವೃತ್ತಿಯ ಐಪಿಎಲ್‌ (IPL 2022) ಟೂರ್ನಿಗೆ ಸಜ್ಜಾಗುತ್ತಿದ್ದು, ಮಾರ್ಚ್‌ 27ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡವು 5 ಬಾರಿ ಚಾಂಪಿಯನ್ ಆಗಿರುವುದನ್ನು ಸ್ಮರಿಸಬಹುದಾಗಿದೆ.

Latest Videos
Follow Us:
Download App:
  • android
  • ios