ಅಭಿನವ್ ಹೆಜ್ಜೆ ಅನುಕರಿಸಿದ್ದೆ ಎಂದ ನೀರಜ್: ಬಿಂದ್ರಾ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಫಿದಾ!
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್
* ಐತಿಹಾಸಿಕ ಗೆಲುವಿನ ಬಳಿಕ ಬಿಂದ್ರಾರನ್ನು ಹೊಗಳಿದ್ದ ಚಿನ್ನದ ಹುಡುಗ
* ಬೀರಜ್ ಮಾತುಗಳಿಗೆ ಧನ್ಯವಾದ ಆದರೆ..... ಬಿಂದ್ರಾ ಉತ್ತರಕ್ಕೆ ನೆಟ್ಟಿಗರು ಫಿದಾ
ನವದೆಹಲಿ(ಆ.10): ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಏಷಿಯಾನೆಟ್‌ಗೆ ಪ್ರತಿಕ್ರಿಯಿಸಿದ್ದ ನೀರಜ್ ಚೋಪ್ರಾ ಅಭಿನವ್ ಬಿಂದ್ರಾ ಕ್ಲಬ್‌ಗೆ ಸೇರುವ ಬಗ್ಗೆ ಮಾತನಾಡಿದ್ದರು. ಅಲ್ಲದೇ 'ಅಭಿನವ್ ಬಿಂದ್ರಾ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತದ ಮೊದಲ ಚಿನ್ನದ ಪದಕ ಗೆದ್ದ ಒಬ್ಬ ಕ್ರೀಡಾಪಟು, ಇಂದು ಅದೇ ಸಾಲಿಗೆ ಸೇರುತ್ತಿರುವುದು ಕನಸಿನಂತೆ ಭಾಸವಾಗುತ್ತಿದೆ. ಅವರು ಭಾರತದ ಒಂದು ಚಿಂತನೆಯನ್ನು ಬದಲಾಯಿಸಿದ್ದಾರೆ, ನಮ್ಮ ದೇಶವು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಬಹುದು ಎಂದು ತೋರಿಸಿಕೊಟ್ಟಿದ್ದರು. ಅವರ ಹೆಜ್ಜೆಯನ್ನೇ ಅನುಸಿ ಇಂದು ನಾನು ಈ ವಿಜಯವನ್ನು ಪಡೆದುಕೊಂಡಿದ್ದೇನೆ ಎಂದಿದ್ದರು. ಸದ್ಯ ನೀರಜ್ ಈ ಮಾತುಗಳಿಗೆ ಬಿಂದ್ರಾ ಪ್ರತಿಕ್ರಿಯಿಸಿದ್ದಾರೆ.
ಟೋಕಿಯೋ 2020: ಬೆಳ್ಳಿಯೊಂದಿಗೆ ಆರಂಭ, ಚಿನ್ನದೊಂದಿಗೆ ಮುಕ್ತಾಯ!
ಆದರೀಗ ನೀರಜ್ ಈ ಪ್ರತಿಕ್ರಿಯೆ ಬೆನ್ನಲ್ಲೇ ಅಭಿನವ್ ಬಿಂದ್ರಾ ಈ ಬಗ್ಗೆ ಟ್ವಿಟ್ ಮಾಡಿ ನೀರಜ್‌ರವರ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿಸಿದ್ದಾರೆ. ಬಿಂದ್ರಾ ತಮ್ಮ ಟ್ವೀಟ್‌ನಲ್ಲಿ 'ಪ್ರೀತಿಯ ನೀರಜ್ ಚೋಪ್ರಾ ನಿಮ್ಮ ಮಾತುಗಳಿಗೆ ಧನ್ಯವಾದಗಳು. ಆದರೆ ನಿಮ್ಮ ಗೆಲುವು ನಿಮ್ಮ ಕಠಿಣ ಪರಿಶ್ರಮ ಮತ್ತು ದೃಢ ನಿರ್ಧಾರದ ಫಲವಾಗಿದೆ. ಈ ಕ್ಷಣ ನಿಮ್ಮದು! ಆನಂದಿಸಿ ಮತ್ತು ಆಸ್ವಾದಿಸಿ' ಎಂದು ಬರೆದಿದ್ದಾರೆ.
ಆಗಸ್ಟ್ 7 ರಂದು ಟೋಕಿಯೊ ಒಲಿಂಪಿಕ್ಸ್ 2020ನಲ್ಲಿ ಭಾರತದ ಅಥ್ಲೆಟ್, ನೀರಜ್ ಚೋಪ್ರಾ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪ್ದಕ ಗಳಿಸಿ ಇತಿಹಾಸ ಸೃಷ್ಟಿಸಿದ್ದರು. ಈ ಮೂಲಕ ಅಭಿನವ್ ಬಿಂದ್ರಾ ಬಳಿಕ ಸಿಂಗಲ್ಸ್ ಸ್ಪರ್ಧೆಯಲ್ಲಿ ದೇಶಕ್ಕಾಗಿ ಚಿನ್ನದ ಪದಕ ಗೆದ್ದ ಎರಡನೇ ಅಥ್ಲೀಟ್ ಎನಿಸಿಕೊಂಡಿದ್ದರು. ಇದಷ್ಟೇ ಅಲ್ಲದೇ, ಟ್ರ್ಯಾಕ್ ಮತ್ತು ಫೀಲ್ಡ್ ನಲ್ಲಿ ಮೊದಲ ಬಾರಿ ಪದಕ ಗೆದ್ದ ಭಾರತದ ಏಕೈಕ ಕ್ರೀಡಾಪಟು ಎಂಬ ಹೆಗ್ಗಳಿಕೆಗೂ ನೀರಜ್ ಪಾತ್ರರಾಗಿದ್ದಾರೆ. ಅವರು ಜಾವೆಲಿನ್ ಎಸೆತದ ಫೈನಲ್ ನಲ್ಲಿ 87.58 ಮೀಟರ್ಸ್ ಜಾವೆಲಿನ್ ಎಸೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.
ಇದಕ್ಕೂ ಮುನ್ನ ಮೊದಲು, 2008 ರ ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪುರುಷರ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಮೊದಲ ವೈಯಕ್ತಿಕ ಚಿನ್ನದ ಪದಕವನ್ನು ಅಭಿವನ್ ಬಿಂದ್ರಾ ಗೆದ್ದಿದ್ದರು ಎಂಬುವುದು ಉಲ್ಲೇಖನೀಯ