ವಿಶ್ವ ಸ್ಕೀ ಚಾಂಪಿಯನ್‌ಶಿಪ್ ಇಟಲಿ; ಭಾರತದಿಂದ ಅಂಚಲ್ ಠಾಕೂರ್ ಸ್ಪರ್ಧೆ!
ಪ್ರತಿಷ್ಠಿತ ವಿಶ್ವ ಸ್ಕೀ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಭಾರತದ ಅಂಚಲ್ ಠಾಕೂರ್ ಸ್ಪರ್ಧಿಸುತ್ತಿದ್ದಾರೆ. ಹಲವು ದಾಖಲೆ ಬರೆದಿರುವ ಅಂಚಲ್ ಮತ್ತೊಂದು ಪದಕದ ಮೇಲೆ ಕಣ್ಣಿಟ್ಟಿದ್ದಾರೆ.
ಇಟಲಿ(ಫೆ.21): ಅಂತಾರಾಷ್ಟ್ರೀಯ ಸ್ಕೀ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದಕೊಟ್ಟ ಕೀರ್ತಿಗೆ ಅಂಚಲ್ ಠಾಕೂರ್ ಪಾತ್ರರಾಗಿದ್ದಾರೆ. ಹಿಮಾಚಲ ಪ್ರದೇಶದ ಅಂಚಲ್ ಠಾಕೂರ್ ಇದೀಗ ಇಟಲಿಯಲ್ಲಿ ನಡೆಯುತ್ತಿರುವ ವಿಶ್ವ ಸ್ಕೀ ಚಾಂಪಿಯನ್ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
"
ಪ್ರತಿಷ್ಠಿತ ಚಾಂಪಿಯನ್‌ಶಿಪ್‌ನಲ್ಲಿ 107 ಸ್ಪರ್ಧಿಗಳ ಪೈಕಿ 65ನೇ ಸ್ಥಾನ ಪಡೆದು ಮುನ್ನಗ್ಗುತ್ತಿರುವ ಅಂಚಲ್ ಠಾಕೂರ್, ಹಲವು ಪ್ರಮುಖ ಘಟ್ಟದ ಸ್ಪರ್ಧೆಗಳಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. 2018ರ ಜನವರಿಯಲ್ಲಿ ಟರ್ಕಿಯಲ್ಲಿ ನಡೆದ ಸ್ಕೀ ಚಾಂಪಿಯನ್‌ಶಿಪ್‌ನಲ್ಲಿ ಅಂಚಲ್ ಠಾಕೂರ್, ಕಂಚಿನ ಪದಕ ಪಡೆದು ಮಿಂಚಿದ್ದರು.
ಸ್ಕೀಯಿಂಗ್’ನಲ್ಲಿ ಇತಿಹಾಸ ಬರೆದ ಅಂಚಲ್ ತಂದೆಯಿಂದ ಮೋದಿಗೆ ಪ್ಯಾರಾಗ್ಲೈಡಿಂಗ್ ಪಾಠ
ಸ್ಕೀ ಚಾಂಪಿಯನ್‌ಶಿಪ್‌ನಿಂದ ದೂರವೇ ಉಳಿದಿದ್ದ ಭಾರತ ಇದೀಗ ಅಂಚಲ್ ಠಾಕೂರ್ ಮೂಲಕ ಭರ್ಜರಿಯಾಗಿ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಎಂಟ್ರಿಕೊಟ್ಟಿದೆ. ಅಂಚಲ್ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಕೊಂಡಾಡಿದ್ದರು
.
ಅಂಚಲ್ ಠಾಕೂರ್ ತಂದೆ ರೋಶನ್ ಲಾಲ್ ಠಾಕೂರ್ ಪ್ರಧಾನಿ ನರೇಂದ್ರ ಮೋದಿಗೆ ಪ್ಯಾರಾ ಗ್ಲೈಡಿಂಗ್ ಗುರುವಾಗಿದ್ದಾರೆ. ಮನಾಯಲ್ಲಿ ರೋಶನ್ ಲಾಲ್ ನಡೆಸುತ್ತಿರುವ ಪ್ಯಾರಾ ಗ್ಲೈಡಿಂಗ್ ತರೇಬೇತಿ ಸಂಸ್ಥೆಯಲ್ಲಿ ಮೋದಿ ಪ್ಯಾರಾಗ್ಲೈಡಿಂಗ್ ಅಭ್ಯಾಸ ಮಾಡಿದ್ದರು. 1997ರಲ್ಲಿ ಮೋದಿ ಹಿಮಾಚಲ ಪ್ರದೇಶದ ಬಿಜೆಪಿ ಉಸ್ತುವಾರಿಯಾಗಿದ್ದರು. ಈ ವೇಳೆ ಪ್ಯಾರಾಗ್ಲೈಡಿಂಗ್ ಕಲಿಯುವ ಪ್ರಯತ್ನ ಮಾಡಿದ್ದರು.