ಕೇವಲ 5 ನಿಮಿಷದಲ್ಲಿ ಒಂದು ಮೈಲಿ ದೂರ ಓಡಿದ 9 ತಿಂಗಳ ತುಂಬು ಗರ್ಭಿಣಿ..! ಸಾಧಕಿಗೊಂದು ಸಲಾಂ
* 9 ತಿಂಗಳ ಗರ್ಭಿಣಿಯಿಂದ ಒಂದು ಮೈಲು ಓಟದ ಸ್ಪರ್ಧೆ ಪೂರ್ಣ
* ಕೇವಲ 5 ನಿಮಿಷದಲ್ಲಿ ಒಂದು ಮೈಲು ದೂರ ಓಡಿದ ತುಂಬು ಗರ್ಭಿಣಿ
* ತಮ್ಮದೇ ಹೆಸರಿನಲ್ಲಿದ ದಾಖಲೆ ಮುರಿದ ಮೆಕೆನ್ನಾ ಮೈಲರ್
ಕ್ಯಾಲಿಫೋರ್ನಿಯಾ(ಮಾ.21): ಸಾಮಾನ್ಯವಾಗಿ 9 ತಿಂಗಳು ಗರ್ಭಿಣಿ ಎಂದರೆ ಮಹಿಳೆಯರು ಸಾಮಾನ್ಯವಾಗಿ ವಿಶ್ರಾಂತಿಯನ್ನು ಬಯಸುತ್ತಾರೆ. ಯಾಕೆಂದರೆ ಅವರು ಮಗುವನ್ನು ಹೆರುವ ಹೊಸ್ತಿಲಲ್ಲಿರುತ್ತಾರೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ವಿಶ್ರಾಂತಿಯ ಮೊರೆ ಹೋಗುತ್ತಾರೆ. ಆದರೆ ಮಕೆನ್ನಾ ಮೈಲರ್ ಎನ್ನುವ ತುಂಬು ಗರ್ಭಿಣಿ ಮಹಿಳೆಯೊಬ್ಬರು, ವೃತ್ತಿಪರ ಅಥ್ಲಿಟ್‌ವೊಬ್ಬರು ಸ್ಪರ್ಧೆಗೆ ಸಜ್ಜಾಗುವ ರೀತಿಯಲ್ಲಿ ಓಡಿ ಗಮನ ಸೆಳೆದಿದ್ದಾರೆ.
ಹೌದು, ನಿಮಗೆಲ್ಲರಿಗೂ ಅಚ್ಚರಿ ಎನಿಸಿದರು, ಇದು ಸತ್ಯ. ಕ್ಯಾಲಿಫೋರ್ನಿಯಾದಲ್ಲಿ ನಡೆದ ಓಟದ ಸ್ಪರ್ಧೆಯೊಂದರಲ್ಲಿ ತುಂಬು ಗರ್ಭಿಣಿಯೊಬ್ಬರು ಒಂದು ಮೈಲು ದೂರವನ್ನು ಕೇವಲ 4 ನಿಮಿಷ 17 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
30 ವರ್ಷದ ಮಹಿಳಾ ಅಥ್ಲಿಟ್, ಓರ್ವ ವೃತ್ತಿಪರ ಮಿಡ್ಲ್ ಡಿಸ್ಟೆನ್ಸ್ ರನ್ನರ್ ಆಗಿದ್ದು, 2020ರಲ್ಲಿ ತಮ್ಮ ಮೊದಲ ಪ್ರಗ್ನೆನ್ಸಿಯಲ್ಲಿಯೂ ನಿರಂತರವಾಗಿ ರನ್ನಿಂಗ್ ಅಭ್ಯಾಸ ನಡೆಸಿದ್ದರು. ಆಗ ಆಕೆ ಗರ್ಭಿಣಿ ಮಹಿಳೆ ಓಡಲು ಸಾಧ್ಯವೇ ಎಂದು ತಿಳಿಯಲು ಓಡಿ 5 ನಿಮಿಷ 25 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು. ಇದೀಗ ತಮ್ಮ ಎರಡನೇ ಪ್ರಯತ್ನದಲ್ಲಿ, ಈ ಮೊದಲು ನಿರ್ಮಿಸಿದ್ದ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಗರ್ಭಿಣಿಯಾಗಿದ್ದಾಗ ಕಠಿಣ ಅಭ್ಯಾಸವನ್ನು ನಡೆಸಬಾರದು ಎಂದು ನನ್ನ ಸುತ್ತಮುತ್ತಲಿನ ಜನರು ಹೇಳುತ್ತಲೇ ಇದ್ದರು. ಆದರೆ ನಾನು ಅವರ ಮಾತನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಲಿಲ್ಲ. ಈಗ ಎಲ್ಲರೂ ಸುಮ್ಮನಾಗಿದ್ದಾರೆ ಎಂದು ಮಕೆನ್ನಾ ಮೈಲರ್ ಹೇಳಿದ್ದಾರೆ.
"ನಾನು ಪ್ರಗ್ನೆನ್ಸಿಯಲ್ಲಿ ಅಭ್ಯಾಸ ಮಾಡುವುದು ಸಾಮಾನ್ಯ ಎಂದೇ ಭಾವಿಸಿದ್ದೆ. ಆದರೆ ನನ್ನ ಸುತ್ತಮುತ್ತಲಿನ ಜನರು, ಇದು ಸಾಮಾನ್ಯ ಪ್ರಕ್ರಿಯೆ ಎಂದು ಭಾವಿಸಲಿಲ್ಲ. ಕೆಲವರು ವಂಶವಾಹಿನಿ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಅಂಥವರು ಅದ್ಭುತ ಓಟಗಾರ್ತಿಯಾಗಿದ್ದರೂ, ಸೊಂಟವು ಅವರ ಓಟವನ್ನು ಮಾಡದಂತೆ ತೊಡಕುಂಟು ಮಾಡುತ್ತದೆ ಎನ್ನುವುದರ ಅರಿವು ನನಗಿದೆ ಎಂದು ಮಕೆನ್ನಾ ಮೈಲರ್ ಹೇಳಿದ್ದಾರೆ.
9 ತಿಂಗಳು ಗರ್ಭಿಣಿಯಾದ ಸಂದರ್ಭದಲ್ಲೂ ನೀವು ಹೇಗೆ ಇದನ್ನೆಲ್ಲ ಸಾಧಿಸಿದಿರಿ ಎಂದು ಜನರು ನನ್ನನ್ನು ಕೇಳುತ್ತಾರೆ. ಯಾಕೆಂದರೆ 9 ತಿಂಗಳಾದ ಗರ್ಭಿಣಿಯರು ಹೆಚ್ಚಿನದಾಗಿ ಸೋಫಾದಲ್ಲಿ ವಿಶ್ರಾಂತಿಗೆ ಜಾರುವುದೇ ಹೆಚ್ಚು. ಅದಕ್ಕೆಲ್ಲ ನಾನು ಹೇಳುವುದಿಷ್ಟೇ, ಗರ್ಭಿಣಿಯಾಗುವುದಕ್ಕಿಂತ ಮುಂಚೆ ನಾವು ನಮ್ಮ ದೇಹವನ್ನು ಹೇಗೆ ಇಟ್ಟುಕೊಂಡಿರುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ನಾನು ಗರ್ಭಿಣಿಯಾಗುವುದಕ್ಕಿಂತ ಮುಂಚಿನಿಂದಲೂ ರನ್ನಿಂಗ್ ಮಾಡುತ್ತಿದ್ದೆ. ಹೀಗಾಗಿಯೇ ನನಗದು ಪ್ರಗ್ನೆನ್ಸಿಯಾದಾಗಲೂ ನೆರವಿಗೆ ಬಂತು ಎಂದು 30 ವರ್ಷದ ಮಕೆನ್ನಾ ಮೈಲರ್ ಹೇಳಿದ್ದಾರೆ.
ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಕ್ವಾರ್ಟರ್‌ಗೆ ಲವ್ಲೀನಾ, ಸಾಕ್ಷಿ
ಮಕೆನ್ನಾ ಮೈಲರ್, ಸಾಮಾನ್ಯವಾಗಿ 5 ಕಿಲೋ ಮೀಟರ್ ಹಾಗೂ 10 ಕಿಲೋ ಮೀಟರ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಲೇ ಬಂದಿದ್ದಾರೆ. ಅವರು ಹೆಚ್ಚಿನ ಅಭ್ಯಾಸ ನಡೆಸುವ ಸಂದರ್ಭದಲ್ಲಿ ದಿನಕ್ಕೆ ಎರಡು ಬಾರಿ ತಮ್ಮ ಗುರಿಯನ್ನು ತಲುಪುತ್ತಿದ್ದರು. ಇದೀಗ ತಮ್ಮ ಎರಡನೇ ಪ್ರಗ್ನೆನ್ಸಿಯ ಪ್ರಯತ್ನದಲ್ಲಿ ಕೇವಲ 4 ನಿಮಿಷ 17 ಸೆಕೆಂಡ್‌ಗಳಲ್ಲಿ ಒಂದು ಮೈಲು ಗುರಿ ತಲುಪುವ ಮೂಲಕ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ನಾನು ಪ್ರಗ್ನೆನ್ಸಿಯಲ್ಲಿದ್ದಾಗ ಓಡುವಾಗ ಮೊದಲ ಬಾರಿಗೆ ಒಂದು ರೀತಿ ಜೋಕ್ ಮಾಡಲಾಗುತ್ತಿತ್ತು. ನಾವು ಕೂಡಾ ಇದೊಂದು ರೀತಿ ಫನ್ನಿಯಾಗಿಯೇ ತೆಗೆದುಕೊಂಡಿದ್ದೆವು. ಆದರೆ ಇದು ಈ ಮಟ್ಟಿಗೆ ವೈರಲ್ ಆಗುತ್ತದೆ ಎಂದು ನಾವು ಕೂಡಾ ಭಾವಿಸಿರಲಿಲ್ಲ. ಇದೀಗ ಎಲ್ಲರೂ ಸಕಾರಾತ್ಮಕವಾಗಿಯೇ ಸ್ಪಂದಿಸುತ್ತಿದ್ದಾರೆ ಎಂದು ಮಕೆನ್ನಾ ಮೈಲರ್ ಹೇಳಿದ್ದಾರೆ.