Musa Yamak Death ಬಾಕ್ಸಿಂಗ್ ರಿಂಗ್‌ನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಸೋಲಿಲ್ಲದ ಸರದಾರ ಜರ್ಮನ್ ಬಾಕ್ಸರ್!
- ವಿಶ್ವ ಬಾಕ್ಸಿಂಗ್‌ಗೆ ಮತ್ತೊಂದು ಆಘಾತ, ಮೂಸಾ ಯಮಾಕ್ ನಿಧನ
- ಬಾಕ್ಸಿಂಗ್ ಆರಂಭಗೊಂಡ ಕೆಲ ಕ್ಷಣಗಳಲ್ಲೇ ಕುಸಿದು ಬಿದ್ದ ಮೂಸಾ
- ಹೃದಯಾಘಾತದಿಂದ ಜನಪ್ರಿಯ ಬಾಕ್ಸರ್ ಮೂಸಾ ಯಮಾಕ್ ನಿಧನ
ಜರ್ಮನ್(ಮೇ.19): ವಿಶ್ವ ಬಾಕ್ಸಿಂಗ್ ಮತ್ತೊಂದು ಸ್ಟಾರ್ ಬಾಕ್ಸರ್‌ನ ಕಳೆದುಕೊಂಡಿದೆ. ಇದುವರೆಗೆ ಸೋಲೇ ಕಾಣದ ಜರ್ಮನ್ ಬಾಕ್ಸರ್ ಮೂಸಾ ಯಮಾಕ್ ಬಾಕ್ಸಿಂಗ್ ರಿಂಗ್‌ನಲ್ಲೇ ಕುಸಿದು ಬಿದ್ದಿ ಸಾವನ್ನಪ್ಪಿದ್ದಾರೆ. ಪಂದ್ಯದ ನಡೆವೆ ಮೂಸಾ ಯಮಕಾ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಮ್ಯೂನಿಚ್‌ನಲ್ಲಿ ನಡೆಯುತ್ತಿದ್ದ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಕೂಟದಲ್ಲಿ ಈ ಘಟನೆ ನಡೆದಿದೆ. 38ರ ಹರೆಯದ ಮೂಸಾ ಯಮಾಕ್, ಮತ್ತೊಂದು ಗೆಲುವಿನ ಆತ್ಮವಿಶ್ವಾಸದೊಂದಿದೆ ಬಾಕ್ಸಿಂಗ್ ರಿಂಗ್‌ಗೆ ಆಗಮಿಸಿದ್ದರು. ಎದುರಾಳಿ ಉಗಾಂಡಾದ ಹಮ್ಜಾ ವಾಂಡೆರಾ ವಿರುದ್ಧ ಬಾಕ್ಸಿಂಗ್ ರಿಂಗ್‌ಗೆ ಇಳಿದ ಮೂಸಾ ದಿಢೀರ್ ಕುಸಿದು ಬಿದ್ದಿದ್ದಾರೆ. ಪಂದ್ಯದ ನಡುವೆ ಮೂಸ ರಿಂಗ್‌ನಲ್ಲೇ ಕುಸಿದು ಬಿದ್ದರು.
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಆಕಾಶ್ ಕುಮಾರ್‌ಗೆ ಒಲಿದ ಕಂಚು
ತಕ್ಷಣವೇ ಸಿಬ್ಬಂದಿಗಳು ಆಗಮಿಸಿ ಮೂಸಾಗೆ ತುರ್ತು ಚಿಕಿತ್ಸೆ ನೀಡಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲೇ ಮೂಸ ಪ್ರಾಣ ಪಕ್ಷಿ ಹಾರಿ ಹೋಗಿದೆ. ಹೃದಯಾಘಾತದಿಂದ ಮೂಸಾ ಯಮಾಕ್ ನಿಧನರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
3ನೇ ಸುತ್ತಿನಲ್ಲಿ ಯಮಾಕ್ ಎದುರಾಳಿ ವಾಂಡೆರಾ ಎದರಿಸಲು ಸಜ್ಜಾಗಿದ್ದರು. ಎರಡನೇ ಸುತ್ತಿನಲ್ಲಿ ವಾಂಡೆರ ಬಿಗ್ ಪಂಚ್ ಮೂಸಾಗೆ ತೀವ್ರ ಹಿನ್ನಡೆ ತಂದಿತ್ತು. ಮೂರನೇ ಸುತ್ತಿನ ಆರಂಭಕ್ಕೂ ಕೆಲ ಕ್ಷಣಗಳ ಮುನ್ನವೇ ಹೃದಯಾಘಾತದಿಂದ ಮೂಸಾ ಯಮಾಕ್ ಕುಸಿದು ಬಿದ್ದಿದ್ದಾರೆ.
ಪ್ರತಿ ಬಾಕ್ಸಿಂಗ್ ಹೋರಾಟದಲ್ಲಿ ಯಮಾಕ್ ಪ್ರಬಲ್ ಪಂಚ್ ನೀಡಿ ಎದುರಾಳಿಗಳನ್ನು ಆರಂಭದಲ್ಲೇ ಕುಗ್ಗಿಸುತ್ತಿದ್ದರು. ಈ ಬಾರಿ ವಾಂಡೆರಾ ಅವರ ಪ್ರಬಲ ಪಂಚ್ ಮೂಸಾ ತೀವ್ರವಾಹಿ ಹಿನ್ನಡೆ ತಂದಿತ್ತು. ಎರಡನೇ ಸುತ್ತಿನ ಬಳಿಕ ವಿಶ್ರಾಂತಿ ಸಮಯದಲ್ಲಿ ಚೇರ್‌ನಲ್ಲಿ ಕುಳಿದ ಮೂಸಾ, ಚೇತರಿಸಿಕೊಂಡು ಬಳಿಕ 3ನೇ ಸುತ್ತಿಗೆ ಪ್ರವೇಶಿಸಿದರು.
2017ರಲ್ಲಿ ವೃತ್ತಿಪರ ಬಾಕ್ಸಿಂಗ್ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಮೂಸಾ ಯಮಾಕ್ ಕಳೆದ ವರ್ಷ WBFed ಅಂತರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡಿದ್ದರು. ಇದು ಮೂಸಾ ಯಮಾಕ್ ವೃತ್ತಿ ಜೀವನದಲ್ಲಿ ಅತ್ಯುನ್ನತ ಪ್ರಶಸ್ತಿಯಾಗಿದೆ. ಚಾಂಪಿಯನ್
ಜರ್ಮನ್ ಚಾಂಪಿಯನ್, ಯೂರೋಪಿಯನ್ ಚಾಂಪಿಯನ್ಯ ಏಷ್ಯನ್ ಚಾಂಪಿಯನ್ ಸೇರಿದಂತೆ ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ. 8-0 ವಿಶ್ವ ರೆಕಾರ್ಡ್ ಹೊಂದಿರು ಮೂಸಾ ಸೋಲಿಲ್ಲದ ಸರದಾರ ಎಂದೇ ಗುರುತಿಸಿಕೊಂಡಿದ್ದಾರೆ.ಮೂಲತಃ ಟರ್ಕಿಶ್ ಜರ್ಮನ್ ಬಾಕ್ಸರ್ ಆಗಿದ್ದ ಮೂಸಾ ಯಮಾಕ್ 75ಕ್ಕೂ ಹೆಚ್ಚು ವೃತ್ತಿಪರ ಬಾಕ್ಸಿಂಗ್ ಪಂದ್ಯಗಳನ್ನು ಆಡಿದ್ದಾರೆ. ಟರ್ಕಿಯಲ್ಲಿ ಹುಟ್ಟಿ ಶಾಲಾ ದಿನಗಳನ್ನು ಕಳೆದ ಮೂಸಾ ಯಮಾಕ್ 12ನೇ ವರ್ಷದಲ್ಲಿ ಜರ್ಮನಿಗೆ ಬಂದು ನೆಲೆಸಿದರು.