Asianet Suvarna News Asianet Suvarna News

ಸುವರ್ಣನ್ಯೂಸ್ ಬಿಗ್ ಇಂಪ್ಯಾಕ್ಟ್: ಮೇವಿನ ಪರಿಶೀಲನೆ ನಡೆಸಿದ ಜಿ.ಪಂ ಅಧ್ಯಕ್ಷರು

ಸುವರ್ಣ ನ್ಯೂಸ್ ವರದಿ ಮಾಡಿದ ಬೆನ್ನಲ್ಲೇ ಸ್ಥಳಕ್ಕೆ  ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮುನಿರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ  ಕೊಳೆಯುತ್ತಿದ್ದ ಮೇವಿನ ರಾಶಿ ಪರಿಶೀಲನೆ ನಡೆಸಿದ ಅಧ್ಯಕ್ಷ ಮುನಿರಾಜು ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.  

ZP President Takes Stock of Cattle Feed After Suvarna News Reportage

ಆನೇಕಲ್ (ಮಾ.14): ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ರಾಮಕೃಷ್ಣಾಪುರದಲ್ಲಿ   ಕೊಳೆಯುತ್ತಿರುವ ಟನ್​'ಗಟ್ಟಲೆ ಮೇವಿನ ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು.

ವರದಿ ಮಾಡಿದ ಬೆನ್ನಲ್ಲೇ ಸ್ಥಳಕ್ಕೆ  ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮುನಿರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ  ಕೊಳೆಯುತ್ತಿದ್ದ ಮೇವಿನ ರಾಶಿ ಪರಿಶೀಲನೆ ನಡೆಸಿದ ಅಧ್ಯಕ್ಷ ಮುನಿರಾಜು ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.  

ರಾಜ್ಯದಲ್ಲಿ  ಭೀಕರ ಬರಗಾಲ, ಮಳೆ ಇಲ್ಲದೆ ಬೆಳೆಯೂ ಇಲ್ಲ. ದನಕರುಗಳು ಮೇವಿಲ್ಲದೆ ಅಸ್ಥಿಪಂಜರದಂತೆ ಬಡಕಲಾಗಿ ಸಾಯುತಿವೆ. ಆದರೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ರಾಮಕೃಷ್ಣಾಪುರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೇವು ಸಂಗ್ರಹವಾಗಿದೆ.

ಟನ್​​​ಗಟ್ಟಲೆ  ರಾಸುಗಳ ಫುಡ್ ಮೂಟೆಗಳು ಒಣಗಿ ಕೊಳೆತು ನಾರುತ್ತಿರುವ ಬಗ್ಗೆ ಸುವರ್ಣನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು.

Latest Videos
Follow Us:
Download App:
  • android
  • ios