‘ನಂಬಿದವರನ್ನು ಮುಗಿಸುವುದೇ ದೇವೇಗೌಡ್ರ ಕೆಲಸ’

First Published 21, Mar 2018, 8:49 PM IST
Zameer Ahmed Khan Slams HD Kumaraswamy
Highlights
  • ಅವರ  ಬೆದರಿಕೆಗೆ ನಾನು ಬಗ್ಗುವುದಿಲ್ಲ
  • ಯಾವುದೇ ಕಾರಣಕ್ಕೂ ಮತ್ತೆ ಜೆಡಿಎಸ್​​ಗೆ ಹೋಗುವುದಿಲ್ಲ

ಮೈಸೂರು: ನಂಬಿದವರನ್ನ ಮುಗಿಸುವುದೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ್ರು ಹಾಗೂ ಕುಮಾರಸ್ವಾಮಿ ಅವರ ಕೆಲಸ. ಅದನ್ನೇ ಇದುವರೆಗೂ ಮಾಡಿಕೊಂಡು ಬರುತ್ತಿದ್ದಾರೆ. ನನಗೆ ಬೇರೆಯವರಿಂದ‌ ಬೆದರಿಕೆ ಹಾಕಿಸುತ್ತಿದ್ದಾರೆ. ಅವರ ಬೆದರಿಕೆಗೆ ನಾನು ಬಗ್ಗುವುದಿಲ್ಲ ಅಂತಾ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಮೈಸೂರಲ್ಲಿ ಹೇಳಿಕೆ ನೀಡಿದ್ದಾರೆ.

ಪುನಃ ಪಕ್ಷಕ್ಕೆ‌ ಬರುವಂತೆ ಹೇಳುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಮತ್ತೆ ಜೆಡಿಎಸ್​​ಗೆ ಹೋಗುವುದಿಲ್ಲ. ನಾನು ಈಗಾಗಲೇ ಕಾಂಗ್ರೆಸ್ ಜೊತೆ ಇದ್ದೇನೆ. ಇದೇ ತಿಂಗಳು 25 ರಂದು ರಾಹುಲ್ ಗಾಂಧಿ ಹಾಗೂ ಸಿಎಂ‌ ಸಿದ್ದರಾಮಯ್ಯ ನವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತೇನೆ, ಎಂದು ಅವರು ಹೇಳಿದ್ದಾರೆ.

ರಾಜ್ಯಸಭಾ ಚುನಾವಣೆ : ನ್ಯಾಯಾಲಯದ ಅದೇಶಕ್ಕೆ ನಾವು ತಲೆ ಬಾಗುತ್ತೇವೆ. ಈ ಸಂರ್ಧಭದಲ್ಲಿ ಈ ಹೋರಾಟದ ಅವಶ್ಯಕತೆ ಇಲ್ಲ. ಅದರ ಜೊತೆಗೆ ವಿಪ್ ಜಾರಿ ಮಾಡಿದ್ದಾರೆ. ಬಂಡಾಯ ಶಾಸಕರಿಗೆ ಬ್ಲಾಕ್ ಮೇಲ್ ತಂತ್ರ ರೂಪಿಸುತ್ತಿದ್ದಾರೆ. ಜೆಡಿಎಸ್ ವರಿಷ್ಠರು ನನ್ನನ್ನು ಸೋಲಿಸಲು ಯಾವ ತಂತ್ರ ರೂಪಿಸಿದರೂ ಪ್ರಯೋಜನವಿಲ್ಲ. ಏನೇ ಆದರೂ ರಾಜ್ಯ ಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆಲುವಿಗೆ ಅವಕಾಶ ಇಲ್ಲ, ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.

ದೇವೇಗೌಡ್ರು ಬಂಡಾಯ ಶಾಸಕರ ವಿರುದ್ದ ದ್ವೇಷ ರಾಜಕರಣ ಮಾಡುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಬರುತ್ತೆ ಎಂಬ ವಿಶ್ವಾಸ ಇದೆ. ನನ್ನ ಬೆಂಬಲಿಗರು ಕೂಡ ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಾರೆ ಅಂತಾ ಜಮೀರ್​ ಅಹಮದ್​ ಹೇಳಿದರು.

loader