ಬಾಲಿವುಡ್​ನ ದಂಗಲ್​​​ ಚಿತ್ರದ ನಟಿ ದೆಹಲಿಯಿಂದ ಮುಂಬೈಗೆ ತೆರಳುವಾಗ ಲೈಂಗಿಕ ಕಿರುಕುಳ ಎದುರಿಸಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.  ತಮಗೆ ಆದ  ಸಮಸ್ಯೆಯ ಬಗ್ಗೆ  ನಟಿ ಜೈರಾ ವಾಸೀಂ  ಇನ್​ಸ್ಟಾಗ್ರಾಂನಲ್ಲಿ ಅಳುತ್ತಾ ನೋವು ತೋಡಿಕೊಂಡಿದ್ದಾರೆ.

ನವದೆಹಲಿ(ಡಿ.10): ಬಾಲಿವುಡ್​ನ ದಂಗಲ್​​​ ಚಿತ್ರದ ನಟಿ ದೆಹಲಿಯಿಂದ ಮುಂಬೈಗೆ ತೆರಳುವಾಗ ಲೈಂಗಿಕ ಕಿರುಕುಳ ಎದುರಿಸಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ತಮಗೆ ಆದ ಸಮಸ್ಯೆಯ ಬಗ್ಗೆ ನಟಿ ಜೈರಾ ವಾಸೀಂ ಇನ್​ಸ್ಟಾಗ್ರಾಂನಲ್ಲಿ ಅಳುತ್ತಾ ನೋವು ತೋಡಿಕೊಂಡಿದ್ದಾರೆ. ಅಲ್ಲದೇ ತಾವು ಸಹಾಯ ಕೇಳಿದರೂ ಕೂಡ ಯಾರೂ ಸಹಾಯ ಮಾಡಲಿಲ್ಲ ಎಂದು ನೋವನ್ನು ಹೇಳಿಕೊಂಡಿದ್ದಾರೆ.

ವಿಮಾನದಲ್ಲಿ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೇ ತನಗೆ ಕಿರುಕುಳ ನೀಡಿದ್ದಾಗಿ ಜೈರಾ ಹೇಳಿದ್ದಾರೆ. ಸದ್ಯ ಈ ಪ್ರಕರಣವನ್ನು ರಾಷ್ಟ್ರೀಯ ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿ ವಿಸ್ತಾರ ಏರ್​​ಲೈನ್ಸ್​ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧಾರ ಮಾಡಿದೆ.